Druva Sarja : ಅಣ್ಣ ಚಿರಂಜೀವಿ ಸರ್ಜಾಗಾಗಿ ಅರಮನೆ ಕಟ್ಟಿಸಿದ ನಟ ಧೃವ ಸರ್ಜಾ

By Infoflick Correspondent

Updated:Saturday, May 21, 2022, 16:30[IST]

Druva Sarja :  ಅಣ್ಣ ಚಿರಂಜೀವಿ ಸರ್ಜಾಗಾಗಿ ಅರಮನೆ ಕಟ್ಟಿಸಿದ ನಟ ಧೃವ ಸರ್ಜಾ

ಅಂದು 2020ರ ಜೂನ್ 7. ಕೋವಿಡ್ ಮೊದಲನೇಯ ಅಲೆಯಿಂದ ಇಡೀ ಕರ್ನಾಟಕ ಸುಧಾರಿಸಿಕೊಳ್ಳುತ್ತಿತ್ತು. ಆದರೆ ಮಾಧ್ಯಮದಲ್ಲಿ ಹರಿದು ಬಂದು ಹಠಾತ್ ಸುದ್ದಿಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅದೇ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ತೆರಳಿದ್ದರು. ಅಂದು ಇಡೀ ಕರುನಾಡೇ ಕಂಬನಿ ಮಿಡಿದಿತ್ತು. ಸರ್ಜಾ ಕುಟುಂಬ ಮಗನನ್ನು ಕಳೆದುಕೊಂಡ ದುಖಃದ ಕತ್ತಲೆಗೆ ಜಾರಿದ್ದರು. ಇದೀಗ ಚಿರಂಜೀವಿ ಸರ್ಜಾ ಸಾವನ್ನಪ್ಪಿ ಹತ್ತಿರ ಹತ್ತಿರ ಎರಡು ವರ್ಷವಾಗುತ್ತಿದೆ. ಧೃಉವ ಸರ್ಜಾ ಇಂದಿಗೂ ಅಣ್ಣನ ನೆನಪಿನಲ್ಲಿ ದಿನ ಕಳೆಯುತ್ತಿದ್ದಾನೆ. 

ಇನ್ನು ಚಿರು ಸಾವನ್ನಪ್ಪಿದ ನಾಲ್ಕೇ ತಿಂಗಳಲ್ಲಿ ರಾಯನ್ ಜನಿಸಿದ್ದ. 2020ರ ಅಕ್ಟೋಬರ್ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜೂನಿಯರ್ ಚಿರು ಜನಿಸಿದ್ದು, ಎಲ್ಲರಲ್ಲೂ ಸಂತಸ ತಂದಿದ್ದ. ಇದೀಗ ಮನೆಯಲ್ಲಿ ಮಗು ಜೊತೆ ಮೇಘನಾ ರಾಜ್, ಸುಂದರ್ ರಾಜ್, ಪ್ರಮೀಳಾ ಜೋಶಾಯಿ ಆಡಿ ನಲಿಯುತ್ತಿದ್ದಾರೆ. ಆದರೂ ಧೃವ ಸರ್ಜಾ ಮಾತ್ರ ತನ್ನ ಅಣ್ಣನ ನೆನಪಿನಿಂದ ಹೊರ ಬಂದಿಲ್ಲ. ವಾರಕ್ಕೊಮ್ಮೆಯಾದರೂ ಅಣ್ಣನ ಸಮಾಧಿ ಬಳಿ ಹೋಗಿ ಕೆಲ ಸಮಯ ಅಲ್ಲೇ ಕಳೆದು, ಕಣ್ಣೀರಿಟ್ಟು ಬರುತ್ತಾನೆ. 

ಇದೀಗ ಅಣ್ಣನಿಗಾಗಿ ಧೃವ ಸರ್ಜಾ ಅರಮನೆಯ ನ್ನು ಕಟ್ಟಿಸುತ್ತಿದ್ದಾನೆ. ಅಂದರೆ, ಸಮಾಧಿಯನ್ನು ಕಟ್ಟಿಸಿದ್ದು, ಅಲ್ಲಿ ಮಿನಿ ಮ್ಯೂಸಿಯಂ ಕೂಡ ಮಾಡಿದ್ದಾನೆ. ಅಣ್ಣನ ಬಾಲ್ಯದ ಫೋಟೋಗಳು, ಸಿನಿಮಾಗಳ ಫೋಟೋಗಳನ್ನು ಇರಿಸಿದ್ದಾನೆ. ಈ ಮೂಲಕ ಅಣ್ಣನ ಸಂಪೂರ್ಣ ನೆನಪನ್ನು ಮಾಸದಂತೆ ನೋಡಿಕೊಳ್ಳುತ್ತಿದ್ದಾನೆ. ಚಿರಂಜೀವಿ ಸರ್ಜಾ ಹಾಗೂ ಧೃವ ಸರ್ಜಾ ಇಬ್ಬರೂ ಎಂದಿಗೂ ಅಣ್ಣ-ತಮ್ಮರ ರೀತಿ ಬಾಳಿದವರಲ್ಲ. ಒಳ್ಳೆಯ ಸ್ನೇಹಿತರಾಗಿ ಇಬ್ಬರೂ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು. ಆದರೆ ಅಣ್ಣನ ಸಾವು ಧೃವ ಬಾಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.