ಪ್ರೀತಿಯನ್ನು ಮಾರಾಟ ಮಾಡಿದ್ರಾ ಸೋನು ಶ್ರೀನಿವಾಸ್ ಗೌಡ..!! ಪಾಪ..!!

By Infoflick Correspondent

Updated:Monday, August 15, 2022, 20:08[IST]

ಪ್ರೀತಿಯನ್ನು ಮಾರಾಟ ಮಾಡಿದ್ರಾ ಸೋನು ಶ್ರೀನಿವಾಸ್ ಗೌಡ..!! ಪಾಪ..!!

ಬಿಗ್ ಬಾಸ್ ನಲ್ಲಿ ನಿತ್ಯ ಒಂದೊಂದು ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಜಗಳ, ಮುನಿಸು ಇದ್ದಂತೆಯೇ ಪ್ರೀತಿಯೂ ಇದ್ದೇ ಇರುತ್ತದೆ. ಬಿಗ್ ಬಾಸ್ ಮನೆಯೊಳಗೆ ಸಿಂಗಲ್ ಆಗಿ ಬಂದು ಡಬಲ್ ಆಗಿ ಹೋದ ಕಥೆಗಳೇ ಹೆಚ್ಚು. ಇದೀಗ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನಲ್ಲೂ ಸ್ಪರ್ಧಿಗಳು ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದೊಂದು ರೀತಿ ಟ್ರಯಾಂಗಲ್ ಪ್ರೀತಿ ಎಂದರೆ ತಪ್ಪಾಗೋದಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಮೋಡಿ ಮಾಡುತ್ತಿರುವ ರಾಕೇಶ್ ಅಡಿಗ ಈಗ ಎಲ್ಲರ ಮೆಚ್ಚಿನ ಹುಡುಗ. ರಾಕೇಶ್ ಎಲ್ಲರೊಂದಿಗೂ ಒಂದೇ ಥರಹ ನಡೆದುಕೊಳ್ಳುತ್ತಿದ್ದು, ಹುಡುಗಿಯರ ವಿಚಾರದಲ್ಲಿ ಸ್ವಲ್ಪ ಸಾಫ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹುಡುಗಿಯರು ತಮ್ಮ ಮನಸಲ್ಲಿ ರಾಕೇಶ್ ಜಾಗ ಕೊಡುವಂತೆ ಮಾಡಿದೆ. ಸ್ಪೂರ್ತಿ ಗೌಡ ಹಾಗೂ ರಾಕೇಶ್ ಅಡಿಗ ಇಬ್ಬರೂ ಸ್ವಲ್ಪ ಕ್ಲೋಸ್ ಆಗಿದ್ದಾರೆ. ಇದನ್ನು ನೋಡಿದ ಗುರೂಜಿ ಅದಾಗಲೇ ಈ ಬಗ್ಗೆ ಮಾತನಾಡಿದ್ದಾರೆ.


ಇನ್ನು ಇತ್ತ ಸೋನು ಶ್ರೀನಿವಾಸ್ ಗೌಡ, ತಮಗೆ ರಾಕೇಶ್ ಮೇಲೆ ಮನಸಾಗಿದೆ ಎಂಬಂತಹ ಮಾತುಗಳನ್ನು ಕೆಲವರ ಬಳಿ ಆಡಿದ್ದಾರೆ. ರಾಕೇಶ್ ಹಾಗೂ ಸ್ಪೂರ್ತಿ ಕ್ಲೋಸ್ ಆಗಿರುವುದನ್ನು ನೋಡಿ, ನೇರವಾಗಿ ರಾಕೇಶ್ ಬಳಿಯೇ ತನ್ನ ಮನದ ಮಾತನ್ನು ಆಡಿದ್ದಾರೆ. ನಂತರ ರಾಕೇಶ್ ನನ್ನು ಸ್ಪೂರ್ತಿಗೆ ಬಿಟ್ಟು ಕೊಟ್ಟಿರುವಂತಹ ಮಾತನಾಡಿದ್ದು, ರಾಕೇಶ್ ಇದಕ್ಕೆ ನೇರವಾಗಿ ಪ್ರಶ್ನೆ ಮಾಡಿದ್ದಾನೆ. ಎಷ್ಟಕ್ಕೆ ನನ್ನನ್ನು ಬಿಟ್ಟು ಕೊಟ್ಟಿದ್ದೀಯಾ ಎಂದು ಕೇಳಿದ್ದಕ್ಕೆ ಸೋನು, ನನ್ನ ಮನದಲ್ಲಿ ನಿನಗೆ ಮನೆ ಕಟ್ಟಿದ್ದೇನೆ. ಅದನ್ನ ಎಷ್ಟಕ್ಕೆ ಅಂತ ಸೇಲ್‌ ಂಆಡೋದಕ್ಕೆ ಆಗುತ್ತಾ..? ನಿನ್ನನ್ನು ಬಿಟ್ಟುಕೊಟ್ಟಿದ್ದೇನೆ ಎಂದಷ್ಟೇ ಹೇಳಿದ್ದಾಳೆ.