Divya Urudaga : ಐಟಂ ಹಾಡಿನ ವಿಕ್ರಾಂತ್ ರೋಣ ಎಕ್ಕ ಸಕ್ಕ ಹಾಡಿಗೆ ಜೋಡಿ ಡ್ಯಾನ್ಸ್ ಮಾಡಿದ ದಿವ್ಯಾ ಅರವಿಂದ್..!

By Infoflick Correspondent

Updated:Sunday, June 26, 2022, 09:38[IST]

Divya Urudaga : ಐಟಂ ಹಾಡಿನ ವಿಕ್ರಾಂತ್ ರೋಣ ಎಕ್ಕ ಸಕ್ಕ ಹಾಡಿಗೆ ಜೋಡಿ ಡ್ಯಾನ್ಸ್ ಮಾಡಿದ ದಿವ್ಯಾ ಅರವಿಂದ್..!

ಕನ್ನಡ ಚಿತ್ರರಂಗದ ನಟಿ ದಿವ್ಯ ಉರುಡುಗ ಅವರು ಹುಲಿರಾಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಾರೆ. ಆದರೆ ಅವರಿಗೆ ಹೆಚ್ಚು ಹೇಳಿಕೊಳ್ಳುವ ಮಟ್ಟಕ್ಕೆ ಯಶಸ್ಸು ತಂದುಕೊಡುವುದಿಲ್ಲ ಈ ಸಿನಿಮಾ. ನಟಿ ದಿವ್ಯ ಆನಂತರದ ದಿನಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು ಮಾತ್ರ ಸೀರಿಯಲ್ ನಲ್ಲಿಯೇ ಮತ್ತು ಗುರುತಿಸಿಕೊಂಡಿದ್ದು ಕೂಡ ಸಪ್ತಪದಿ ಎಂಬ ಸೀರಿಯಲ್ ಮೂಲಕವೆ ಎಂದು ಹೇಳಬಹುದು. ಹಾಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಸೀಸನ್ ಎಂಟರಲ್ಲಿ ನಟಿ ದಿವ್ಯ ಅವರು ಟಾಪ್ 5 ಫೈನಲಿಸ್ಟ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದವರು. ಸ್ವಲ್ಪದರಲ್ಲಿ ಬಿಗ್ ಬಾಸ್ ಕಿರೀಟ ತಪ್ಪಿತು ಇವರಿಗೆ ಎಂದು ಹೇಳಬಹುದು. ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟ ದಿವ್ಯಾ ಹಾಗೂ ಅರವಿಂದ್ ಕೆಪಿ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ..

ಅರವಿಂದ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ಒಬ್ಬ ಬೈಕ್ ರೇಸರ್ ಆಟಗಾರನಾಗಿ ಬಿಗ್ ಬಾಸ್ ಮನೆ ಎಂಟ್ರಿಕೊಟ್ಟ ಅರವಿಂದ್ ಕೆಪಿ ಅವರು 2019ರಲ್ಲಿ ಕತಾರ್ ಮುಕ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಈ ಬಿಗ್ ಬಾಸ್ ಮನೆಯೊಳಗೆ ಇರುವಷ್ಟು ದಿನ ಕೆಪಿ ಅರವಿಂದ್ ಹಾಗೂ ದಿವ್ಯ ಒಳ್ಳೆಯ ಸ್ನೇಹಿತರಾಗಿದ್ದರು.  

ದಿನಗಳು ಕಳೆಯುತ್ತಾ ಹೋದಂತೆ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು ಜೊತೆಗೆ ಮದುವೆಯಾಗುತ್ತಾರೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ಎಂದು ಸಾಕಷ್ಟು ಅಭಿಮಾನಿಗಳು ಕೂಡ ಮಾತನಾಡಿಕೊಂಡರು. ಅದಕ್ಕೆ ತಕ್ಕಂತೆ ಇದೀಗ ಈ ಜೋಡಿ ಅಲ್ಲಲ್ಲಿ ಓಡಾಡುತ್ತಿದೆ. ಸಾಕಷ್ಟು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ದಿವ್ಯಾ ಅರವಿಂದ್ ಜೋಡಿ.

ಹೌದು ವಿಕ್ರಂತ್ ರೋಣ ಎಂಬ ಕಿಚ್ಚ ಸುದೀಪ್ ಅವರ ಅಭಿನಯದ ಫ್ಯಾನ್ ವರ್ಡ್ ಚಿತ್ರ ಮುಂದಿನ ತಿಂಗಳು 28ಕ್ಕೆ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಐಟಂ ಹಾಡದ ಎಕ್ಕಸಕ್ಕ ಹಾಡಿಗೆ ಈ ದಿವ್ಯ ಜೋಡಿ ಸಕ್ಕತ್ ಸ್ಟೆಪ್ ಹಾಕಿದೆ. ಎಕ್ಕಸಕ್ಕ ಹಾಡಿಗೆ ಅಸಲಿಗೆ ಅರವಿಂದ್ ಕೆಪಿ ಹಾಗೂ ದಿವ್ಯ ಹೇಗೆ ಕುಣಿದಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ಕ್ಯೂಟ್ ಇರುವ ಆ ವಿಡಿಯೋ. ನೀವು ಕೂಡ ವಿಡಿಯೋ ನೋಡಿ ಇಷ್ಟವಾದರೆ ಶೇರ್ ಮಾಡಬಹುದು ಧನ್ಯವಾದ..

 
 
 
 
 
 
 
 
 
 
 
 
 
 
 

A post shared by Aravind K P (@aravind_kp)