Sudeep : ಕಿಚ್ಚನಿಗೆ ಮತ್ತೆ ಒಕ್ಕರಿಸಿದ ಕೊರೊನಾ? ಹೇಗಿದೆ ಈಗ ಸುದೀಪ್ ಆರೋಗ್ಯದ ಸ್ಥಿತಿಗತಿ

By Infoflick Correspondent

Updated:Wednesday, July 20, 2022, 21:02[IST]

Sudeep : ಕಿಚ್ಚನಿಗೆ ಮತ್ತೆ ಒಕ್ಕರಿಸಿದ ಕೊರೊನಾ? ಹೇಗಿದೆ ಈಗ ಸುದೀಪ್ ಆರೋಗ್ಯದ ಸ್ಥಿತಿಗತಿ

ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಗಿದ್ದರು.
ನಟ ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು, ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆದರೆ ಈ ಸಂಗತಿ ನಿಜವೇ ?  

ಜನ ಹಾಗು ಕೆಲ ಮಾಧ್ಯಮಗಳು ಈ ಸುದ್ದಿ ಹಬ್ಬಿಸುತ್ತಿದ್ದಾರೆ. ವಿಕ್ರಾಂತ್ ರೋಣ ಸಂತೋಷದಲ್ಲಿದ್ದ ಅಭಿಮಾನಿಗಳು ಈ ಸುದ್ದಿಯಿಂದ ಬೇಸರಗೊಂಡಿದ್ದಾರೆ. ಆದರೆ ಅಭಿಮಾನಿಗಳು ಬೇಸರಗೊಳ್ಳುವ ಅಗತ್ಯವಿಲ್ಲ. ಸುದೀಪ್ ಗೆ ಕೊರೊನಾ ಆಗಿದೆ ಎಂಬುದು ಸುಳ್ಳು ಸುದ್ದಿ. ಆದರೆ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿದೆ.

ಕೊರೊನಾ ತಗುಲಿದೆ ಎನ್ನುವ ವದಂತಿ ಹರಡಿರುವ ಬೆನ್ನಲ್ಲೇ ಈಗ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಸರ್ ಗೆ ಕೊರೊನಾ ಅನ್ನೋದು ಸುಳ್ಳು ಮಾಹಿತಿ, ದೆಹಲಿಯಿಂದ ಬಂದು ಕ್ರಿಕೆಟ್ ಆಡೊವಾಗ ಮಳೆಯಲ್ಲಿ ನೆನೆದ ಕಾರಣ ವೈರಲ್ ಫೀವರ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಸುದೀಪ್ ಆರೋಗ್ಯವಾಗಿದ್ದಾರೆ ಸ್ವಲ್ಪ ಜ್ವರವಿದೆ ಅಷ್ಟೇ ಆದರೆ ಅದು ಕೊರೊನಾ ಅಲ್ಲ. ಸ್ವಲ್ಪ ವಿಶ್ರಾಂತಿ ಪಡೆದರೆ ಚೇತರಿಸಿಕೊಳ್ಳುತ್ತಾರೆ. ಜುಲೈ 22, 23, 24 ಮೂರುದಿನಗಳು ಮುಂಬೈನಲ್ಲಿ ಪ್ರಚಾರದ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ತಾರೆ. ಅದೇ ರೀತಿಯಾಗಿ 25 ರಂದು ಹೈದರಾಬಾದ್ 26 ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಮುಗಿಸಿ 27ಕ್ಕೆ ದುಬೈನಲ್ಲಿ ನಡೆಯುವ ಪ್ರೀಮಿಯರ್ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ.