Dwarkish : ವಿಷ್ಣುವರ್ಧನ್ ಅವರಿಗೆ ನಾನು ಮಾಡಿದ್ದೆಲ್ಲವೂ ಮೋಸ ಎಂದು ಕಣ್ಣೀರಿಟ್ಟ ದ್ವಾರಕೀಶ್

By Infoflick Correspondent

Updated:Tuesday, September 20, 2022, 21:23[IST]

Dwarkish :  ವಿಷ್ಣುವರ್ಧನ್ ಅವರಿಗೆ ನಾನು ಮಾಡಿದ್ದೆಲ್ಲವೂ ಮೋಸ ಎಂದು ಕಣ್ಣೀರಿಟ್ಟ ದ್ವಾರಕೀಶ್


ಮೊನ್ನೆಯಷ್ಟೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಭಾನುವಾರ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಿ ವಿಷ್ಣು ದಾದಾ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಇದರ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇನ್ನು ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರದ್ದು ಅದ್ಭುತವಾದಂತಹ ಜೋಡಿ. ಇವರಿಬ್ಬರೂ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಆದರೆ ಇಬ್ಬರೂ ಆಗಾಗ    ಕಿತ್ತಾಡಿಕೊಂಡು  ಮತ್ತೆ ಒಂದಾಗುತ್ತಿದ್ದರು. ಇದಕ್ಕೆ ಕಾರಣವನ್ನು ಇದೀಗ ದ್ವಾರಕೀಶ್ ಅವರೇ ನೀಡಿದ್ದಾರೆ. 

ಮೇಯರ್ ಮುತ್ತಣ್ಣದಂತಹ ಚಿತ್ರ ಮಾಡಿ ಹೆಸರುವಾಸಿಯಾಗಿದ್ದವರು ದ್ವಾರಕೀಶ್ ಅವರು. ಇವರು  ಮೊದಲು ವಿಷ್ಣುವರ್ಧನ್    ಅವರ ಜೊತೆಗೆ ಕಿಟ್ಟು ಪುಟ್ಟು ಎಂಬ ಸಿನಿಮಾದಲ್ಲಿ ಮಾಡಿದರು. ಇದು ಹಿಟ್ ಆದ ಮೇಲೆ ಸಿಂಗಾಪುರದಲ್ಲಿ ರಾಜಾ ಕುಳ್ಳ, ಗುರು ಶಿಷ್ಯರು, ಕಳ್ಳ-ಕುಳ್ಳ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಈ ಜೋಡಿ ಒಟ್ಟಾಗಿ ಮಾಡಿದರು. ಎಲ್ಲಾ ಸಿನಿಮಾಗಳು ಕೂಡ ಹಿಟ್ ಆಗಿದ್ದವು. ಆದರೆ ಆಗಾಗ ಇಬ್ಬರು ದೂರಾಗಿ ಮತ್ತೆ ಒಂದಾಗುತ್ತಿದ್ದರು. ಕೊನೆಯದಾಗಿ ವಿಷ್ಣುವರ್ಧನ್ ಅವರಿಗಾಗಿ ಆಪ್ತಮಿತ್ರ ಚಿತ್ರವನ್ನು ದ್ವಾರಕೀಶ್ ಅವರು ಮಾಡಿದರು. 

ಇಷ್ಟೆಲ್ಲಾ ಮಾಡಿದ ದ್ವಾರಕೀಶ್ ಅವರು ತುಂಬಾ ಬೇಸರದಿಂದ ತಮ್ಮ ಮನದ ಮಾತುಗಳನ್ನು ಆಡಿದ್ದಾರೆ. ನಾನು ವಿಷ್ಣುವರ್ಧನ್ ಅವರನ್ನು ತುಂಬಾ ಅವಮಾನಿಸಿದ್ದೇನೆ. ನಾನು ಮಾಡಿದ ಚಿತ್ರಗಳಿಂದಲೇ ಅವರಿಗೆ ಹೆಸರು ಬಂದುದೆ ಎಂದು ಹೀಯಾಳಿಸಿದ್ದೆ. ಆದರೆ, ಅವರ ನಟನೆಯಿಂದ ನಾನು ಗುರುತಿಸಿಕೊಳ್ಳುತ್ತಿದ್ದೇನೆ ಎಂಬುದು ನನಗೆ ಅರ್ಥವಾಗಲೇ ಇಲ್ಲ. ಈ ಕಾರಣಕ್ಕಾಗಿಯೇ ನಾನು ಹಾಗೂ ವಿಷ್ಣು ಆಗಾಗ ಮಾತು ಬಿಡುತ್ತಿದ್ದೆವು. ಎಂದಿಗೂ ನಾನು ವಿಷ್ಣುಗೆ ಗೌರವ ಕೊಡಲಿಲ್ಲ. ನಾನು ಅವನಿಗೆ ದೊಡ್ಡ ಮೋಸ ಮಾಡಿದೆ. ಅವನು ಬದುಕಿದ್ದಾಗ ಇದ್ಯಾವುದೂ ನನಗೆ ಅರ್ಥವಾಗಲಿಲ್ಲ ಎಂದು ಬೇಸರ ಮಾಡಿಕೊಂಡು ಕಣ್ಣೀರಿಟ್ಟಿದ್ದಾರೆ. 
ವಿಷ್ಣುವರ್ಧನ್ ಅವರಿಗೆ ನಾನು ಮಾಡಿದ್ದೆಲ್ಲವೂ ಮೋಸ ಎಂದು ಕಣ್ಣೀರಿಟ್ಟ ದ್ವಾರಕೀಶ್