Divya Uruduga : ದಿವ್ಯಾ ಅರವಿಂದ್ ಪಾಲಿಗೆ ಈ ದಿನ ಬಹಳ ವಿಶೇಷವಂತೆ ! ಕಾರಣ ಇಲ್ಲಿದೆ ನೋಡಿ

By Infoflick Correspondent

Updated:Friday, July 15, 2022, 12:05[IST]

Divya Uruduga : ದಿವ್ಯಾ ಅರವಿಂದ್ ಪಾಲಿಗೆ ಈ ದಿನ ಬಹಳ ವಿಶೇಷವಂತೆ ! ಕಾರಣ ಇಲ್ಲಿದೆ ನೋಡಿ

ನಟಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಇಬ್ಬರು ಅತ್ಮೀಯರು. ಇಬ್ಬರ ನಡುವೆ ಒಂದೊಳ್ಳೆ ಭಾಂದವ್ಯವಿದೆ. ಅಭಿಮಾನಿಗಳು ಇವರಿಬ್ಬರ ಮದುವೆಗೆ ಕಾಯುತ್ತಿದ್ದಾರೆ. ಇಂದು (ಜುಲೈ 13) ದಿವ್ಯಾ ಹಾಗೂ ಅರವಿಂದ್ ಪಾಲಿಗೆ ವಿಶೇಷ ದಿನ. ಈ ಬಗ್ಗೆ ದಿವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಅರವಿಂದ್ ಕೆ.ಪಿ. ಜತೆ ನಿಂತಿರುವ ಫೋಟೋವನ್ನು ದಿವ್ಯಾ ಪೋಸ್ಟ್​ ಮಾಡಿದ್ದಾರೆ. ಈ ಫೋಟೋಗೆ ಅವರು ಅರವಿಂದ ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.    

ಅರವಿಂದ್ ಅವರನ್ನು ಭೇಟಿ ಮಾಡಿ 500 ದಿನ ಕಳೆಯಿತು ಎಂದು ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ. ಈ ಫೋಟೋ ನೋಡಿ ದಿವ್ಯಾ ಹಾಗೂ ಅರವಿಂದ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.ನಾನು ಅತ್ಯಂತ ಶಾಂತಿ ಮತ್ತು ಸಂತೋಷದಿಂದ ಇದ್ದೇನೆ. ನಿಖರವಾಗಿ ಹೇಳಬೇಕು ಅಂದ್ರೆ 500 ದಿನಗಳು’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ದಿವ್ಯಾ ಉರುಡುಗ ಬರೆದುಕೊಂಡಿದ್ದಾರೆ. ಜೊತೆಗೆ ಅರವಿಂದ್‌.ಕೆ.ಪಿ ಜೊತೆಗಿನ ಫೋಟೋವನ್ನು ದಿವ್ಯಾ ಉರುಡುಗ ಹಂಚಿಕೊಂಡಿದ್ದಾರೆ.

2021ರ ಆರಂಭದಲ್ಲಿ 'ಕನ್ನಡ ಬಿಗ್​ ಬಾಸ್ ಸೀಸನ್ 8' ಆರಂಭವಾಯಿತು. ದಿವ್ಯಾ ಉರುಡುಗ ಅವರು ನಟಿಯಾಗಿ ಗುರುತಿಸಿಕೊಂಡಿದ್ದರಿಂದ ಅವರ ಪರಿಚಯ ಅನೇಕರಿಗೆ ಇತ್ತು. ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ಅರವಿಂದ್ ಪರಿಚಯ ಅನೇಕರಿಗೆ ಇರಲಿಲ್ಲ. ಟಾಸ್ಕ್​ ಒಂದರಲ್ಲಿ ಇಬ್ಬರೂ ಒಂದಾದರು. ಅಲ್ಲಿಂದ ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಈ ಫ್ರೆಂಡ್​ಶಿಪ್ ಪ್ರೀತಿಗೆ ತಿರುಗಿತು. ಇವರಿಬ್ಬರ ಭೇಟಿಗೆ ಈಗ 500 ದಿನ ತುಂಬಿದೆ. ಈ ವಿಶೇಷ ದಿನಕ್ಕೆ ದಿವ್ಯಾ ಅವರು ಫೋಟೋ ಒಂದನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by DU✨ (@divya_uruduga)