ಮಗು ಬಗ್ಗೆ ಕೇಳಿದ್ದಕ್ಕೆ ದಿಗಂತ್ ಹಾಗೂ ಐಂದ್ರಿತಾ ರೈ ಹೇಳಿದ್ದೇನು ಗೊತ್ತಾ..?
Updated:Saturday, April 30, 2022, 18:06[IST]

ಹಲವು ವರ್ಷಗಳ ಬಳಿಕ ನಟ ದಿಗಂತ್ ಹಾಗೂ ಐಂದ್ರಿತಾ ರೈ ಒಟ್ಟಿಗೆ ಸ್ಯಾಂಡಲ್ ವುಡ್ ಗೆ ರಿ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರ ನಿನ್ನೆಯಷ್ಟೇ ರಿಲೀಸ್ ಆಗಿದೆ. ಈ ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮಲೆನಾಡಿನಲ್ಲಿ ಈ ಚಿತ್ರ ಚಿತ್ರೀಕ್ರಣವನ್ನು ನಡೆಸಿದ್ದು, ಅಲ್ಲಿನ ಸೌಂದರ್ಯವನ್ನು ಕ್ಯಾಮಾರಾಗಳಲ್ಲಿ ಸೆರೆ ಹಿಡಿಯಲಾಗಿದೆ. ಈ ಚಿತ್ರದ ಹಾಡು ಹನಿಯೊಂದು ಜಾರಿ ನದಿಯಾಗಿ ಬಂತು ಮಲೆನಾಡ ಮಗಳಾಗಲು.. ಯೂಟ್ಯೂಬ್ ನಲ್ಲಿ ಮೆಲ್ಲನೆ ಸದ್ದು ಮಾಡಿತ್ತು.
ಸಿಲ್ಕ್ ಮಂಜು ಈ ಚಿತ್ರವನ್ನು ನಿರ್ಮಿಸಿದ್ದು, ವಿನಾಯಕ ಕೋಡ್ಸರ ನಿರ್ದೇಶನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರವೀಂದ್ರ ಜೋಶಿ ಕಾರ್ಯನಿರ್ವಹಿಸಿದ್ದಾರೆ. ಪ್ರಜ್ವಲ್ ಪೈ ಸಂಗೀತ ನಿರ್ದೇಶಿಸಿದ್ದು, ನಂದಕಿಶೋರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ದಿಗಂತ್, ಐಂದ್ರಿತಾ ರೇ ಹಾಗೂ ರಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಇನ್ನು ದಿಗಂತ್ ಅವರ ನಟಿನೆಯ ಹಲವು ಚಿತ್ರಗಳು ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿವೆ. ಗಾಳಿಪಟ- 2 ಹಾಗೂ ತಿಮ್ಮಯ್ಯ ಆಂಡ್ ತಿಮ್ಮಯ್ಯ ಸೇರಿದಂತೆ ಹಲವು ಚಿತ್ರಗಳಿಗೆ ದಿಗಂತ್ ಬಣ್ಣ ಹಚ್ಚಿದ್ದಾರೆ.
ಪತಿ ಪತ್ನಿ ಇಬ್ಬರೂ ಕೂಡ ಿದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನು ಈ ಚಿತ್ರದ ರಿಲೀಸ್ ಸಮಯದಲ್ಲಿ ದಿಗಂತ್ ಹಾಗೂ ಐಂದ್ರಿತಾ ಅವರನ್ನು ಮಾಧ್ಯಮದವರು ಮಾತನಾಡಿಸಿದ್ದಾರೆ. ಈ ವೇಳೆ ಮಗುವಿನ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ತಲೆಯಾಡಿಸಿದ್ದಾರೆ. ಒಬ್ಬರಿಗೊಬ್ಬರು ಇಷ್ಟು ಮುದ್ದು ಮಾಡಿಕೊಳ್ಳುವ ಈ ಜೋಡಿಗೆ ಮುದ್ದಾಡಲುಮಗು ಬೇಕು ಅನಿಸಿಲ್ವಾ ಎಂದು ಕೇಳಿದಾಗ, ಇಬ್ಬರೂ ನಾಚಿಕೆಯಿಂದಲೇ ಇಲ್ಲ ಎಂದು ತಲೆ ಆಡಿಸಿದ್ದಾರೆ.