ಎಲಿಜಬೆತ್ ರಾಣಿ ಬರೆದ ಆ ಪತ್ರದಲ್ಲಿ ಏನಿದೆ..? ಅದನ್ನು ಈಗಲೇ ಯಾಕೆ ಓದುವಂತಿಲ್ಲ..?

By Infoflick Correspondent

Updated:Tuesday, September 20, 2022, 07:19[IST]

ಎಲಿಜಬೆತ್ ರಾಣಿ  ಬರೆದ  ಆ ಪತ್ರದಲ್ಲಿ ಏನಿದೆ..? ಅದನ್ನು ಈಗಲೇ ಯಾಕೆ ಓದುವಂತಿಲ್ಲ..?

ಬ್ರಿಟನ್ ಕ್ವೀನ್ ಎಲಿಜಬೆತ್ ನಿಧನರಾಗಿದ್ದು, ಅವರ ಸಾವಿಗೆ ಇಡೀ ವಿಶ್ವವೇ ಸಂತಾಪ ಸೂಚಿಸಿದೆ. 96 ವರ್ಷದ ಎಲಿಜಬೆತ್ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅತೀ ಹೆಚ್ಚು ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್  ಅವರ ಬದುಕು ಹಲವರಿಗೆ ಕುತೂಹಲಕಾರಿಯಾಗಿದೆ. ಅವರ ಬದುಕಿನ ಪಯಣದ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈನ್ನು ಈ ಕುತೂಹಲಗಳ ಜೊತೆಗೆ ಇದೀಗ ಮತ್ತೊಂದು ಕುತೂಹಲವೂ ಸೃಷ್ಟಿಯಅಗಿದೆ. ಅದು ಏನೆಂದರೆ ಎಜಿಜಬೆತ್‌ ಅವರು ಬರೆದಿರುವ ಆ ಒಂದು ಪತ್ರ. 

ರಾಣಿ ಎಲಿಜಬೆತ್ ಬರೆದಿರುವ ಪತ್ರ ಈಗ ಎಲ್ಲೆಡೆ ಸುದ್ದಿಯಾಗಿರುವ ವಿಚಾರ. ಸಿಡ್ನಿಯ ಐತಿಹಾಸಿಕ ಕಟ್ಟಡದಲ್ಲಿ ಎಲಿಜಬೆತ್ ಅವರು ಬರೆದ ಪತ್ರ ಸಿಕ್ಕಿದೆ. 1986ರ ನವೆಂಬರ್ ನಲ್ಲಿ ಈ ಪತ್ರವನ್ನು ಬರೆಯಲಾಗಿದೆ. ಪತ್ರವನ್ನು ಬರೆದು ಕಟ್ಟಡದ ಕಮಾನಿನಲ್ಲಿ ಗಾಜಿನ ಕೇಸ್ ನಲ್ಲಿ ಿರಿಸಿದ್ದು, ಇದು ಇದೀಗ ಪತ್ತೆಯಾಗಿದೆ. ಇದರಲ್ಲಿ ಸಿಡ್ನಿಯ ಜನತೆಗಾಗಿ ಸಂದೇಶವಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಈ ಪತ್ರವನ್ನು ಇನ್ನೂ 63 ವರ್ಷ ಈ ಪತ್ರವನ್ನು ತೆರೆಯುವಂತಿಲ್ಲವಂತೆ. ಹಾಗಂತ ಎಲಿಜಬೆತ್‌ ಅವರೇ ತಿಳಿಸಿದ್ದಾರಂತೆ. ಅದು ಯಾಕೆ ಎಂಬುದು ಕೂಡ ಯಾರಿಗೂ ಅರ್ಥವಾಗಿಲ್ಲ. 

2085 ರಲ್ಲಿ ಯಾವುದಾದರೂ ಒಂದು ದಿನ ಈ ಪತ್ರವನ್ನು ತೆಗೆದು ಓದಬೇಕು ಎಂದು ತಿಳಿಸಲಾಗಿದೆ. ಅಲ್ಲದೇ ಈ ಪತ್ರದಲ್ಲಿರುವ ವಿಚಾರವನ್ನು ಸಿಡ್ನಿಯ ಜನತೆಗೆ ತಿಳಿಸಬೇಕು ಎಂದು ಹೇಳಲಾಗಿದೆ. ಅಲ್ಲದೇ, ಅದರ ಕೆಳಗೆ ಎಲಿಜಬೆತ್ ಆರ್ ಎಂದು  ಸಹಿ ಕೂಡ ಮಾಡಲಾಗಿದೆ. ಇನ್ನು ಈ ಪತ್ರದಲ್ಲಿರುವ ವಿಷಯವನ್ನು ತಿಳಿಯಲು ಎಲ್ಲರೂ 63 ವರ್ಷ ಕಾಯಬೇಕಿದೆ.