ಸೋನು ಶ್ರೀನಿವಾಸ್ ಗೌಡ ಮೊದಲ ಹೆಸರೇನು ಇವರು ಮೊದಲು ಟ್ರೋಲ್ ಆಗಿದ್ದು ಯಾವಾಗಿನಿಂದ ? ಇಲ್ಲಿದೆ ರೋಚಕ ಕಥೆ

By Infoflick Correspondent

Updated:Thursday, August 11, 2022, 09:00[IST]

ಸೋನು  ಶ್ರೀನಿವಾಸ್  ಗೌಡ ಮೊದಲ ಹೆಸರೇನು ಇವರು ಮೊದಲು ಟ್ರೋಲ್ ಆಗಿದ್ದು ಯಾವಾಗಿನಿಂದ ? ಇಲ್ಲಿದೆ ರೋಚಕ ಕಥೆ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ತನ್ನ  ಅಸಲಿ ಮುಖದ ಜೊತೆ ಅಸಲಿ ಹೆಸರನ್ನು ಕೂಡ ಸೋನು ಗೌಡ ಬಹಿರಂಗಪಡಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಸೋನು ಗೌಡ, ನನ್ನ ನಿಜವಾದ ಹೆಸರು ಸೋನು ಅಲ್ಲ ಎಂದು ನಿಜನಾಮ ಹೇಳಿದ್ದಾರೆ ಹಾಗು ಅವರು ಮೊದಲು ಟ್ರೋಲ್ ಆದ ಘಟನೆ ಮತ್ತು ಅವರ ಭಯದ ಕುರಿತು ಹೇಳಿಕೊಂಡಿದ್ದಾರೆ. 

ಸೋನು ಶ್ರೀನಿವಾಸ್ ಗೌಡ ಅವರ ಮೊದಲ ಹೆಸರೇನು ಗೊತ್ತಾ?ಶಾಂಭವಿ ಶ್ರೀನಿವಾಸ ಗೌಡ ಎಂಬುದು ನನ್ನ ಒರಿಜಿನಲ್ ಹೆಸರು. ಈ ಹಿಂದೆ ಯಾರೋ 'ಸೋನು' ಅಂತ ಕರೆದಿದ್ದರು. ಈ ನಿಕ್ ನೇಮ್ ಇಷ್ಟವಾಗಿ ಆ ಬಳಿಕ ಅದನ್ನೇ ಇಟ್ಟುಕೊಂಡೆ ಎಂದಿದ್ದಾರೆ. ಮಂಡ್ಯ ಮೂಲದ ಸೋನು ಶ್ರೀನಿವಾಸ್ ಗೌಡ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ಈಗ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.    

ಫಸ್ಟ್ ಇಂದಾನೂ ಹೀರೋಯಿನ್ ಆಗಬೇಕು ಅಂತ ಆಸೆ ಇತ್ತು. ಮೊದಲು ಟಿಕ್ ಟಾಕ್ ವಿಡಿಯೋಸ್ ನೋಡ್ತಿದ್ದೆ. ಆಮೇಲೆ ನಾನೇ ವಿಡಿಯೋಸ್ ಮಾಡ್ತಿದ್ದೆ. ವಿಡಿಯೋಸ್ ಮಾಡ್ತಾ, ಮಾಡ್ತಾ ಫೇಮಸ್ ಆದೆ, ಟ್ರೋಲ್ ಕೂಡ ಆದೆ. ತುಂಬಾ ಪ್ರೀತ್ಸೋರೂ ಇದ್ದಾರೆ, ಟ್ರೋಲ್ ಮಾಡೋರೂ ಇದ್ದಾರೆ. ಎಷ್ಟೋ ಬಾರಿ ಬೇಜಾರಾಗಿ ಅತ್ತಿದ್ದೇನೆ. ಸೋಷಿಯಲ್ ಮೀಡಿಯಾ ಬಿಟ್ಟುಬಿಡಬೇಕು. ಆಸ್ಟ್ರೇಲಿಯಾಗೆ ಹೋಗಿಬಿಡಬೇಕು. ಅಲ್ಲಿ ನೆಮ್ಮದಿಯಾಗಿ ರೋಡ್‌ನಲ್ಲಿ ತಿರುಗಾಡಬಹುದು. ಇಲ್ಲಿ ರೋಡ್‌ನಲ್ಲಿ ನಡೆದುಕೊಂಡು ಹೋಗೋಕೆ ಭಯ. ಯಾಕಂದ್ರೆ, ಯಾರಾದರೂ ವಿಡಿಯೋ ಮಾಡಿ ಟ್ರೋಲ್ ಮಾಡುತ್ತಾರೆ ಎಂದು ತಮ್ಮ ಆಸೆ ಹಾಗು ಭಯವನ್ನು ವ್ಯಕ್ತಪಡಿಸಿಕೊಂಡಿದ್ದಾರೆ. 

ಒಮ್ಮೆ ಗೋಲ್‌ಗಪ್ಪಾ ತಿಂದಿದ್ದಕ್ಕೆ ಸೋನು ಶ್ರೀನಿವಾಸ್ ಗೌಡ ಟ್ರೋಲ್ ಆಗಿದ್ದರಂತೆ!  ಒಂದ್ಸಲಿ ನಮ್ಮನೆ ರೋಡ್‌ ಪಕ್ಕದಲ್ಲಿ ಗೋಲ್‌ಗಪ್ಪಾ ತಿನ್ನುತ್ತಿದ್ದೆ. ಯಾರೋ ವಿಡಿಯೋ ಮಾಡಿ ಟ್ರೋಲ್ ಮಾಡಿಬಿಟ್ಟಿದ್ದರು. ನನಗೆ ತುಂಬಾ ಶಾರ್ಟ್‌ ಟೆಂಪರ್. ಎಮೋಷನಲ್ ಆಗಿಬಿಡುತ್ತೇನೆ. ನಾನು ಈ ‘ಬಿಗ್ ಬಾಸ್’ ಶೋನ ವಿನ್ ಆಗೋಕೆ ಬಂದಿದ್ದೇನೆ’’ ಎಂದು ಸೋನು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.