Chiranjeevi Sarja Raja Marthanda :ಚಿರು ಅಭಿನಯಿಸಿದ ಕೊನೆ ಸಿನಿಮಾದಲ್ಲಿ ಇದೆ ಇಷ್ಟೆಲ್ಲ ಕುತೂಹಲಕಾರಿ ಸಂಗತಿಗಳು ಹಾಗು ಈ ಇಬ್ಬರು ಖ್ಯಾತ ನಟರ ಧ್ವನಿ!
Updated:Thursday, May 5, 2022, 17:11[IST]

ಚಿರಂಜೀವಿ ಸರ್ಜಾ ನಮ್ಮನೆಲ್ಲಾ ಬಿಟ್ಟು ಹೋಗಿ ಎರಡು ವರ್ಷಗಳಾಗುತ್ತಿದೆ. ಅವರ ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ'. ಈ ಚಿತ್ರದ ರಿಲೀಸ್ಗಾಗಿ ಎಲ್ಲರೂ ಕಾಯುತ್ತಿದ್ದಾರೆ ಸದ್ಯ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಚಿತ್ರ ಬಿಡುಗಡೆ ಕುರಿತು ಮಾಹಿತಿ ಚಿತ್ರತಂಡ ಸುದ್ದಿಗೋಷ್ಠಿಯ ನಡೆಸಿದೆ. ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಮತ್ತು ಮೇಘನಾರಾಜ್ ಏನೆನು ಮಾತನಾಡಿದ್ದಾರೆ ಯಾವೆಲ್ಲ ಕುತೂಹಲಕರ ವಿಷಯ ಸಿನಿಮಾದಲ್ಲಿದೆ ? ಸಕಲ ಸುದ್ದಿ ಇಲ್ಲಿದೆ ನೋಡಿ
ಚಿರು ಸರ್ ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ನಂತರ ನಡೆಯಬಾರದ ಘಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಎಂದರು. ಮೇಘನಾ ರಾಜ್ ಹಾಗೂ ಸುಂದರ್ ರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ಅಂತ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಚಿರು ಮೇಲಿನ ಸಿಂಪಥಿಗೆ ಈ ಸಿನಿಮಾ ನೋಡಬೇಡಿ, ಅವರ ಮೇಲಿನ ಪ್ರೀತಿಗೆ ಚಿತ್ರ ನೋಡಿ' ಚಿರು ಬಹಳ ಇಷ್ಟಪಟ್ಟು ಮಾಡಿದ ಚಿತ್ರ ರಾಜಾ ಮಾರ್ತಾಂಡ. ಅದೇನೊ ಗೊತ್ತಿಲ್ಲ. ಅವರು ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಅಲ್ಲೇ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ಈ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಅಷ್ಟು ಈ ಚಿತ್ರವನ್ನು ಹಚ್ಚಿಕೊಂಡಿದ್ದರು ಎಂದು ಮೇಘನಾ ರಾಜ್ ಹೇಳಿದ್ದಾರೆ.
ಜೂನ್ನಲ್ಲಿ ಚಿತ್ರ ತೆರೆಗೆ ಬರಲಿದೆ. ದಿನಾಂಕ ನಿಗದಿಯಾಗಿದೆ. ಆದರೆ ಕೊರೊನಾ ನಾಲ್ಕನೇ ಅಲೆಯ ಪರಿಸ್ಥಿತಿ ನೋಡಿಕೊಂಡು ದಿನಾಂಕ ಘೋಷಣೆ ಮಾಡುತ್ತೇವೆ" ಎಂದರು ನಿರ್ದೇಶಕ ರಾಮ್ ನಾರಾಯಣ್. ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಚಿರು ಅವರ 101 ಅಡಿ ಎತ್ತರದ ಕಟೌಟ್ ನಿಲ್ಲಿಸಲಿದ್ದೇವೆ ಹಾಗೂ ರಾಯನ್ ರಾಜ್ ಸರ್ಜಾ ಅವರ 51 ಅಡಿ ಎತ್ತರದ ಕಟೌಟ್ ಸಹ ನಿಲ್ಲಿಸಲಿದ್ದೀವಿ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ' ಎಂದು ನಿರ್ಮಾಪಕ ಶಿವಕುಮಾರ್ ಹೇಳಿದರು
ಟ್ರೇಲರ್ಗೆ ಹಾಗು ಸಿನಿಮಾಗೆ ಧ್ರುವ ಧ್ವನಿ ನೀಡಿದ್ದಾರೆ. ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳ್ಳಲಿದೆ. ದರ್ಶನ್ ಅವರ ವಾಯ್ಸ್ ಓವರ್ ಈ ಸಿನಿಮಾಕ್ಕಿದೆ. ರಾಯನ್ ರಾಜ್ ಸರ್ಜಾ ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ರಾಮ್ ನಾರಾಯಣ್ 'ರಾಜಮಾರ್ತಾಂಡ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಶಿವಕುಮಾರ್ ಎನ್ ನಿರ್ಮಾಣ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಹಾಗೂ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ.