Divya urudaga : ದಿವ್ಯಾ ಉರುಡುಗ ಕೈಯಲ್ಲಿ ಸಾಲು ಸಾಲು ಸಿನಿಮಾ..! ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿದ್ದೇನು..?
Updated:Monday, June 6, 2022, 07:39[IST]

ಕನ್ನಡದ ರಿಯಾಲಿಟಿ ಶೋ ಮೂಲಕ ಖ್ಯಾತಿ ಹೊಂದಿದ್ದ ಹುಲಿರಾಯ ಚಿತ್ರದ ನಟಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಒಂದರಮೇಲೊಂದರಂತೆ ಚಿತ್ರ ಒಪ್ಪಿಕೊಳ್ಳುತ್ತಿದ್ದಾರೆ ನಟಿ ದಿವ್ಯಾ ಎಂದು ತಿಳಿದುಬಂದಿದೆ. ಹೌದು ಅರವಿಂದ್ ಮತ್ತು ದಿವ್ಯ ಅವರ ಜೋಡಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಹಾಗೇನೇ ಅಭಿಮಾನಿಗಳೆಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಇವರಿಬ್ಬರು. ಇದೀಗ ನಟಿ ದಿವ್ಯ ಉರುಡುಗ ಅವರು ಬಹಳ ದಿನಗಳ ಬಳಿಕ ಹೊಸ ಸಿನಿಮಾವೊಂದರ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದು ಹುಲಿರಾಯ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಮುಂದಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಆದರೆ ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಜೊತೆಗೆ ನಾಯಕನ ಹುಡುಕಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.
ನಟಿ ದಿವ್ಯ ಉರುಡುಗ ಅವರು ಈ ಬಗ್ಗೆ ಮಾತನಾಡಿದ್ದು ಅರವಿಂದ್ ಕೌಶಿಕ್ ಅವರು ಒಬ್ಬ ಪ್ರತಿಭಾವಂತ ನಿರ್ದೇಶಕ. ನನಗೆ ಬೇರೆಯವರ ಕೆಲವೊಂದಿಷ್ಟು ಸಿನಿಮಾಗಳ ಕಥೆ ಇಷ್ಟ ಆಗಿರಲಿಲ್ಲ. ಆದರೆ ಕೌಶಿಕ್ ಹೇಳಿದ ಕಥೆ ಇಷ್ಟವಾಗಿದೆ. ಈ ಸಿನಿಮಾದಲ್ಲಿ ನಾನು ಒಂದು ಪಾರ್ಟಿಕಲ್ ಪಾತ್ರದಲ್ಲಿ ಅಭಿನಯಿಸಲಿದ್ದೇನೆ, ನನ್ನ ಪಾತ್ರ ತುಂಬಾ ವಾಸ್ತವವಾಗಿದೆ. ಹಾಗೆಗೆ ಇದೊಂದು ಒಳ್ಳೆಯ ಪ್ರೇಮಕಥೆಯಾಗಿಯೂ ಸಹ ಮೂಡಿಬರಲಿದೆ ಎಂದರು. ನಟಿ ದಿವ್ಯ ಉರುಡುಗ ಅವರು ಅಭಿನಯಿಸುತ್ತಿರುವ ಅರವಿಂದ್ ಕೌಶಿಕ್ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಇದೆ ತಿಂಗಳಿಂದ ಆರಂಭವಾಗುತ್ತಿದ್ದು, 3ಬಿಎಚ್ಕೆ, ರಾಂಚಿ, ಜೂರು, ಹಾಗೆ ಗಿರ್ಕಿ ಚಿತ್ರಗಳಲ್ಲಿ ದಿವ್ಯ ಅಭಿನಯ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದು ನಟಿ ದಿವ್ಯ ಉರುಡುಗ ಅವರ ಎರಡನೆಯ ಸಿನಿಮಾ ಆಗಿದ್ದು, ಯಾವಾಗಲೂ ಔಟ್ ಆಫ್ ಬಾಕ್ಸ್ ವಿಷಯಗಳ ಬಗ್ಗೆ ಹೆಚ್ಚು ಹೆಸರುವಾಸಿಯಾಗಿರುವ ನಿರ್ದೇಶಕ ಕೌಶಿಕ್ ಅವರ ಈ ಸಿನಿಮಾಗೆ, ಆಗಲೇ ಸಹಿ ಕೂಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆ ಖುಷಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ ನಟಿ ದಿವ್ಯಾ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇನೇ ಮಾಹಿತಿಯ ಶೇರ್ ಮಾಡಿ. ನಹಾಗೆ ದಿವ್ಯಾ ಉರುಡುಗ ಅವರಿಗೆ ಶುಭವಾಗಲಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು..