ಕನ್ನಡದ ಖ್ಯಾತ ನಟಿ ಮಗ ಸಾವು..!! ಕಣ್ಣೀರಿಟ್ಟ ಇಡೀ ಕನ್ನಡ ಚಿತ್ರರಂಗ..!

Updated: Thursday, June 17, 2021, 14:31 [IST]

    

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕರೋನವೈರಸ್ ಮೊದಲನೇ ಹಂತದಲ್ಲಿಯೇ ಸಾಕಷ್ಟು ಸಾವು-ನೋವುಗಳನ್ನು ಕಂಡಿದ್ದು, ಇತ್ತೀಚಿಗೆ ಎದುರಾದ ಕರೋನವೈರಸ್ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿ ಕಂಡು ಬಂದಿತ್ತು, ಮತ್ತು ಈ ಕರೋನವೈರಸ್ ಎರಡನೇ ಅಲೆಗೆ ಸಾಕಷ್ಟು ಜನರು ಸಾವನ್ನಪ್ಪಿದ್ದು ನಿಜ, ಮತ್ತು ಇತ್ತೀಚಿಗಷ್ಟೇ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು ಕೊರೋನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಎಲ್ಲಾ ಸಿನಿಮಾರಂಗದಲ್ಲೂ ಸಹ ಸಾವನ್ನಪ್ಪಿದ್ದಾರೆ. 

ಹೌದು ಜನಸಾಮಾನ್ಯರು, ದುಡಿದು ತಿನ್ನುವ ಜನರು, ಮತ್ತು ದೊಡ್ಡ ಗಣ್ಯವ್ಯಕ್ತಿಗಳನ್ನು, ಶ್ರೀಮಂತರಗಳನ್ನು ತುಂಬಾ ಕಾಡಿ ಸಾವು-ನೋವು ನೀಡಿದೆ ಈ ಕೊರೊನ. ಹೌದು ಇತ್ತೀಚಿಗಷ್ಟೇ ಸಂಚಾರಿ ವಿಜಯ್ ಅವರ ಸಾವು ಕೂಡ ಕನ್ನಡ ಸಿನಿಮಾ ರಂಗಕ್ಕೆ ಅರಗಿಸಿಕೊಳ್ಳಲಾಗದ ಒಂದು ದೊಡ್ಡ ಘಟನೆಯಾಯ್ತು. ರಾಷ್ಟ್ರಪ್ರಶಸ್ತಿ ವಿಜೇತ ಮತ್ತು ಅಪ್ರತಿಮ ಕಲಾವಿದ, ಬೈಕ್ ಆಕ್ಸಿಡೆಂಟ್ ನಲ್ಲಿ ತೀರಿಕೊಂಡ ವಿಷಯ ಕೇಳಿ ಕನ್ನಡ ಜನತೆಯೇ ಕಣ್ಣೀರು ಹಾಕಿತು. ಇದರ ಬಳಿಕ ಇದೀಗ ಕನ್ನಡದ ಖ್ಯಾತ ನಟಿಯ ಮಗ ಕೊರೋನದಿಂದ ಸಾವನ್ನಪ್ಪಿದ್ದು, ಇಡೀ ಕನ್ನಡ ಚಿತ್ರರಂಗ ಸೇರಿ ಬೇರೆ ಬೇರೆ ಸಿನಿಮಾರಂಗದವರು ಕೂಡ ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಹೌದು ಬಹುಭಾಷಾ ನಟಿಯಾದ ಹಿರಿಯ ನಟಿ ಕವಿತಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಮಗನಿಗೆ ಇತ್ತೀಚಿಗೆ ಕರೋನ ಪಾಸಿಟಿವ್ ಬಂದಿದ್ದು, ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತಂತೆ, ಆದರೆ ಆರೋಗ್ಯದ ಸ್ಥಿತಿ ಹದಗೆಟ್ಟ ಕಾರಣಕ್ಕಾಗಿ ಆಸ್ಪತ್ರೆಗೆ ಕರೆತಂದರು. ಆದರೆ  ಕವಿತಾರ ಮಗನಿಗೆ ಚಿಕಿತ್ಸೆ ಫಲಿಸದೆ ಬದುಕುಳಿಯಲಿಲ್ಲ ಎನ್ನಲಾಗಿ ಸುದ್ದಿ ಹೊರಬಿದ್ದಿದೆ, ಮತ್ತು ಇವರ ಪತಿಯು ಸಹ ಕೊರೊನ ಸೋಂಕಿನಿಂದ ಬಳಲುತ್ತಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ಮತ್ತು ಇವರ ಸಾವಿಗೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.