Rachita Ram : ಅಯ್ಯೋ.. ಡಾಲಿ ಧನಂಜಯ್‌ ಪಂಚೆ ಕಳಚಿ ಹೋಯ್ತು: ರಚಿತಾ ರಾಮ್‌ ಮಾಡಿದ್ದೇನು..?

By Infoflick Correspondent

Updated:Friday, August 19, 2022, 19:14[IST]

Rachita Ram : ಅಯ್ಯೋ.. ಡಾಲಿ ಧನಂಜಯ್‌ ಪಂಚೆ ಕಳಚಿ ಹೋಯ್ತು: ರಚಿತಾ ರಾಮ್‌ ಮಾಡಿದ್ದೇನು..?

'ಡಾಲಿ' ಧನಂಜಯ್ ಹಾಗೂ ರಚಿತಾ ರಾಮ್ ನಟನೆಯ ಬಹು ನಿರೀಕ್ಷಿತ ಚಿತ್ರ ಮಾನ್ಸೂನ್‌ ರಾಗ. ಈ ಚಿತ್ರದ ಟ್ರೈಲರ್‌ ಹಾಗೂ ಹಾಡುಗಳೆಲ್ಲವೂ ಸಖತ್‌ ಸೌಂಡ್‌ ಮಾಡಿವೆ. ಇದರಲ್ಲಿ ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆಯಾಗಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರ ಇಂದು ರಿಲೀಸ್‌ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಈ ವೇಳೆ ನಡೆಯ ಬಾರದ ಘಟನೆಯೊಂದು ನಡೆದು ಹೋಗಿದೆ.  

ಮಾನ್ಸೂನ್‌ ರಾಗ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಹಾಸಿನಿ ಕೂ ನಟಿಸಿದ್ದು, ಎಸ್. ರವೀಂದ್ರನಾಥ್ ಅವರು ನಿರ್ದೇಶನ ಮಾಡಿದ್ದಾರೆ. ವಿಖ್ಯಾತ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಅನೂಪ್ ಸೀಳಿನ್ ಅವರ ಸಂಗೀತವಿದೆ. ಸಿನಿಮಾದ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಸಿನಿಮಾವನ್ನು ರಿಲೀಸ್‌ ಮಾಡಿಲ್ಲ. ಚಿತ್ರದ ಸಣ್ಣ-ಪುಟ್ಟ ಕೆಲಸಗಳು ಬಾಕಿ ಇವೆ. ಅದನ್ನು ಮುಗಿಸಿ ರಿಲೀಸ್‌ ಮಾಡುವುದಾಗಿ ಚಿತ್ರ ತಂಡ ತಿಳಿಸಿದೆ. ಈ ಬಗ್ಗೆ ಡಾಲಿ ಧನಂಜಯ್‌ ಹಾಗೂ ರಚಿತಾ ರಾಮ್‌ ಅವರು ಸುದ್ದಿಗೋಷ್ಠಿ ನಡೆಸಿದ್ದರು.   

ಚಿತ್ರದ ಹಿನ್ನೆಲೆ ಸಂಗೀತ, ಸೌಂಡ್ ಎಫೆಕ್ಟ್, ಸಿನಿಮಾದ ಕ್ವಾಲಿಟಿಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಇನ್ನಷ್ಟು ಒಳ್ಳೆಯ ಫೀಲ್‌ ಕೊಡಲು ಸಮಯ ಬೇಕಿದೆ. ಹಾಗಾಗಿ ಸಿನಿಮಾ ರಿಲೀಸ್‌ ಮಾಡುವುದು ತಡವಾಗುತ್ತಿದೆ. ನೀವೇಲ್ಲರೂ ನಮಗೆ ಸಪೋರ್ಟ್‌ ಮಾಡುತ್ತಿರುವುದಕ್ಕೆ ಧನ್ಯವಾದಗಳು ಎಂದು ಗತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ಮುಗಿದ ಮೇಲೆ ಡಾಲಿ ಧನಂಜಯ್‌ ಅವರು ಎದ್ದು ನಿಂತಿದ್ದಾರೆ. ಈ ವೇಳೆ ಅವರ ಪಂಚೆ ಲೂಸ್‌ ಆಗಿದೆ. ಇದನ್ನು ಸರಿ ಮಾಡಿಕೊಳ್ಳುವಾಗ ಪಕ್ಕದಲ್ಲೇ ಇದ್ದ ರಚಿತಾ ರಾಮ್‌ ಅವರು ಪಂಚೆ ಸರಿ ಮಾಡಿಕೊಳ್ಳುತ್ತಿರುವುದನ್ನು ನೋಡಿ ನಾನ್‌ ಸ್ಟಾಪ್‌ ನಕ್ಕಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ.