ಬ್ರೇಕಿಂಗ್ ನ್ಯೂಸ್ : ನಟ ದಿಗಂತ್ ಕತ್ತಿಗೆ ಬಲವಾದ ಪೆಟ್ಟು ಗೋವಾ ದಲ್ಲಿ ನಡೆದ ಅವಘಡ

By Infoflick Correspondent

Updated:Tuesday, June 21, 2022, 16:10[IST]

ಬ್ರೇಕಿಂಗ್ ನ್ಯೂಸ್ : ನಟ ದಿಗಂತ್ ಕತ್ತಿಗೆ ಬಲವಾದ ಪೆಟ್ಟು  ಗೋವಾ ದಲ್ಲಿ ನಡೆದ ಅವಘಡ

ನಟ ದಿಗಂತ್ ಗೋವಾದಲ್ಲಿ ಸ್ನೇಹಿತರು ಹಾಗೂ ಕುಟುಂಬದ ಜೊತೆಗೆ ಮಜಾ ಮಾಡುವಾಗ ಅಪಘಾತ ಸಂಭವಿಸಿದೆ. ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುತ್ತಿರುವ ವೇಳೆ ಆಯ ತಪ್ಪಿದ್ದು, ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ.ಗೋವಾದಲ್ಲಿ ದಿಗಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಿಗಂತ್‌ ಅವರನ್ನು ಬೆಂಗಳೂರಿಗೆ ಕರೆ ತರಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಏರ್ ಲಿಪ್ಟ್ ಮೂಲಕ ದಿಗಂತ್‌ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಿದ್ದಾರೆ.

ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ  ದಿಗಂತ್ ಕುತ್ತಿಗೆಗೆ  ಪೆಟ್ಟು ಬಿದ್ದಿದೆ. ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ (Goa Tour) ತೆರಳಿದ್ದರು. ಈ ವೇಳೆ ದಿಗಂತ್ (Actor Diganth) ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ  

ಈ ಬಗ್ಗೆ ದಿಗಂತ್‌ ಕುಟುಂಬದವರು  ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಟ ದಿಗಂತ್ ಅವರು ಸ್ನೇಹಿತರು ಹಾಗೂ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದರು. ಇಲ್ಲಿ ಸಮ್ಮರ್ ಶಾಟ್ ಮಾಡುವಾಗ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಇನ್ನಷ್ಟು ವಿಚಾರಗಳು ತಿಳಿದು ಬರಬೇಕಿದೆ. ಇನ್ನು ಈ ಹಿಂದೆಯೂ ದಿಗಂತ್‌ ಅವರಿಗೆ ಚಿತ್ರೀಕರಣದ ವೇಳೆ ದುರ್ಘಟನೆ ಸಂಭವಿಸಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಕಣ್ಣಿಗೆ ಹಾನಿಯಾಗಿತ್ತು. ಈ ಬಗ್ಗೆ ಸ್ವತಃ ದಿಗಂತ್‌ ಅವರೇ ಮಾಹಿತಿ ಹಂಚಿಕೊಂಡಿದ್ದರು.

ಇನ್ನು ದಿಗಂತ್‌ ಅವರ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರ ಇತ್ತೀಚೆಷ್ಟೇ ರಿಲೀಸ್‌ ಆಗಿತ್ತು. ಈ ಚಿತ್ರದಲ್ಲಿ ದಿಗಂತ್‌ ಅವರ ಜೊತೆಗೆ ಪತ್ನಿ ಐಂದ್ರಿತಾ ರೈ ಕೂಡ ತೆರೆ ಹಂಚಿಕೊಮಡಿದ್ದಾರೆ. ಮನಸಾರೆ ಚಿತ್ರದ ಬಳಿಕ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದು ಹೊರತು ಪಡಿಸಿದರೆ, ಕೆಲ ಚಿತ್ರಗಳಲ್ಲಿ ದಿಗಂತ್‌ ಅಭಿನಯಿಸುತ್ತಿದ್ದಾರೆ. ಗಾಳಿಪಟ 2, ಮಾರಿ ಗೋಲ್ಡ್‌, ಎಡಗೈ ಅಪಘಾತಕ್ಕೆ ಕಾರಣ ಚಿತ್ರಗಳು ದಿಗಂತ್‌ ಅವರ ಕೈಯಲ್ಲಿವೆ.