Dhruva Sarja : ಚಿರು ವಿನಾ ಆಗಮನಕ್ಕೆ ಕಾಯುತ್ತಿರುವ ಸರ್ಜಾ ಕುಟುಂಬ

By Infoflick Correspondent

Updated:Tuesday, September 6, 2022, 13:37[IST]

Dhruva Sarja :  ಚಿರು ವಿನಾ ಆಗಮನಕ್ಕೆ ಕಾಯುತ್ತಿರುವ  ಸರ್ಜಾ ಕುಟುಂಬ

ಚಿರಂಜೀವಿ ಪುತ್ರ ರಾಯನ್ ರಾಜ್ ಸರ್ಜಾ ಜೊತೆ ಆಟವಾಡಲು ಮತ್ತೊಂದು ಕಂದಮ್ಮ ಸರ್ಜಾ ಕುಟುಂಬಕ್ಕೆ ಎಂಟ್ರಿ ಕೊಡುತ್ತಿದೆ. ಆಕ್ಷನ್ ಪ್ರಿನ್ಸ್ಧ್ರುವ ಸರ್ಜಾ ಮನೆಯಲ್ಲಿ ಸಂತಸ ಮಾಡಿದೆ. ಇದಕ್ಕೆ ಕಾರಣ ಧ್ರುವ ಹಾಗೂ ಪ್ರೇರಣಾ. ಈ ಪ್ರೇರಣಾ ತುಂಬು ಗರ್ಭಿಣಿಯಾಗಿದ್ದಾರೆ. ಇದೇ ತಿಂಗಳಲ್ಲಿ ಹೆರಿಗೆಯಾಗಲಿದ್ದು, ಮನೆಗೆ ಅಥಿತಿ ಬರಲಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಹಾಗೂ ಪ್ರೇರಣಾ ಸಂತಸವನ್ನು ಕಳೆದ ವಾರ ಹಂಚಿಕೊಂಡಿದ್ದರು. 

ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಇಬ್ಬರೂ ಅಕ್ಕ-ಪಕ್ಕದ ಮನೆಯವರು. ಚಿಕ್ಕವರಿದ್ದಾಗಿನಿಂದಲೂ ಪ್ರೀತಿಸಿ ಮದುವೆಯಾದರು. 2018ರ ಡಿಸೆಂಬರ್ 9ರಂದು ಇಬ್ಬರ ನ ಇಶ್ಚಿತಾರ್ಥ ನೆರವೇರಿತು. ಧ್ರುವ ಸರ್ಜಾ, ಪ್ರೇರಣಾ ಶಂಕರ್ ಇಬ್ಬರೂ 2019ರ ನವೆಂಬರ್ನಲ್ಲಿ ಸಪ್ತಪದಿ ತುಳಿದರು. ಇನ್ನು ಪ್ರೇರಣಾ ಅಧ್ಯಾಪಕಿಯಾಗಿದ್ದು, ಸದ್ಯ ಬ್ರೇಕ್‌ ಪಡೆದಿದ್ದಾರೆ. ತುಂಬು ಗರ್ಭಿಣಿಯಾಗಿರುವ ಪ್ರೇರಣಾ ಅವರು ಫೋಟೋಶೂಟ್‌ ಮಾಡಿಸಿದ್ದು, ಈಗ ಸಂತಸವನ್ನು ಹಂಚಿಕೊಂಡಿದ್ದಾರೆ. ಇದೇ ತಿಂಗಳು ಹೊಸ ಅಥಿತಿ ಮನೆಗೆ ಬರಲಿದೆ ಎಂದು ಹೇಳಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸೆಲಬ್ರಿಟಿಗಳು ಶುಭ  ಹಾರೈಸಿದ್ದಾರೆ. 

ಇನ್ನು ಧೃವ ಸರ್ಜಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಮಾರ್ಟಿನ್ ಚಿತ್ರದಲ್ಲಿ ನಟಿಸುತ್ತಿರುವ ಧೃವ ಸರ್ಜಾ, ಖಡಕ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ಗೆ ಮಾಸ್ ಅಭಿಮಾನಿಗಳ ದಂಡೇ ಇದ್ದು, ಅದ್ಧೂರಿ, ಬಹದ್ದೂರ್, ಭರ್ಜರಿ, ಪೊಗರು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮಾರ್ಟಿನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ ಧೃವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ನಿರ್ಮಾಣವಾಗಲಿದೆ. ಈ ಸಿನಿಮಾ ಕರ್ಮಾಷಿಯಲ್ ಆಕ್ಷನ್ ಹೊಂದಿರಲಿದೆ.