ಕಿನ್ನರಿ ಧಾರಾವಾಹಿಯಲ್ಲಿ ನಟಿಸಿದ ಆ ಪುಟಾಣಿ ಹುಡುಗಿ ಈಗ ಹೇಗಿದ್ದಾಳೆ ನೋಡಿ..

By Infoflick Correspondent

Updated:Sunday, August 28, 2022, 19:50[IST]

ಕಿನ್ನರಿ ಧಾರಾವಾಹಿಯಲ್ಲಿ ನಟಿಸಿದ ಆ ಪುಟಾಣಿ ಹುಡುಗಿ ಈಗ ಹೇಗಿದ್ದಾಳೆ ನೋಡಿ..


ಸರಿ ಸುಮಾರು ಐದಾರು ವರ್ಷಗಳ ಹಿಂದೆ ಕಿನ್ನರಿ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ನಾಯಕಿ ಮಣಿ ಪಾತ್ರವನ್ನು ಪುಟಾಣಿ ಹುಡುಗಿ ದಿಶಾ ನಟಿಸಿದ್ದರು. ಆಗ ಈ ಮಗುವಿಗೆ ಕೇವಲ 6 ವರ್ಷ ವಯಸ್ಸು. ಆ ಮುದ್ದು ಹುಡುಗಿ ಈಗ ಹೇಗಿದ್ದಾಳೆ.? ಎಲ್ಲಿದ್ದಾಳೆ..? ಏನು ಮಾಡುತ್ತಿದ್ದಾಳೆ ಗೊತ್ತಾ..?

ಈ ಮುದ್ದು ಹುಡುಗಿಯ ಹೆಸರು ದಿಶಾ. ದಿಶಾ ಒಂದನೇ ತರಗತಿ ಓದುತ್ತಿರುವಾಗ ಕಿನ್ನರಿ ಧಾರಾವಾಹಿಗಾಗಿ ಬಣ್ಣ ಹಚ್ಚಿದ್ದರು. ಮೈಸೂರಿನಲ್ಲಿ ಓದುತ್ತಿದ್ದ ದಿಶಾ ಅವರ ತಾಯಿಗೆ ತನ್ನ ಮಗಳನ್ನು ನಟಿಯಾಗಿ ನೋಡುವ ಆಸೆ ಇತ್ತು. ಆದರೆ ದಿಶಾಗೆ ಡಾಕ್ಟರ್ ಆಗುವ ಕನಸಿತ್ತು. ಇದೇ ಸಂದರ್ಭದಲ್ಲಿ ಆಡಿಶನ್ ಗೆ ಹೋದ ದಿಶಾ ಕಿನ್ನರಿ ಧಾರಾವಾಹಿಗೆ ಆಯ್ಕೆ ಆಗಿಯೇ ಬಿಟ್ಟಳು. ನಂತರ ಸೀರಿಯಲ್ ನಲ್ಲಿ ಮಣಿ ಪಾತ್ರದಲ್ಲಿ ನಟಿ ಸೈ ಎನಿಸಿಕೊಂಡಳು.    

 ಈ ಸೀರಿಯಲ್ ಬಳಿಕ ದಿಶಾ ಅವರು ಬಿಗ್ ಬಾಸ್ ಸೀಸನ್ 3 ರಲ್ಲಿ ಒಂದು ದಿನ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ನಂತರ ನಾನು ಬಿಗ್ ಬಾಸ್ ಮನೆಯಲ್ಲೇ ಇರುತ್ತೇನೆ ಎಂದು ಹಠ ಕೂಡ ಮಾಡಿದ್ದರು. ಸುದೀಪ್ ಎಂದರೆ ತುಂಬಾ ಇಷ್ಟವಂತೆ. ಇನ್ನು ಮಜಾ ಟಾಕೀಸ್ ನಲ್ಲೂ ದಿಶಾ ಕಾಣಿಸಿಕೊಂಡಿದ್ದರು. ಅಲ್ಲದೇ, ಚಿತ್ರಾಲಿ, ಹ್ಯಾಪಿ ಬರ್ತಡೇ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಭರತನಾಟ್ಯ, ಮಾರ್ಡನ್ ಡ್ಯಾನ್ಸ್ ಅನ್ನು ದಿಶಾ ಅವರು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕನ್ನಡದ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಹಾಗೆ ಮುದ್ದಾಗಿ ಬೆಳೆದಿದ್ದಾರೆ. ಆದರೆ ಇನ್ನೂ ಓದುತ್ತಿರುವ ಕಾರಣ ಬಣ್ಣದ ಲೋಕದಿಂದ ಬ್ರೇಕ್ ಪಡೆದಿದ್ದಾರೆ.