Yash : ರಾಕಿಭಾಯ್ ಯಶ್ ಅವರ ಒಟ್ಟು ಆಸ್ತಿ ಮೌಲ್ಯವೆಷ್ಟು ಗೊತ್ತಾ..?

By Infoflick Correspondent

Updated:Thursday, June 23, 2022, 12:56[IST]

Yash :  ರಾಕಿಭಾಯ್ ಯಶ್ ಅವರ ಒಟ್ಟು ಆಸ್ತಿ ಮೌಲ್ಯವೆಷ್ಟು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 1000ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್ ಆದ ಮೇಲೆ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕೆಜಿಎಫ್ 2 ಸಿನಿಮಾಗೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗಿವೆ. ಚಿತ್ರ ಮತ್ತೆ ಮತ್ತೆ ವಿಶ್ವ ದಾಖಲೆ ಬರೆಯುತ್ತಿದೆ. ಕೆಜಿಎಫ್ ಚಾಪ್ಟರ್ -2 ಸಿನಿಮಾ ಇಡೀ ಭಾರತದ ಚಿತ್ರರಂಗವನ್ನೇ ಶೇಕ್ ಮಾಡಿದೆ. 

ಇನ್ನು ಕೆಜಿಎಫ್ ಚಾಪ್ಟರ್ 1 ರಿಂದ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರು. ಆದರೆ, ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಇಡೀ ಜಗತ್ತನ್ನೇ ಅಲುಗಾಡಿಸಿದ್ದು, ರಾತ್ರೋರಾತ್ರಿ ಇಂಟರ್ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು. ಕೆಜಿಎಫ್ ಚಿತ್ರದಲ್ಲಿ ನಟಿಸಲು ರಾಕಿಂಗ್ ಸ್ಟಾರ್ ಯಶ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ..? ಬರೋಬ್ಬರಿ 27 ಕೋಟಿ ಹಣವನ್ನು ಕೆಜಿಎಫ್ 2 ಚಿತ್ರದಲ್ಲಿ ನಸಿಸಲು ಯಶ್ ಅವರು ಸಂಭಾವನೆ ಪಡೆದಿದ್ದಾರೆ. ಇನ್ನು ಇದೀಗ ಯಶ್ ಅವರ ೊಟ್ಟು ಆಸ್ತಿಯ ಮೌಲ್ಯವೆಷ್ಟು ಎಂದು ನೋಡೋಣ ಬನ್ನಿ.. 

ಕಳೆದ ವರ್ಷವಷ್ಟೇ ಬೆಂಗಳೂರಿನ ವಿಂಡ್ಸನ್ ಮ್ಯಾನರ್ ಬಳಿ ಇರುವ ಪ್ರಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಅನ್ನು ಖರೀದಿಸಿದ್ದರು. ಆದರೆ ಇದಕ್ಕೂ ಮುನ್ನ ಅವರು ತಮ್ಮ ಹುಟ್ಟೂರಾದ ಹಾಸನದಲ್ಲಿ ಮನೆ ಹಾಗೂ ಜಮೀನನ್ನು ಖರೀದಿಸಿದ್ದರು. 68*70 ವಿಸ್ತೀರ್ಣದ ವಿಶಾಲ ಮನೆ ಇದಾಗಿದೆ. ಜೊತೆಗೆ ಕೃಷಿ ಕುಟುಂಬದಿಂದ ಬಂದ ಯಶ್ ಆಸೆಯಂತೆಯೇ ತೋಟವನ್ನೂ ಖರೀದಿಸಿದ್ದಾರೆ. ಅಟ್ಟಾವರ ಎಂಬಲ್ಲಿ 80 ಎಕರೆಯ ತೋಟವನ್ನು ಖರೀದಿಸಿದ್ದು, ಮಾವು, ಸಪೋಟ, ಗೋಡಂಬಿ ತೋಟ ಇದಾಗಿದೆ. ಇದೆಲ್ಲದರ ೊಟ್ಟು ಮೌಲ್ಯ ಬರೋಬ್ಬರಿ 53 ಕೋಟಿ ರೂಪಾಯಿಯಾಗಿದೆ ಇದೆಲ್ಲವನ್ನು ಲೆಕ್ಕ ಹಾಕಿದರೆ ಸುಮಾರು ೧೦೦ ಕೋಟಿ ಅಂದಾಜು ಅಸ್ತಿ ಇರಬಹುದು ಎಂದು ಹೇಳಲಾಗುತ್ತಿದೆ