Maha Lakshmi : ಹನಿಮೂನ್ ಗಾಗಿ ರವೀಂದರ್ ಚಂದ್ರಶೇಖರನ್ ಮಾಡಿದ ಖರ್ಚೆಷ್ಟು ಗೊತ್ತಾ..?

By Infoflick Correspondent

Updated:Monday, September 19, 2022, 13:49[IST]

Maha Lakshmi : ಹನಿಮೂನ್ ಗಾಗಿ ರವೀಂದರ್ ಚಂದ್ರಶೇಖರನ್ ಮಾಡಿದ ಖರ್ಚೆಷ್ಟು ಗೊತ್ತಾ..?

ಕೆಲ ದಿನಗಳ ಹಿಂದೆ ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ಸಿನಿಮಾ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇಬ್ಬರೂ ಮದುವೆಯಾಗಿದ್ದರು. ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು. ಅಲ್ಲದೇ, ರವೀಂದರ್ ಚಂದ್ರಶೇಖರನ್ ಅವರು ನೋಡಲು ಸಿಕ್ಕಾಪಟ್ಟೆ ದಪ್ಪಗಿದ್ದಾರೆ. ಇನ್ನು ನಟಿ ಮಹಾಲಕ್ಷ್ಮಿ ಸುಂದರವಾಗಿದ್ದು, ಅದು ಹೇಗೆ ಇವರಿಬ್ಬರೂ ಜೋಡಿಯಾರು ಎಂಬುದೇ ಹಲವರಲ್ಲಿ ಹುಟ್ಟಿದ ಪ್ರಶ್ನೆ. ಕೆಲವರು ರವೀಂದರ್ ಅವರ ಬಳಿ ಇರುವ ಹಣ ನೋಡಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. 

ಆದರೆ ನಟಿ ಮಹಾಲಕ್ಷ್ಮಿ ಹಾಗೂ ಸಿನಿಮಾ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೋಡಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಟ್ರೋಲ್ ಪೇಜ್ ಗಳಂತೂ ಇವರಿಬ್ಬರನ್ನೂ ಟ್ರೋಲ್ ಮಾಡಿದ್ದೇ ಮಾಡಿದ್ದು. ಕಳೆದ ವಾರ ಇದೆಲ್ಲವನ್ನೂ ನೋಡಿ ಬೇಸತ್ತಿದ್ದಮಹಾಲಕ್ಷ್ಮಿ ಅವರು ಲೈವ್ ಬಂದು ನನ್ನ ಪತಿಯ ಬಗ್ಗೆ ಹೀಯಾಳಿಸಬೇಡಿ. ಅವರಿಗೆ ಅವಮಾನ ಮಾಡಬೇಡಿ. ನಾವಿಬ್ಬರು ಪ್ರೀತಿಸಿ, ಇಷ್ಟಪಟ್ಟು ಮದುವೆಯಾಗಿದ್ದೇವೆ. ಹಣ-ಆಸ್ತಿಗಾಗಿ ಅಲ್ಲ ಎಂದು ಹೇಳಿದ್ದರು. ಹಾಗಿದ್ದರೂ ಇವರಿಬ್ಬರ ಬಗ್ಗೆ ಯಾವುದೇ ಸುದ್ದಿ ಇದ್ದರೂ ವೈರಲ್ ಆಗುತ್ತಿದೆ.     

ಇದೀಗ ನಟಿ ಮಹಾಲಕ್ಷ್ಮಿ ಹಾಗೂ ಸಿನಿಮಾ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಹನಿಮೂನ್ ಗೆ ತೆರಳಿದ್ದಾರೆ. ಮಹಾಲಕ್ಷ್ಮಿ ಅವರಿಗೋಸ್ಕರ ರವೀಂದರ್ ಅವರು ಹೋಟೆಲ್ ರೂಮ್ ನಲ್ಲೇ ಸ್ವರ್ಗ ಸೃಷ್ಟಿಸಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದೆಲ್ಲಾ ಸುಳ್ಳು, ನಾವಿಬ್ಬರೂ ದೇವಸ್ಥಾನಕ್ಕೆ ಹೋಗಿದ್ದೆವು ಎಂದು ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೂ ಹನಿಮೂನ್ ಗೆ ಹೋಗಿದ್ದಾರೆ ಎಂದೇ ಸುದ್ದಿಯಾಗುತ್ತಿದೆ. ಇನ್ನು ಇವರಿಬ್ಬರು ಒಬ್ಬರ ಬಗ್ಗೆ ಒಬ್ಬರು ಹೊಗಳುತ್ತಾ ತಮ್ಮ ತಮ್ಮ ಖಾತೆಗಳಲ್ಲಿ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.