Divya Suresh : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಬೆಡಗಿ ದಿವ್ಯಾ ಸುರೇಶ್

By Infoflick Correspondent

Updated:Monday, June 13, 2022, 19:13[IST]

Divya Suresh :  ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಬೆಡಗಿ ದಿವ್ಯಾ ಸುರೇಶ್

ಬಿಗ್ ಬಾಸ್ ಸೀಸನ್ 8 ರಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ನಡುವಿನ ಸಂಬಂಧದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಸದಾ ಮಂಜು ಬೆನ್ನಿಗೆ ಅಂಟಿಕೊಂಡಿರುತ್ತಿದ್ದ ದಿವ್ಯಾ ಸುರೇಶ್, ಮಂಜು ಅವರ ಮನೆಗೆ ಹೋಗಿ , ಬೇಗ ಮದುವೆ ಮಾಡಿ ಎಂದು ಹೇಳಿ ಬಂದಿದ್ದರು. ಕೆಲ ದಿನಗಳ ಕಾಲ ದಿವ್ಯಾ ಸುರೇಶ್ ಅವರು ತಮ್ಮ ಕುಟುಂಬ ಹಾಗೂ ಮುಂಜು ಪಾವಗಡ ಜೊತೆ ಕೆಲ ರಿಯಾಲಿಟಿ ಶೋ ಗಳಲ್ಲೂ ಕಾಣಿಸಿಕೊಂಡಿದ್ದರು. ಅತ್ತ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯಾ ಹಾಗೂ ಮಂಜು ಇಬ್ಬರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 

2017ರ ಬೆಂಗಳೂರು ಮಿಸ್ ಸೌತ್ ದಿವ್ಯಾ ಸುರೇಶ್, ಲ್ಯಾಗ್ ಮಂಜು ಜೊತೆ ಸದಾ ಇರುತ್ತಿದ್ದರು. ಕೊನೆ ವಾರದ ಮಿಡ್ ನೈಟ್ ಎಲಿಮಿನೇಶನ್ ನಲ್ಲಿ ದಿವ್ಯಾ ಎಲಿಮಿನೇಟ್ ಆಗಿದ್ದರು. ಇದರಿಂದ ಮಂಜು ಕೂಡ ತುಂಬಾ ಬೇಸರ ಪಟ್ಟುಕೊಂಡಿದ್ದರು. ನಂತರ ದಿವ್ಯಾ ಸುರೇಶ್ ಮಾತನಾಡಿದ್ದು, ನಾನು ಹಾಗೂ ಮಂಜು ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಎಲ್ಲದಕ್ಕೂ ಬ್ರೇಕ್ ಹಾಕಿದ್ದರು. ಬಿಗ್ ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದ ದಿವ್ಯಾ ಸುರೇಶ್ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಆಫರ್ ಗಳು ಬಂದವು. 

ಇದೀಗ ದಿವ್ಯಾ ಸುರೇಶ್ ಅವರು ಧಾರಾವಾಹಿ ಒಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದಕ್ಕೂ ಮುಂಚೆ ದಿವ್ಯಾ ಸುರೇಶ್ ಅವರು ಇದೀಗ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿರಣ್ಣಯ್ಯ ಎಂಬ ಸಿನಿಮಾದಲ್ಲಿ ದಿವ್ಯಾ ಸುರೇಶ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರವೀಣ್ ಅವ್ಯುಕ್ತ್ ಅವರು ಈ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಈ ಚಿತ್ರದ ನಾಯಕ ರಾಜವರ್ಧನ್ ಬಣ್ಣ ಹಚ್ಚುತ್ತಿದ್ದು, ಇವರಿಗೆ ಜೋಡಿಯಾಗಿ ಮಾಡೆಲ್ ಕಮ್ ನಟಿ ರಿಹಾನಾ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಿಹಾನಾ ಕನ್ನಡದಲ್ಲಿ ನಟಿಸುತ್ತಿದ್ದಾರೆ.  

ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, 80 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಗೋಕುಲ್ ಬೆನಾಯ್ ಎಂಬ ಸುಪ್ರಸಿದ್ದ ಕ್ಯಾಮರಾಮ್ಯಾನ್ ಈ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಪಕರಾದ ವಿಘ್ನೇಶ್ವರ ಯು ಹಾಗೂ ವಿಜಯ್ ಕುಮಾರ್ ಬಿವಿ ಚಿತ್ರ ನಿರ್ಮಿಸುವ ಹೊಣೆ ಹೊತ್ತಿದ್ದಾರೆ.