Duniya Vijay : ಮುದ್ದು ಮಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ದುನಿಯಾ ವಿಜಯ್ :ಏನದು ನೋಡಿ ?

By Infoflick Correspondent

Updated:Monday, August 15, 2022, 14:24[IST]

Duniya Vijay : ಮುದ್ದು ಮಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ದುನಿಯಾ ವಿಜಯ್ :ಏನದು ನೋಡಿ ?

ಫೈಟಿಂಗ್, ಸ್ಟಂಟ್ ಅಂತ ಚಿಕ್ಕಪುಟ್ಟ ಪಾತ್ರಗಳ ಮೂಲಕ ಚಂದನವನಕ್ಕೆ ಕಾಲಿಟ್ಟವರು ದುನಿಯಾ ವಿಜಯ್. ಸ್ಯಾಂಡಲ್ ವುಡ್ ನಲ್ಲಿ ಕರಿಯಾ ಐ ಲವ್ ಯೂ ಎನ್ನುತ್ತಲೇ ಫೇಮಸ್ ಆಗಿಬಿಟ್ಟರು. ಇದೀಗ ಅವರೇ ನಿರ್ದೇಶಕರೂ ಆಗಿದ್ದಾರೆ. ಹೌದು. ಸಲಗ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿ ನಟಿಸಿ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಆದರು. ಇದೀಗ ನಟ ದುನಿಯಾ ವಿಜಿ ಅವರು ಕೇವಲ ಕನ್ನಡ ಅಷ್ಟೇ ಅಲ್ಲದೇ, ತೆಲುಗು ಚಿತ್ರರಂಗದಲ್ಲೂ ಆಫರ್ ಗಳು ಬರುತ್ತಿವೆ. ದುನಿಯಾ ವಿಜಿ ಸಲಗ ಚಿತ್ರದ ನಾಯಕ ಕಮ್ ನಿರ್ದೇಶಕರಾಗಿದ್ದಾರೆ. 

ಸಲಗ ಚಿತ್ರ ಥಿಯೇಟರ್ ಗಳಲ್ಲಿ ಭರ್ಜರಿಯಾಗಿ ಓಡಿತ್ತು. ಸಲಗ ಚಿತ್ರ ನಿತ್ಯ ಕೋಟಿ ಕೋಟಿ ಹಣ ಗಳಿಸಿ, ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಇನ್ನು ಸಲಗ ಚಿತ್ರದ ಟಿಣಿಂಗ ಮಿಣಿಂಗ ಟಿಷ್ಯಾ ಅನ್ನೋ ಹಾಡು ಬಹಳ ಸದ್ದು ಮಾಡಿದ್ದು, ಇದು ಆದಿವಾಸಿ ಹಾಡಿ ಹಾಡಾಗಿದ್ದು, ಆದಿವಾಸಿಗಳೇ ಹಾಡಿದ್ದಾರೆ. ಈ ಹಾಡು ಕರ್ನಾಟಕ ಮಾತ್ರವಲ್ಲದೇ, ಭಾರತ ಹಾಗೂ ಹೊರ ದೇಶಗಳಲ್ಲೂ ಹಿಟ್ ಆಗಿದೆ. ಇನ್ನು ಜೀವನದಲ್ಲಿ ಹಲವು ಏರು ಪೇರುಗಳನ್ನು ದುನಿಯಾ ವಿಜಯ್ ಅವರು ಕಂಡಿದ್ದಾರೆ.   

ಸಂಸಾರದ ವಿಚಾರವಾಗಿ ಹಲವು ಭಾರಿ ಸುದ್ದಿಯಾಗಿದ್ದರೂ ಧೈರ್ಯ ಗೆಡದೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ದುನಿಯಾ ವಿಜಯ್ ಅವರು ತಮ್ಮ ತಾಯೊಯನ್ನು ಕಳೆದುಕೊಂಡಿದ್ದರು. ಇದೇ ವರ್ಷ ಫೆಬ್ರವರಿಯಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ಇನ್ನು ಇದೀಗ ಮಗಳು ಮೊನಿಕಾಗೆ ಅವಳಿಷ್ಟದ ಕಾರನ್ನು ದುನಿಯಾ ವಿಜಯ್ ಅವರು ಗಿಫ್ಟ್ ಮಾಡಿದ್ದಾರೆ.  ಇದರ ಫೋಟೋವನ್ನು ಮೊನಿಕಾ ಅವರು ಹಂಚಿಕೊಂಡಿದ್ದು, ಲವ್ ಯೂ ಅಪ್ಪ ಎಂದಿದ್ದಾರೆ.