ಆರ್ಥಿಕ ಸಂಕಷ್ಟ ಎದುರಾಯ್ತೆಂದು ಇಂಥಾ ಕೆಲಸ ಮಾಡಿಬಿಟ್ರ ಪಬ್ಲಿಕ್ ಟಿವಿ ರಂಗಣ್ಣ..!

Updated: Tuesday, October 27, 2020, 15:25 [IST]

ಹೌದು..ಕರೋನಾ ಕಾರಣದಿಂದ ಸಾಕಷ್ಟು ಜನರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು. ಇನ್ನು ಮಾಧ್ಯಮಗಳ ವಿಚಾರಕ್ಕೆ ಬಂದರೆ ಇವರದೇನು ಬೇರೆ ರೀತಿ ಇಲ್ಲ. ಲಾಕ್ಡೌನ್ ಸಮಯದಲ್ಲಿಯೂ ಸಹ ಮಾಧ್ಯಮಗಳು ಕೆಲಸ ನಿರ್ವಹಿಸಿದವು. ಆದರೆ ಮಾಧ್ಯಮಗಳಿಗೆ ಬಹುಮುಖ್ಯ ಆದಾಯವಾದ ಜಾಹೀರಾತುಗಳು ಕಡಿಮೆಯಾದವು. ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು ನಿಂತೆ ಹೋದವು. ಅದರಲ್ಲಿ ಕೆಲವೊಂದು ಧಾರಾವಾಹಿಗಳು ಪ್ರಸಾರವಾಗುತ್ತಿದ್ದವು ಸಹ ಧಾರಾವಾಹಿಯಲ್ಲಿ ನಟಿಸುತ್ತಿರುವವರಿಗೆ ಸಂಭಾವನೆಯನ್ನು ಕಡಿತ ಮಾಡಿಕೊಡಲಾಗಿತ್ತು.   

Advertisement

ಇನ್ನು ಸುದ್ದಿ ಮಾಧ್ಯಮಗಳ ವಿಚಾರಕ್ಕೆ ಬಂದರೆ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕಲು, ಬೋನಸ್ ಕೊಡದೆ ಇರಲು ಕೊರೋನಕ್ಕಿಂತ ದೊಡ್ಡ ಕಾರಣ ಮತ್ತೊಂದಿಲ್ಲ. ಅಲ್ಲಿಯೂ ಸಹ ಕೆಲಸಗಾರರನ್ನು ತೆಗೆದುಹಾಕಿದ್ದಾರೆ, ಸಂಬಳವನ್ನು ಕಡಿಮೆ ಮಾಡಿದ್ದಾರೆ. ಆದರೆ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ರಂಗನಾಥ್ ಅವರ ನಡೆ ಮಾತ್ರ ಬೇರೆ ರೀತಿಯಾಗಿದ್ದು, ಎಲ್ಲರೂ ಮೆಚ್ಚಿಕೊಳ್ಳುವಂತಿದೆ..   

Advertisement

ಹೌದು ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ರಂಗನಾಥ್ ಅವರು ಕೊರೋನಾ ಸಮಯದಲ್ಲಿಯೂ ಧೈರ್ಯದಿಂದ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ ಎರಡು ತಿಂಗಳ ಹಿಂದೆಯಷ್ಟೇ ₹10000 ಹೆಚ್ಚುವರಿ ಹಣ ನೀಡಿದ್ದರು. ಅಷ್ಟೇ ಅಲ್ಲದೆ ಬೋನಸ್ ಮೇಲೆ ಬೋನಸ್ ನೀಡುವ ಮೂಲಕ ತಮ್ಮ ಉದ್ಯೋಗಿಗಳಿಗೆ ಆರ್ಥಿಕ ಕಷ್ಟ ಎದುರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಬಳವನ್ನು ಹೆಚ್ಚು ಮಾಡಿದ್ದಾರೆ. ಜೊತೆಯಲ್ಲಿ ಎಲ್ಲಾ ಉದ್ಯೋಗಿಗಳಿಗೆ ಆರು ತಿಂಗಳ ಅರಿಯರ್ಸ್ ಅನ್ನು ಕೂಡ ನೀಡುವುದಾಗಿ ತಿಳಿಸಿದ್ದಾರೆ.   

Advertisement

ಒಂದು ಸಂಸ್ಥೆಯ ಮುಖ್ಯಸ್ಥ ನಿಗೆ ಆರ್ಥಿಕ ಶಿಸ್ತು ಇದ್ದರೆ, ಇಂತಹ ಕಷ್ಟದ ಸಮಯದಲ್ಲಿ ತಮ್ಮ ಉದ್ಯೋಗಿಗಳನ್ನು ಅವರಂತೆ ಕಂಡು ಅವರನ್ನು ಆರ್ಥಿಕ ಕಷ್ಟದಿಂದ ಪಾರು ಮಾಡಬಹುದು. ಎಂದು ಉದ್ಯೋಗಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೊರೋನಾ ಶುರುವಿನ ಸಮಯದಲ್ಲಿ ರಂಗನಾಥ್ ಅವರು ಮನೆಯೇ ಮಂತ್ರಾಲಯ ಎಂಬ ಕಾರ್ಯಕ್ರಮದ ಮೂಲಕ ಅನೇಕ ಜನರ ಕಷ್ಟಕ್ಕೆ ಸಹ ನೆರವಾಗಿದ್ದರು. ಇದೀಗ ತಮ್ಮ ಉದ್ಯೋಗಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದರ ಮೂಲಕ ಜನರಿಗೆ ಮತ್ತಷ್ಟು ಇಷ್ಟವಾಗುತ್ತಿದ್ದಾರೆ ಎನ್ನಬಹುದು,ಮತ್ತು ಈ ಎಲ್ಲಾ ಮಾಹಿತಿ ನಮಗೆ  ಸಾಮಾಜಿಕ ಜಾಲತಾಣಗಳಿಂದ ತಿಳಿದುಬಂದಿದೆ. ಇದರ ಬಗ್ಗೆ ನಿಮ್ಮ ಆಕ್ಷೇಪಣೆಯನ್ನು ನಮಗೆ ಕಾಮೆಂಟ್ ಮಾಡಿ ತಿಳ್ಸಿ ಜೊತೆಗೆ ಹೆಚ್ಚು ಶೇರ್ ಮಾಡಿ ಧನ್ಯವಾದಗಳು...