Dhruva Sarja : ಬೆಂಗಳೂರು ಬಿಡುವ ಯೋಚನೆಯಲ್ಲಿದ್ದಾರೆ ಧೃವ ಸರ್ಜಾ: ಇದಕ್ಕೆ ಕಾರಣವೇನು ಗೊತ್ತಾ..?

By Infoflick Correspondent

Updated:Saturday, June 11, 2022, 21:18[IST]

Dhruva Sarja : ಬೆಂಗಳೂರು ಬಿಡುವ ಯೋಚನೆಯಲ್ಲಿದ್ದಾರೆ ಧೃವ ಸರ್ಜಾ: ಇದಕ್ಕೆ ಕಾರಣವೇನು ಗೊತ್ತಾ..?

ಅಣ್ಣನನ್ನು ಬಿಟ್ಟಿರಲಾಗದ ಧೃವ ಸರ್ಜಾ ಈಗ ಜೀವನದಲ್ಲಿ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಣ್ಣನಿಗಾಗಿ ಧೃವ ಸರ್ಜಾ ಅರಮನೆಯ ನ್ನು ಕಟ್ಟಿಸುತ್ತಿದ್ದಾನೆ. ಅಂದರೆ, ಸಮಾಧಿಯನ್ನು ಕಟ್ಟಿಸಿದ್ದು, ಅಲ್ಲಿ ಮಿನಿ ಮ್ಯೂಸಿಯಂ ಕೂಡ ಮಾಡಿದ್ದಾನೆ. ಅಣ್ಣನ ಬಾಲ್ಯದ ಫೋಟೋಗಳು, ಸಿನಿಮಾಗಳ ಫೋಟೋಗಳನ್ನು ಇರಿಸಿದ್ದಾನೆ. ಈ ಮೂಲಕ ಅಣ್ಣನ ಸಂಪೂರ್ಣ ನೆನಪನ್ನು ಮಾಸದಂತೆ ನೋಡಿಕೊಳ್ಳುತ್ತಿದ್ದಾನೆ.

ಚಿರಂಜೀವಿ ಸರ್ಜಾ ಹಾಗೂ ಧೃವ ಸರ್ಜಾ ಇಬ್ಬರೂ ಎಂದಿಗೂ ಅಣ್ಣ-ತಮ್ಮರ ರೀತಿ ಬಾಳಿದವರಲ್ಲ. ಒಳ್ಳೆಯ ಸ್ನೇಹಿತರಾಗಿ ಇಬ್ಬರೂ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು. ಅಲ್ಲದೇ, ಚಿರಂಜೀವಿ ಸರ್ಜಾ ಬಹಳ ಸ್ನೇಹ ಜೀವಿಯಾಗಿದ್ದು , ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಆದರೆ ಅಣ್ಣನ ಸಾವು ಧೃವ ಬಾಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈಗಲೂ ಧೃವ ಸರ್ಜಾ ಮಾತ್ರ ತನ್ನ ಅಣ್ಣನ ನೆನಪಿನಿಂದ ಹೊರ ಬಂದಿಲ್ಲ. ವಾರಕ್ಕೊಮ್ಮೆಯಾದರೂ ಅಣ್ಣನ ಸಮಾಧಿ ಬಳಿ ಹೋಗಿ ಕೆಲ ಸಮಯ ಅಲ್ಲೇ ಕಳೆದು, ಕಣ್ಣೀರಿಟ್ಟು ಬರುತ್ತಾನೆ.

ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಯನ್ನು ಅವರ ನೆಚ್ಚಿನ ಸ್ಥಳವಾದ ಬೃಂದಾವನದಲ್ಲಿ ನಡೆಸಲಾಯ್ತು. 4 ಎಕರೆಯಲ್ಲಿರುವ ಈ ಫಾರ್ಮ್ ಹೌಸ್ ಗೆ ಬೃಂದಾವನ ಎಂದು ಹೆಸರಿಡಲಾಗಿದೆ. ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಸಮೀಪದ ಫಾರ್ಮ್ ಹೌಸ್ ನಲ್ಲಿ ಮನೆ ಕಟ್ಟಿ ನೆಮ್ಮದಿಯಾಗಿರಬೇಕೆಂಬುದು ಚಿರಂಜೀವಿ ಅವರ ಕನಸಾಗಿತ್ತು. ಆದರೆ, ಆ ಕನಸನ್ನು ಧೃವ ಸರ್ಜಾ ನನಸು ಮಾಡಲು ಮುಂದಾಗಿದ್ದಾರೆ. ಫಾರ್ಮ್ ಹೌಸ್ ನಲ್ಲಿರುವ ಮನೆಯನ್ನು ಅವರಿಗೆ ಬೇಕಾದಂತೆ ಮರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದಾದ ಬಳಿಕ ಅಲ್ಲಿಗೆ ಹೋಗಿ ಸೆಟಲ್ ಆಗಲು ಯೋಚಿಸಿದ್ದಾರೆ.