ಮನದ ಸಂಕಟವನ್ನು ಕಣ್ಣಿರು ಹಾಕುತ್ತಲೇ ಹೇಳಿಕೊಂಡ ಕಾಮಿಡಿ ಕಿಲಾಡಿಗಳು ದಿವ್ಯಾ!!

By Infoflick Correspondent

Updated:Saturday, July 2, 2022, 20:35[IST]

ಮನದ ಸಂಕಟವನ್ನು ಕಣ್ಣಿರು ಹಾಕುತ್ತಲೇ ಹೇಳಿಕೊಂಡ ಕಾಮಿಡಿ ಕಿಲಾಡಿಗಳು ದಿವ್ಯಾ!!

ಕಾಮಿಡಿ ಕಿಲಾಡಿಗಳು ಮೂಲಕ ಅದೆಷ್ಟೋ ಹಳ್ಳಿ ಪ್ರತಿಭೆಗಳು ಬೆಳಕಿಗೆ ಬಂದಿವೆ. ಮಂಜು ಪಾವಗಡ, ಗೋವಿಂದೇಗೌಡ, ದಿವ್ಯಾ, ಶಿವರಾಜ್ ಕೆಆರ್ ಪೇಟೆ, ಸಂತೋಷ್, ಮಡೆನೂರು ಮನು, ರಾಮದುರ್ಗದ ಅಪ್ಪಣ್ಣ, ಸೂರಜ್, ನಯನಾ, ಚಂದು ಬಸಯ್ಯ ಸೇರಿದಂತೆ ಹಲವರು ಫೇಮಸ್ ಆಗಿದ್ದಾರೆ. ಸಿನಿಮಾ, ಕಿರುತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಿಂದ ಖ್ಯಾತರಾಗಿರುವ ಗೋವಿಂದೇ ಗೌಡ ಕೆಜೆಎಫ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.  

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಟ ಗೋವಿಂದೇ ಗೌಡ ಹಾಗೂ ದಿವ್ಯಾ ಪ್ರೀತಿಸಿ ಮದುವೆಯಾಗಿದ್ದಾರೆ. ದಿವ್ಯಾ ಇತ್ತೀಚೆಗಷ್ಟೇ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಪತ್ನಿಯರಿಬ್ಬರೂ ಕೆಜಿಎಫ್ ಚಿತ್ರದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇನ್ನು ಇದೀಗ ಇಬ್ಬರೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೋಡಿ ನಂ.೧ ರಿಯಾಲಿಟಿ ಶೋನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಜೋಡಿಗಳೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ದಿವ್ಯಾಶ್ರೀ ಕೂಡ ತಮಗಾದ ಕೆಟ್ಟ ಅನುಭವಗಳನ್ನು ಹೇಳಿಕೊಂಡಿದ್ದು, ಕಣ್ಣೀರಿಟ್ಟಿದ್ದಾರೆ. ಒಳ್ಳೆಯ ಕೆಲಸದಲ್ಲಿದ್ದ ದಿವ್ಯಾಶ್ರೀ ಅವರು, ಕಾಮಿಡಿ ಕಿಲಾಡಿಗಳಿಗಾಗಿ ಉದ್ಯೋಗ ಬಿಟ್ಟು ಬಂದಿದ್ದರಂತೆ. ಸಾಧಿಸುವ ಹುಮ್ಮಸ್ಸಿನಲ್ಲಿ ಬಂದಿದ್ದ ಅವರಿಗೆ ಜೊತೆಗೆ ಇದ್ದವರೇ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದರಂತೆ. ದಿವ್ಯಾಶ್ರೀ ಅವರು ಮಾತನಾಡಿದವರೊಂದಿಗೆಲ್ಲಾ ಸಂಬಂಧವನ್ನು ಕಟ್ಟಿ ಮಾತನಾಡುತ್ತಿದ್ದರಂತೆ. ಸಾಯುವುದಕ್ಕೂ ತೀರ್ಮಾನಿಸಿದ್ದ ದಿವ್ಯಾಶ್ರೀಗೆ ಅವರ ತಂದೆ ಗೋವಿಂದೇ ಗೌಡ ಅವರನ್ನೇ ಮದುವೆಯಾಗುವಂತೆ ಸಲಹೆ ಕೊಟ್ಟರಂತೆ. ತಂದೆಯ ಮಾತನ್ನು ಕೇಳಿದ್ದಕ್ಕೆ ಇಂದು ನಾನು  ಸುಖವಾಗಿದ್ದೇನೆ ಎಂದು ಹೇಳಿದ್ದಾರೆ.