ಚಿರಂಜೀವಿ ಸರ್ಜಾ ಕುಟುಂಬದಿಂದ ಸಿಹಿ ಸುದ್ದಿ: ಅಭಿಮಾನಿಗಳೇ ಮಿಸ್ ಮಾಡಿಕೊಳ್ಳಬೇಡಿ..

By Infoflick Correspondent

Updated:Friday, June 24, 2022, 12:38[IST]

ಚಿರಂಜೀವಿ ಸರ್ಜಾ ಕುಟುಂಬದಿಂದ ಸಿಹಿ ಸುದ್ದಿ: ಅಭಿಮಾನಿಗಳೇ ಮಿಸ್ ಮಾಡಿಕೊಳ್ಳಬೇಡಿ..

ನಟ ಚಿರಂಜೀವಿ ಸರ್ಜಾ ಅಜಾನಕ್ ಆಗಿ 2020ರಲ್ಲಿ ಕೊನೆಯುಸಿರೆಳೆದರು. ಆಗ ಮೇಘನಾ ರಾಜ್ 5 ತಿಂಗಳ ಗರ್ಭಿಣಿ ಆಗಿದ್ದರು. ಪತಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದ ಮೇಘನಾ ರಾಜ್ ಬಾಳಲ್ಲಿ ರಾಯನ್ ರಾಜ್ ಸರ್ಜಾ ಜನನ ಹೊಸ ಬೆಳಕನ್ನು ಮೂಡಿಸಿತ್ತು. ಚಿರಂಜೀವಿ ಸರ್ಜಾ ಸಾವಿನಿಂದ ಎರಡೂ ಕುಟುಂಬಗಳಲ್ಲಿ ಮೂಡಿದ್ದ ಕಾರ್ಗತ್ತಲು ಮಗು ರಾಯನ್ ರಾಜ್ ಸರ್ಜಾನಿಂದ ಸರಿದಿತ್ತು. ಇದೀಗ ಮೇಘನಾ ಕೂಡ ಮತ್ತೆ ಕ್ಯಾಮರಾ ಎದುರು ಬರುತ್ತಿದ್ದು, ಚಿರು ನೆನಪಿನಲ್ಲಿ ಎರಡೂ ಕುಟುಂಬಗಳು ಜೀವಿಸುತ್ತಿದ್ದಾರೆ.


ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದ ಮೇಘನಾ ರಾಜ್ ಈಗ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾಗಾಗಿ. ಮಗನ ಭವಿಷ್ಯಕ್ಕಾಗಿ ಮೇಘನಾ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಚಿತ್ರ ಎಂದರೆ ಅದು ರಾಜಮಾರ್ತಾಂಡ. ಇದೀಗ ಬಂದಿರುವ ಸಿಹಿ ಸುದ್ದಿ ಏನೆಂದರೆ, ಚಿರಂಜೀವಿ ಸರ್ಜಾ ನಟಿಸಿದ ಸಿನಿಮಾದಲ್ಲಿ ರಾಯನ್ ರಾಜ್ ಸರ್ಜಾ ನಟಿಸಿದ್ದಾನೆ. ರಾಜಮಾರ್ತಾಂಡ ಚಿತ್ರದಲ್ಲಿ ರಾಯನ್ ರಾಜ್ ಸರ್ಜಾ ಅನ್ನು ಕೂಡ ತೋರಿಸಲಾಗಿದೆ ಎಂದು ಸ್ವತಃ ನಿರ್ಮಾಕರು ಹಾಗೂ ನಿರ್ದೇಶಕರು ತಿಳಿಸಿದ್ದಾರೆ.


ಚಿರು ಉಸಿರು ಚೆಲ್ಲಿದಾಗ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿತ್ತು. ಆದರೆ ಇದಕ್ಕೆ ಡಬ್ಬಿಂಗ್ ಮಾಡುವ ಮುನ್ನವೇ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದರು. ಇದೀಗ ಈ ಚಿತ್ರ ರಿಲೀಸ್ ಗೆ ಸಜ್ಜಾಗಿದ್ದು, ವಾಯ್ಸ್ ಡಬ್ಬಿಂಗ್ ಅನ್ನು ಚಿರಂಜೀವಿ ಸರ್ಜಾ ಸಹೋದರ ಧೃವ ಸರ್ಜಾ ಧ್ವನಿ ನೀಡಿದ್ದಾರೆ. ಇನ್ನು ಸೆಪ್ಟೆಂಬರ್ 2ರಂದು ರಾಜಮಾರ್ತಾಂಡ ಚಿತ್ರ ರಿಲೀಸ್ ಆಗಲಿದ್ದು, ಇದು ಚಿರು ಅಭಿನಯಿಸಿದ ಕೊನೆಯ ಸಿನಿಮಾವಾಗಿದೆ. ರಾಜಮಾರ್ತಾಂಡ ಚಿತ್ರವನ್ನು ಯಾವಾಗ ರಿಲೀಸ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.