ಚಿತ್ರರಂಗಕ್ಕೆ ಮತ್ತೊಂದು ಅಘಾತ! ಖ್ಯಾತ ಹಿರಿಯ ಹಾಸ್ಯಕಲಾವಿದ ವಿಧಿವಶ

By Infoflick Correspondent

Updated:Saturday, May 7, 2022, 09:21[IST]

ಚಿತ್ರರಂಗಕ್ಕೆ ಮತ್ತೊಂದು ಅಘಾತ! ಖ್ಯಾತ ಹಿರಿಯ ಹಾಸ್ಯಕಲಾವಿದ ವಿಧಿವಶ

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯಕಲಾವಿದ ಮೋಹನ್ ಜುನೇಜ ಅವರು ಇಂದು(ಶನಿವಾರ) ಬೆಳಗ್ಗೆ ನಿಧನರಾದರು.ಅನಾರೋಗ್ಯದಿಂದಾಗಿ ಹಾಸ್ಯನಟ ಮೋಹನ್ ವಿಧಿವಶರಾಗಿದ್ದಾರೆ. ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾರೆ. 

ಶುಕ್ರುವಾರ ರಾತ್ರಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಿಕ್ಕಬಾಣಾವರದ ಸಪ್ತಗಿರಿ ಹಾಸ್ಪಿಟಲ್​ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.  

ಮೋಹನ್ ಇತ್ತೀಚೆಗೆ ತೆರೆ ಕಂಡಿದ್ದ 'ಕೆಜಿಎಫ್ ಚಾಪ್ಟರ್ 2' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ನವಗ್ರಹ', 'ಗಣೇಶನ ಗಲಾಟೆ' 'ಜೋಗಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಾಮುಖ್ಯತೆ ಪಾತ್ರಗಳಲ್ಲಿ ನಟಿಸಿದ್ದಾರೆ. ಚೆಲ್ಲಾಟ' ಚಿತ್ರದ ಮಧುಮಗನ ಪಾತ್ರ ಇವರಿಗೆ ತುಂಬಾ ಪ್ರಸಿದ್ಧಿ ತಂದುಕೊಟ್ಟಿತ್ತು.

ಇವರ ನಿಧನಕ್ಕೆ ಚಿತ್ರರಂಗ ಇವರ ಅಭಿಮಾನಿಗಳು ಹಾಗು ಹಲವು ಗಣ್ಯರು ಕಂಬನಿಮಿಡಿಯುತ್ತಾ  ಸಂತಾಪ ಸೂಚಿಸುತ್ತಿದ್ದಾರೆ.