ಅತೀ ಚಿಕ್ಕವಯಸ್ಸಿಗೆ ದೊಡ್ಡ ಸಾಧನೆ ಮಾಡಿದ ಡಾ. ಬ್ರೋ

By Infoflick Correspondent

Updated:Wednesday, June 15, 2022, 15:58[IST]

ಅತೀ ಚಿಕ್ಕವಯಸ್ಸಿಗೆ ದೊಡ್ಡ ಸಾಧನೆ ಮಾಡಿದ ಡಾ. ಬ್ರೋ

ಡಾ.ಬ್ರೋ.. ಈ ಹೆಸರನ್ನು ಕೇಳಿದರೆ ಕೆಲವರಿಗೆ ಯಾರಪ್ಪಾ ಹೀಗೆಲ್ಲಾ ಹೆಸರಿಟ್ಟುಕೊಂಡಿದ್ದಾರೆ ಎನಿಸಬಹುದು. ಆದರೆ ಯೂಟ್ಯೂಬ್ ನೋಡುವವರಿಗೆ ಈ ಹೆಸರು ಕೊಂಚ ಚಿರಪರಿಚಿತವಾಗಿರುತ್ತದೆ. ಯಾಕೆಂದರೆ, ಡಾ. ಬ್ರೋ ಎಂಬ ಕನ್ನಡ ವ್ಲೊಗ್ ಒಂದು ಇದೆ. ಒಮ್ಮೆ ಈ ಬ್ಲಾಗ್ ಗೆ ಭೇಟಿ ಕೊಡಿ. ನಿಮಗೆ ಆಶ್ಚರ್ಯವಾಗದೇ ಇರದು. ಈತ ಚಿಕ್ಕ ವಯಸ್ಸಿಗೆ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾನೆ. ಸ್ವಂತ ಹಣದಲ್ಲಿ ದೇಶ ಮಾತ್ರವಲ್ಲದೇ, ಹಲವು ದೇಶಗಳನ್ನು ಕೂಡ ಸುತ್ತಿದ್ದಾನೆ. ಯಾರು ಆ ಹುಡುಗ..? ಹೇಗೆ ಫೇಮಸ್ ಆದ..? ಹೀಗೆ ದೇಶ-ವಿದೇಶ ಸುತ್ತಲು ಕಾರಣವೇಣು ಎಂಬುದನ್ನು ನೋಡೋಣ ಬನ್ನಿ..

ಡಾ. ಬ್ರೋ ಎಂದೆ ಫೇಮಸ್ ಆಗಿರುವ ಈತನ ಹೆಸರು ಗಗನ್ ಶ್ರೀನಿವಾಸ್. ಮೂಲತಃ ಬೆಂಗಳೂರಿನವರಾಗಿರುವ ಗಗನ್. ದೇಶ-ವಿದೇಶಗಳಿಗೆ ಒಬ್ಬಂಟಿಯಾಗಿಯೇ ಸಂಚಾರವನ್ನು ಮಾಡುತ್ತಿರುತ್ತಾರೆ. ಮೊದಲು ರಾಜ್ಯದ ಹಲವು ಜಾಗಳಿಗೆ ಭೇಟಿ ಕೊಡುತ್ತಿದ್ದ. ನಂತರ ರಾಜ್ಯದಿಂದ ಅಕ-ಪಕ್ಕದ ರಾಜ್ಯಗಳಿಗೆ ಭೇಟಿ ಕೊಡಲು ಶುರು ಮಾಡಿದರು. ನಂತರ ಭಾರತದ ಅನೇಕ ರಾಜ್ಯಗಳನ್ನು ಸುತ್ತಾಡಿ ಎಲ್ಲೆಡೆ ವೀಡಿಯೋಗಳನ್ನು ಮಾಡುತ್ತಿದ್ದರು. ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ಕೊಡ ಡಾ.ಬ್ರೋ ವ್ಲೋಗ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದರು.   

ಕೇವಲ ಭಾರತ ದೇಶ ಮಾತ್ರವಲ್ಲದೇ, ದುಬೈ, ರಷ್ಯ, ಪಾಕಿಸ್ತಾನ ದೇಶಗಳಲ್ಲೂ ಪ್ರವಾಸ ಕೈಗೊಂಡಿದ್ದಾರೆ. ಈಗ ಡಾ.ಬ್ರೋ ಅವರು ಇನ್ನಷ್ಟು ಫೇಮಸ್ ಆಗಿದ್ದಾರೆ. ಇನ್ನು ಇವರ ವಿಡಿಯೋಗಳಿಗೆ ಕನ್ನಡಿಗರು ಉತ್ತಮ ಬೆಂಬಲವನ್ನು ನೀಡಿದ್ದಾರೆ. ಹಾಗೆಯೇ ಇವರ ವಿಡಿಯೋಗಳು ಈಗಾಗಲೇ ಸಾಕಷ್ಟು ವೂವ್ಸ್ ಗಳನ್ನು ಕೂಡ ಪಡೆದಿವೆ. ಇನ್ನು ಇವರು ಪಾಕಿಸ್ತಾನಕ್ಕೆ ತೆರಳಿದ್ದ ವಿಡಿಯೋಗಳು ತುಂಬಾನೆ ವೈರಲ್ ಕೂಡ ಆಗಿದ್ದವು. ಕೆಲ ನ್ಯೂಸ್ ಚಾನೆಲ್ ಗಳಲ್ಲಿ ಈ ಬಗ್ಗೆ ಗಗ್ ಮಾತನಾಡಿದ್ದರು ಕೂಡ. ಕೇವಲ 22 ವರ್ಷಕ್ಕೆ ಈ ಮಟ್ಟದ ಸಾಧನೆಯನ್ನು ಗಗನ್ ಅವರು ಮಾಡಿದ್ದಾರೆ. ( video credit :  kannada tech for you )