ದಿವ್ಯಾ ಅರವಿಂದ್ ಪ್ರೇಮ್ ಕಹಾನಿ ಎಲ್ಲಿಗೆ ಬಂತು ? ಅಭಿಮಾನಿಗಳ ಕುತೂಹಲಕ್ಕೆ ಇಲ್ಲಿದೆ ಉತ್ತರ
Updated:Wednesday, March 16, 2022, 14:50[IST]

ಕನ್ನಡ ಕಿರುತೆರೆಯ ಮನಗೆದ್ದ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್ ಬಾಸ್ ಪ್ರತಿ ಸೀಸನ್ ನಲ್ಲೂ ಒಂದು ಲವ್ ಬರ್ಡ್ ಗಳು ಇದ್ದೇ ಇರುತ್ತಾರೆ. ಆದರೆ ಹೊರಗೆ ಹೊದ ಮೇಲೆ ಅವರ ಪ್ರಪಂಚವೇ ಬೇರೆಯಾಗಿ ಹಾಯ್ ಬಾಯ್ ಫ್ರೆಂಡ್ಸ್ ಆಗುತ್ತಾರೆ. ಕೆಲವರು ಮದುವೆಯ ನವಜೊಡಿಗಳಾಗುತ್ತಾರೆ. ಹೀಗೆ ಪ್ರತಿ ಸಿಸನ್ ನಲ್ಲೂ ಒಂದೊಂದು ಜೋಡಿಯ ಹೆಸರು ಹೇಳಬಹುದು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಬಿಗ್ ಬಾಸ್ ನಲ್ಲಿ ಒಳ್ಳೆಯ ಸ್ನೇಹಿತರಾಗಿ ನಂತರ ವಿವಾಹವಾದರು.
ಬಿಗ್ ಬಾಸ್ ಸೀಸನ್ 8 ಎಲ್ಲದರಲ್ಲೂ ವಿಶೇಷ ಹೊಂದಿತ್ತು. ಲಾಕ್ ಡೌನ್ ಕಾರಣ ಎರಡು ವಾರ ಸ್ಪರ್ಧಿಗಳು ಮನೆಗೆ ತೆರಳಿ ಮತ್ತೆ ಸಿಸನ್ ಗೆ ಬಂದರು. ಈ ಸೀಸನ್ ನಲ್ಲಿ ಲವ್ ಬರ್ಡ್ ಎಂದು ಪ್ರಸಿದ್ದಿ ಪಡೆದು ಜನರ ಮನಸ್ಸಲ್ಲಿ ಈಗಲೂ ಅಚ್ಚೊತ್ತಿದವರು ದಿವ್ಯಾ (Divya urudaga) ಅರವಿಂದ. (K P Aravinda) ಅರವಿಂದವರ ಪ್ರೀತಿ ಕಾಳಜಿಗೆ ಮನಸೋತ ದಿವ್ಯ ಅರವಿಂದ್ ಅವರಿಗೆ ಪ್ರೇಮ ಕಾಣಿಕೆ ನೀಡಿದ್ದರು. ತಂದೆ ನೀಡಿದ ಉಂಗುರವನ್ನು ಕೊಟ್ಟಿದ್ದರು. ಅದು ಈಗಲೂ ಅರವಿಂದ ಅವರ ಕಿರುಬೆರಳಿನಲ್ಲಿ ಭದ್ರವಾಗಿದೆ.
ಅರವಿಂದ ದಿವ್ಯಾ ಅವರ ಹಲವಾರು ಫ್ಯಾನ್ ಪೇಜ್ ಗಳಿವೆ. ಅಭಿಮಾನಿಗಳು ಇವರ ಮದವೆಗಾಗಿ ಕಾಯುತ್ತಿದ್ದಾರೆ. ಆದರೆ ಅಧಿಕೃತವಾಗಿ ಈ ಜೋಡಿ ಪ್ರೇಮಿಗಳೆಂದು, ಮದುವೆಯ ಕುರಿತು ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಮುಂದೆ ಯೋಚಿಸುತ್ತೀವಿ ಎಂದಿದ್ದರು. ಅಭಿಮಾನಿಗಳು ತೆರೆದಿದ್ದ ಆರ್ವಿಯಾ ಅಭಿಮಾನಿಗಳ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಈಗಲೂ ಸಹ ಇಬ್ಬರ ಫೋಟೋಗಳು ವೀಡಿಯೀಗಳು ಹರಿದಾಡುತ್ತಿದ್ದು ಆದಷ್ಟು ಬೇಗ ಮದುವೆಯ ಸುದ್ದಿ ನೀಡಿ ಎಂದು ಆರ್ವಿಯಾ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
ಅರವಿಂದ್ ತಾವು ಅತಿಥಿಯಾಗಿ ಹೋಗುವ ಸಾಕಷ್ಟು ಕಾರ್ಯಕ್ರಮಗಳಿಗೆ ದಿವ್ಯಾರನ್ನೂ ಸಹ ಕರೆದುಕೊಂಡು ಹೋಗುತ್ತಾರೆ. ಇಬ್ಬರು ಒಟ್ಟಿಗೆ ತಿರುಗುತ್ತಾ ಒಳ್ಳೆ ಬಾಂಧವ್ಯದಲ್ಲಿದ್ದಾರೆ. ಮುಂದಿನ ವರ್ಷದೊಳಗೆ ಮದುವೆ ಸುದ್ದಿ ಕೊಡಬಹುದೆಂದು ಅಭಿಮಾನಿಗಳು ಕಾಯುತ್ತಿದ್ದಾರೆ