ಕೆಜಿಎಫ್2 ಕುರಿತು ಮೌನವಹಿಸಿದರೇ ಕೆಲವು ಖ್ಯಾತ ನಟ ನಟಿಯರು ನಿರ್ದೇಶಕರು ?

By Infoflick Correspondent

Updated:Sunday, April 24, 2022, 18:09[IST]

ಕೆಜಿಎಫ್2 ಕುರಿತು ಮೌನವಹಿಸಿದರೇ ಕೆಲವು ಖ್ಯಾತ ನಟ ನಟಿಯರು ನಿರ್ದೇಶಕರು ?

ಕೆಜಿಎಫ್2 ಸ್ಯಾಂಡಲ್ ವುಡ್ ಅನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದೆ. ಜನ ಮಾತ್ರ ಅಲ್ಲ, ಪರ ಭಾಷೆಯ ಕಲಾವಿದರು ನಟ, ನಟಿಯರು ಕೂಡ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಲವು ಭಾಷೆಯ ನಾಯಕ ನಾಯಕಿಯರು ಕಲಾವಿದರು ಸಿನಿಮಾ ಕುರಿತು ಉತ್ತಮ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಹಲವು ತಾರೆಯರು, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞನರು ಮಾತನಾಡಿದ್ದಾರೆ. ಕರೆ ಮಾಡಿ ಶುಭ ಕೊರಿದ್ದಾರೆ. ಚಿತ್ರದ ಯಶಸನ್ನು ಸಂಭ್ರಮಿಸಿದ್ದಾರೆ. 

ಈಗ ಜನರು ಕೆಲವು ಮಾಧ್ಯಮದವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಸ್ಟಾರ್ ನಟರನ್ನು ಈ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ಯಶಸ್ಸು ಕಾಣುತ್ತಿರುವುದು ಸಂತಸದ ಸಂಗತಿ ಆದರೆ ಕೆಲವು ಖ್ಯಾತ ನಟರು ಈ ಕುರಿತು ಏನು ಮಾತನಾಡದೆ ಮೌನತಾಳಿದ್ದಾರೆಂಬ ಸುದ್ದಿ ಹರಡುತ್ತಿದೆ. ಕೆಜಿಎಫ್ 2 ಯಶಸ್ಸನ್ನು ಕನ್ನಡದ ಹಲವು ತಾರೆಯರು ಸಂಭ್ರಮಿಸಿದ್ದಾರೆ.‌ಆದರೆ ಕನ್ನಡದ ಕೆಲವು ಖ್ಯಾತ ನಟರು, ನಿರ್ದೇಶಕರು ಮಾತನಾಡುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡುತ್ತಾ ಇದ್ದಾರೆ.   

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಯಾಕೆ ನಮ್ಮ ಕನ್ನಡದ ನಟರಾದ ದರ್ಶನ್, ಸುದೀಪ್, ಧ್ರುವ ಮುಂತಾದ ನಟರು ಮಾತನಾಡುತ್ತಿಲ್ಲ, ಕೆಲ ನಿರ್ದೇಶಕರು ಕನ್ನಡ ಸಿನಿಮಾಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.  ಈ ಬಗ್ಗೆ ಪೋಸ್ಟ್‌ಗಳನ್ನು ಹಾಕಿ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಇನ್ನು ಕೆಲವರು  ಸಾರ್ವಜನಿಕವಾಗಿ ಪೋಸ್ಟ್ ಹಾಕಿಲ್ಲ ಅಂದ ಮಾತ್ರಕ್ಕೆ ಅವರು ಚಿತ್ರತಂಡಕ್ಕೆ ಶುಭಕೋರಿಲ್ಲ ಎಂದಲ್ಲ. ವೈಯಕ್ತಿಕವಾಗಿ ಅವರು ಚಿತ್ರತಂಡಕ್ಕೆ ತಮ್ಮ ವಿಶ್ ತಿಳಿಸಿದ್ದರು ಇರಬಹುದು.ಎಂಬ ಮಾತು ಆಡುತ್ತಿದ್ದಾರೆ. ಹೀಗೆ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.