Chandrashekhar Guruji : ಬೇನಾಮಿ ಆಸ್ತಿ ವಿಚಾರದಿಂದ ಗುರೂಜಿ ಹತ್ಯೆ ಆಯ್ತಾ..? ಇಲ್ಲಿ ಸತ್ಯವನ್ನು ನೋಡಿ

By Infoflick Correspondent

Updated:Tuesday, July 5, 2022, 21:30[IST]

Chandrashekhar Guruji : ಬೇನಾಮಿ ಆಸ್ತಿ ವಿಚಾರದಿಂದ ಗುರೂಜಿ ಹತ್ಯೆ ಆಯ್ತಾ..? ಇಲ್ಲಿ ಸತ್ಯವನ್ನು ನೋಡಿ

ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ ಹತ್ಯೆ ಆಗಿದೆ. ಹುಬ್ಬಳ್ಳಿಯ ಉಣಕಲ್ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡಗಲೇ ಕಗ್ಗೊಲೆ ಮಾಡಲಾಗಿದೆ. ಹಾಡ ಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದಲಾಗಿದೆ. ಹೊಟೆಲ್ ನ ರಿಸಪ್ಷನ್ ನಲ್ಲಿ ಹತ್ಯೆ ಇಬ್ಬರು ಬಂದು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಇದು ಆಸ್ತಿ ವಿಚಾರಕ್ಕೆ ಆದ ಕೊಲೆ ಎಂಬ ಮಾಹಿತಿ ತಿಳಿದು ಬಂದಿದೆ.

ವಿದ್ಯಾನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಚಾಕುವಿನಿಂದ 60 ಬಾರಿ ಆಯುಧದಿಂದ ತಿವಿದು ಇರಿದು ಪರಾರಿಯಾಗಿದ್ದರು.
ಕೊಲಗೈದ ಕೂಡಲೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಇದೆಲ್ಲವೂ ಸಿಸಿ ಕ್ಯಾಮಾರದಲ್ಲಿ ದಾಖಲಾಗಿದ್ದು,  ಕೇವಲ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೇನಾಮಿ ಆಸ್ತಿ ಶಿಷ್ಯಂದಿರ ವಿಚಾರಕ್ಕೆ ಗುರೂಜಿ ಹಾಗೂ ಶಿಲ್ಯಂದಿರ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

ಇಬ್ಬರು ಆರೋಪಿಗಳು ಕೂಡ ಮಾಜಿ ನೌಕರರೇ ಎಂದು ತಿಳಿಗು ಬಂದಿದೆ. ಗುರೂಜಿಯೇ ಇಬ್ಬರನ್ನೂ ಹೋಟೆಲ್ ಗೆ ಕರೆಯಿಸಿದ್ದರೆಂಬ ಮಾಹಿತಿ ಇದ್ದು, ಮಾತಮಾಡಬೇಕೆಂದುಕೊಂಡಾಗ ಸ್ವಾಮೀಜಿ ಕಾಲಿಗೆ ಬಿದ್ದಂತೆ ನಟಿಸಿ ಚಾಕು ಇರಿದಿದ್ದಾರೆ. ಹಳೆಯ ದ್ವೇಷ ಮತ್ತು ವೈಯಕ್ತಿಕ ವ್ಯವಹಾರ ಕಾರಣದಿಂದ  ಈ ಕೊಲೆ ಮಾಡಲಾಗಿದೆ. ಗುರೂಜಿ ಅವರು ಆಸ್ತಿ ಖರೀದಿಸಿ ಅವರ ಶಿಷ್ಯಂದಿರ ಹೆಸರಲ್ಲಿ ಇಡುತ್ತಿದ್ದರು. ಅದನ್ನು ವಾಪಸ್ ಕೊಡು ಎಂದಾಗ ಈ ರೀತಿ ಮಾಡಿದ್ದಾರೆಂಬ ಮಾಹಿತಿ ದೊರೆತಿದೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆಗಳು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.