ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ದಿವ್ಯಾ ಅರವಿಂದ್ ಜೋಡಿ..! ಎಂಗೇಜ್ಮೆಂಟ್ ದಿನಾಂಕ ಫಿಕ್ಸ್..!
Updated:Monday, April 4, 2022, 12:50[IST]

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇಯಾದ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಕಿರುತೆರೆ ಜೀವನದಲ್ಲಾಗಲಿ, ಸಿನಿಮಾದಲ್ಲಿ ಆಗಲಿ ಅಥವಾ ಯಾವುದಾದರೂ ಒಂದು ಅಪರೂಪದ ಜೋಡಿಯೂ ಈ ಅಭಿಮಾನಿಗಳಿಗೆ ಒಂದು ಬಾರಿ ಇಷ್ಟ ಆಗಿದ್ದಲ್ಲಿ, ಹಾಗೆ ಆ ಜೋಡಿಯನ್ನು ಅವರು ಒಪ್ಪಿಕೊಂಡರೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಹವಾ ಸೃಷ್ಟಿ ಮಾಡುತ್ತಾರೆ. ಹಾಗೆ ಎಲ್ಲರ ಪ್ರೀತಿ ಪಾತ್ರವಾಗಿ ಜೋಡಿ ಹೊರಹೊಮ್ಮುತ್ತದೆ. ಅಂತಹವರ ಸಾಲಿನಲ್ಲಿ ಬರುವ ಬಿಗ್ಬಾಸ್ ಫೆಮ್ ನ ದಿವ್ಯ ಉರುಡುಗ ಹಾಗೂ ಅರವಿಂದ್ ಜೋಡಿ ಒಂದು..ಹೌದು ಈ ಜೋಡಿಯ ಒಪ್ಪಿಕೊಂಡ ಕನ್ನಡಿಗರು ಬಿಗ್ಬಾಸ್ ಮನೆಯಲ್ಲಿ ಇದ್ದ ವೇಳೆ ಇವರ ಬಗ್ಗೆ ಹೆಚ್ಚು ಊಹಾಪೋಹಗಳು ಹರಿದಾಡುವಂತೆ ಮಾಡಿದ್ದರು.
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಬಿಗ್ ಮನೆಯಲ್ಲಿಯೇ ಅಷ್ಟು ಪ್ರೀತಿಯಿಂದ ಇದ್ದ ಈ ಜೋಡಿ ಹೊರಬರುತ್ತಿದ್ದಂತೆ ಮದುವೆಯಾಗುತ್ತಾರೆ ಎನ್ನುವ ಕೆಲ ಮಾತುಗಳು ಕೇಳಿ ಬಂದವು. ಹೀಗಾಗಿ ಇವರಿಬ್ಬರ ಮದುವೆ ವಿಚಾರವಾಗಿ ಬಿಗ್ಬಾಸ್ ನಲ್ಲಿ ಈ ಜೋಡಿನ ಇಷ್ಟಪಟ್ಟವರು ಇದೀಗ ಮತ್ತೊಂದು ಖುಷಿಯ ವಿಚಾರವು ಹೊರ ಬಂದಿದೆ. ಅಸಲಿಗೆ ಇದೀಗ ಇವರಿಬ್ಬರು ಮದುವೆಯಾಗುತ್ತಾರ ಎಂದು ನೀವು ಕೂಡ ಕೇಳಬಹುದು. ಹೌದು ಇವರಿಬ್ಬರು ಇಷ್ಟರಲ್ಲೇ ಮದುವೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರ ಎಂಗೇಜ್ಮೆಂಟ್ ಯಾವಾಗ ಎಂದು ಇದೀಗ ಕೆಲ ಮೂಲಗಳು ತಿಳಿಸಿವೆ.
ಹೌದು ಹಿಂದೂಗಳೆಲ್ಲರ ಹೊಸ ವರ್ಷವಾದ ಈ ಯುಗಾದಿ ಹಬ್ಬ ಮುಗಿದ ಬಳಿಕವೇ ಈ ದಿವ್ಯಾ ಅರವಿಂದ್ ಜೋಡಿ ಎಂಗೇಜ್ಮೆಂಟ್ ಮಾಡಿಕೊಳ್ಳಲಿದೆಯಂತೆ.ಹಾಗೆ ಮುಂಬರುವ ಕೆಲವು ತಿಂಗಳಲ್ಲಿ ಮದುವೆ ಕೂಡ ಆಗಲಿದ್ದಾರೆ ಎನ್ನಲಾಗಿ ಕೇಳಿ ಬರುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ತಪ್ಪದೇ ಮಾಹಿತಿಯನ್ನು ಶೇರ್ ಕೂಡ ಮಾಡಿ. ಜೊತೆಗೆ ಜೋಡಿಗೆ ಒಳ್ಳೆಯದಾಗಲೆಂದು ಹರಸಿ ಧನ್ಯವಾದಗಳು...