ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ್ ಪುತ್ರ ಪವನ್..! ಜೋಡಿ ಹೇಗಿದೆ ನೋಡಿ

Updated: Monday, February 22, 2021, 21:07 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ದೇಶಕ ನಟ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು, ಕನ್ನಡ ಸಿನಿಮಾರಂಗಕ್ಕೆ ದೊಡ್ಡದಾದ ಕೊಡುಗೆಯನ್ನು ಈಗಾಗಲೇ ಕೊಟ್ಟಿದ್ದಾರೆ. ಮತ್ತು ಕನ್ನಡ ಸಿನಿಮಾಗಳ ಬೆಳವಣಿಗೆಗೆ ತಾವು ಈ ಹಿಂದೆಯೇ ಕೆಲಸ ಮಾಡಿದ್ದಾರೆ. ಮತ್ತು ತಮ್ಮದೇ ಆದ ನಿರ್ದೇಶನದಲ್ಲಿ ಮೂಡಿಬಂದ ಕೆಲ ಸಿನಿಮಾಗಳು ಇಂದಿಗೂ ಕೂಡಾ ಹಿಟ್ ಸಾಲಿಗೆ ಸೇರಿದ್ದು, ಈಗಲೂ ಕೂಡ ಜನಪ್ರಿಯತೆ ಹೊಂದಿವೆ. 

ಇಂದು ಎಸ್ ನಾರಾಯಣ್ ಅವರ ಪುತ್ರ ಪವನ್ ಅವರ ಮದುವೆಯಾಗಿದ್ದು, ಪವನ್ ಪವಿತ್ರ ಎನ್ನುವವರನ್ನು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಎಸ್ ನಾರಾಯಣ್ ಅವರ ಮಗನಾದ ಪವನ್ ಅವರ ಮದುವೆ ಸಮಾರಂಭಕ್ಕೆ, ಸ್ಟಾರ್ ನಟರಾದ ಶ್ರೀಮುರುಳಿ, ಸುಧಾರಾಣಿ ಹಾಗೂ ಶ್ರುತಿ, ಅನುಪ್ರಭಾಕರ್, ಇನ್ನು ಕೆಲ ಸಿನಿಮಾರಂಗದ ಗಣ್ಯರು ಹಾಜರಾಗಿದ್ದರು. 

ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಅವರು ಪವಿತ್ರ ಅವರನ್ನು ವರಿಸಿದ್ದು, ಈ ಮದುವೆ ಸಮಾರಂಭದಲ್ಲಿ  ಕಂಗೊಳಿಸಿದರು. ಮತ್ತು ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು ನೀವು ಕೂಡ ಈ ಒಂದು ವಿಡಿಯೋ ನೋಡಿ, ಜೋಡಿ ಹೇಗಿದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ, ಮತ್ತು ಈ ಜೋಡಿಗೆ ಶುಭಕೋರಿ ಧನ್ಯವಾದಗಳು...