ಈ ಒಂದು ಗುಣದಲ್ಲಿ ಅಪ್ಪ ಹಾಗೂ ತಾತನನ್ನೂ ಮೀರಿಸಿದ ಪುನೀತ್ ಮಗಳು ದ್ರಿತಿ: ಏನ್ ಮಾಡಿದ್ದಾಳೆ ಗೊತ್ತಾ..?

By Infoflick Correspondent

Updated:Friday, January 14, 2022, 18:01[IST]

ಈ ಒಂದು ಗುಣದಲ್ಲಿ ಅಪ್ಪ ಹಾಗೂ ತಾತನನ್ನೂ ಮೀರಿಸಿದ ಪುನೀತ್ ಮಗಳು ದ್ರಿತಿ: ಏನ್ ಮಾಡಿದ್ದಾಳೆ ಗೊತ್ತಾ..?

ಅಪ್ಪನ ಹಾದಿಯಲ್ಲೇ ನಡೆದ ಪುನೀತ್ ರಾಜ್ ಕುಮಾರ್ ಕೂಡ ತಮ್ಮ ನೇತ್ರಗಳನ್ನು ದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್ ಅವರ ತಂದೆ ಡಾ.ರಾಜ್ ಕುಮಾರ್ ಕೂಡ ಅವರ ಕಣ್ಣುಗಳನ್ನು ದಾನ ಮಾಡಿದ್ದರು. ಅದರಂತೆಯೇ ಅಪ್ಪು ಕೂಡ ಅವರ ನೇತ್ರಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು. ಅಪ್ಪು ಅವರ ಕಣ್ಣಿನಿಂದ ನಾಲ್ಕು ಜನರ ಬಾಳಲ್ಲಿ ಬೆಳಕು ಮೂಡಿತ್ತು. ಈ ವಿಚಾರ ತಿಳಿದ ಮೇಲೆ ಪುನೀತ್ ರಾಜ್ ಕುಮಾರ್ ಅವರ ಸಾವಿರಾರು ಅಭಿಮಾನಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. 

ಪುನೀತ್ ರಾಜ್ ಕುಮಾರ್ ಅವರಿಗೆ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಅಭಿಮಾನಿಗಳೇ ನಮ್ಮನೆ ದೇವರು ಎಂದು ಭಾವಿಸಿದ್ಧ ಅಪ್ಪು, ನಿಜಕ್ಕೂ ಅವರೊಂದಿಗೆ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಅವರೀಗ ನಮ್ಮನ್ನೆಲ್ಲಾ ಅಗಲಿ ಎರಡೂವರೆ ತಿಂಗಳು ಕಳೆದು ಬಿಟ್ಟಿದೆ. ನೋಡು ನೋಡುತ್ತಿದ್ದಂತೆ ದಿನಗಳೂ ಉರುಳುತ್ತಿವೆ. ಜನರೂ ಕೂಡ ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ, ಅವರಂತೆಯೇ ಜೀವಿಸಲು ಮುಂದಾಗಿದ್ದಾರೆ. ಉಳ್ಳವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿಕೊಂಡು, ಇನ್ನೊಬ್ಬರಿಗೆ ಹಿತವಾಗುವಂತೆ ಬದುಕು ನಡೆಸಲು ಮುಂದಾಗಿದ್ದಾರೆ. ಇನ್ನು ರಾಜ್ ಕುಮಾರ್ ಕುಟುಂಬ ಕೇಳಬೇಕಾ.?   

ಇನ್ನು ಕುಟುಂಬದವರೆಲ್ಲರೂ ಬಲಗೈಲಿ ಮಾಡಿದ ಕೆಲಸವನ್ನು ಎಡಗೈಗೆ ತಿಳಿಯದಂತೆ ತಮ್ಮ ಕೆಲಸಗಳನ್ನು ತಾವು ಮಾಡುತ್ತಿತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ದಾನ-ಧರ್ಮಗಳನ್ನು ಮಾಡುತ್ತಿದ್ದಾರೆ. ರಾಜ್ ಕುಮಾರ್ ಕುಟುಂಬದವರೆಲ್ಲರೂ ನೇತ್ರಗಳನ್ನು ದಾನ ಮಾಡಿದ್ದಾರೆ. ಕಳೆದ ತಿಂಗಳು ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ತಮ್ಮ ದೇಹಗಳನ್ನು ದಾನ ಮಾಡಿದ್ದರು. ಈ ಮೂಲಕ ಇತರರಿಗೆ ಮಾದರಿಯಾಗಿದ್ದರು. ಇನ್ನು ರಾಜ್ ಕುಮಾರ್ ಅವರ ಮಕ್ಕಳೇ ಹೀಗಿರುವಾಗ ಮೊಮ್ಮಕ್ಕಳನ್ನು ಕೇಳಬೇಕಾ..? ಅವರೂ ಕೂಡ ದಾನ-ಧರ್ಮಗಳನ್ನು ಮಾಡುವಲ್ಲಿ ಎತ್ತಿದ ಕೈ. 

ಪುನೀತ್ ರಾಜ್ ಕುಮಾರ್ ಅವರು ಕೋಟ್ಯಾಂತರ ಕೂಪಾಯಿ ದಾನ ಮಾಡಿದ್ದು, ಯಾರಿಗೂ ತಿಳಿಯದಂತೆ ಎಚ್ಚರವಹಿಸಿದ್ದರು. ಇನ್ನು ಇದೀಗ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ದಿೃತಿ ಕೂಡ ತಂದೆ ಹಾಗೂ ತಾತನ ದಾರಿಯಲ್ಲೇ ನಡೆಯುತ್ತಿದ್ದಾರೆ. ಕಳೆದ ತಿಂಗಳು ಅಂಧ ಮಕ್ಕಳನ್ನು ದಿೃತಿ ದತ್ತು ತೆಗೆದುಕೊಂಡಿದ್ದರು. ಅಂಧ ಮಕ್ಕಳ ಜೀವನ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ದಿೃತಿ ತಮ್ಮ ಕಣ್ಣು, ಹೃದಯ, ಕಿಡ್ನಿ ಹಾಗೂ ದೇಹವನ್ನು ದಾನ ಮಾಡಿದ್ದಾರೆ. ಈ ಮೂಲಕ ರಾಜ್ ಕುಮಾರ್ ಕುಟುಂಬದ ಕುಡಿ ತಾತ ಹಾಗೂ ಅಪ್ಪನಿಗಿಂತ ಗುಣದಲ್ಲಿ ಒಂದು ಕೈ ಮೇಲೆ ಎಂಬುದನ್ನು ತೋರಿಸಿದ್ದಾರೆ.