ಪತಿಯ ಟಾರ್ಚರ್ ಸಹಿಸಲಾಗದೇ ಕನ್ನಡದ ಖ್ಯಾತ ನಟಿ ಇನ್ನಿಲ್ಲ

By Infoflick Correspondent

Updated:Sunday, May 15, 2022, 06:28[IST]

ಪತಿಯ ಟಾರ್ಚರ್ ಸಹಿಸಲಾಗದೇ  ಕನ್ನಡದ ಖ್ಯಾತ ನಟಿ ಇನ್ನಿಲ್ಲ

ಕನ್ನಡ ಹಾಗೂ ಮಳಯಾಳಂ ನಟಿ ಹಾಗೂ ರೂಪದರ್ಶಿ ಶಹನಾ ಉದಯೋನ್ಮುಖ ನಟಿ. ಕನ್ನಡದ ಲಾಕ್ ಡೌನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಸರಗೂಡಿನ ಈ ನಟಿ ಮಳಯಾಳಂ ತೆರೆಯಲ್ಲಿ ಮಿಂಚುತ್ತಿದ್ದ ಈಕೆ ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ನಟನೆಯ ಮೂಲಕವೇ ಜನಮನ ಗೆದ್ದಿದ್ದರು. ಕೇವಲ 18ನೇ ವಯಸ್ಸಿಗೆ ಮದುವೆಯಾಗಿದ್ದ ಶಹನಾ, ಮದುವೆಯಾದ ಮೇಲೂ ನಟನೆಯನ್ನು ಬಿಟ್ಟಿರಲಿಲ್ಲ. ಕೇರಳದ ಕೋಯಿಕ್ಕೋಡ್ನ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು.    

ಚಿಕ್ಕವಯಸ್ಸಿಗೆ ಮದುವೆಯಾದ ಶಹನಾ ಅವರು ಇಡೀ ಜನ್ಮಕ್ಕಾಗುವಷ್ಟು  ಕಷ್ಟವನ್ನು ಅನುಭವಿಸಿದ್ದಾರೆ. ಈ ಬದುಕು ಸಾಕು ಎಂದು ತೀರ್ಮಾನಿಸಿದ ಶಹನಾ, ಈ ಲೋಕವನ್ನೇ ಬಿಟ್ಟು ಹೊರಟಿದ್ದಾರೆ. ಹೌದು ಇನ್ನೂ ಕೇವಲ 20 ವರ್ಷದ ಶಹಾನ ಅವರು ತಮ್ಮ ಮನೆಯ ಗ್ರಿಲ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆದರೆ ಈ ಸಾವು ನಿಗೂಢವಾಗಿದ್ದು, ಶಹನಾ ಪೋಷಕರು ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಶಹನಾ ಅವರು ಪರಂಬಿಲ್ ಬಜಾರ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿರುವ ಕಿಟಕಿಯ ಗ್ರಿಲ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. 

ಸದ್ಯ ಪೊಲೀಸರು ಆಕೆಯ ಪತಿ ಸಜ್ಜದ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಇನ್ನು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಅಳಿಯನ ವಿರುದ್ಧ ಶಹನಾ ತಾಯಿ ದೂರು ನೀಡಿದ್ದಾರೆ. ಮಗಳಿಗೆ ಅವಳ ಪತಿ ಸಾಜನ್ ಹಿಂಸೆ ನೀಡುತ್ತಿದ್ದಂತೆ. ಹಣ ನೀಡುವಂತೆ ಸದಾ ಸಾಜದ್ ಶಹನಾಗೆ ಕಿರುಕುಳ ನೀಡುತ್ತಿದ್ದನಂತೆ. ಈ ವಿಚಾರ ಶಹನಾ ಅವರ ಅಕ್ಕಪಕ್ಕದ ಮನೆಯವರಿಗೂ ತಿಳಿದಿತ್ತು. ಅಲ್ಲದೇ, ಶಹನಾಗೆ, ಪತಿ ಸಾಜದ್ ಸಿನಿಮಾದಲ್ಲಿ ನಟಿಸಬೇಡ ಎಂದು ಟಾರ್ಚರ್ ನೀಡುತ್ತಿದ್ದನಂತೆ. ನಿತ್ಯ ಕುಡಿದು ಬಂದು ಹಿಂಸೆ ನೀಡುತ್ತಿದ್ದನಂತೆ.