Yog raj Bhat : ಯೋಗರಾಜ್ ಭಟ್ರಿಗೆ ಲಿಪ್ ಲಾಕ್ ಮಾಡಿದ ಆ ಅಭಿಮಾನಿ ಯಾರು ಗೊತ್ತಾ..?

By Infoflick Correspondent

Updated:Tuesday, August 16, 2022, 07:28[IST]

Yog raj Bhat :  ಯೋಗರಾಜ್ ಭಟ್ರಿಗೆ ಲಿಪ್ ಲಾಕ್ ಮಾಡಿದ ಆ ಅಭಿಮಾನಿ ಯಾರು ಗೊತ್ತಾ..?

14 ವರ್ಷಗಳ ಹಿಂದೆ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಚಿತ್ರವೇ ಗಾಳಿಪಟ. ಈ ಚಿತ್ರದಲ್ಲಿ ಮೂವರು ಯುವಕರು ಸೇರಿ ಏನೆಲ್ಲಾ ಅವಾಂತರ ಮಾಡಿಕೊಳ್ಳುತ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಆಗ ಈ ಚಿತ್ರ ಬ್ಲಾಕ್ ಬಸ್ಟರ್ ಆಗಿ ಹಿಟ್ ಆಗಿತ್ತು. ಅದೇ ಮೂವರು ಇರುವ ಕಾಂಬಿನೇಷನ್ ನಲ್ಲಿ ಈಗ ಗಾಳಿಪಟ 2 ಚಿತ್ರ ರಿಲೀಸ್ ಆಗಿದೆ. ಈ ಚಿತ್ರವನ್ನು ಕೂಡ ಯೋಗರಾಜ್ ಭಟ್ ಅವರೇ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರ ಈಗ ಸೂಪರ್ ಡೂಪರ್ ಆಗಿ ಹಿಟ್ ಆಗಿದೆ. 

ಇದೀಗ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಸಿನಿಮಾ ನೋಡಿದ ಅಭಿಮಾನಿಯೊಬ್ಬರು ಲಿಪ್ ಲಾಕ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಗಾಳಿಪಟ 2 ಚಿತ್ರ ಮೊದಲ ದಿನವೇ 15 ಕೋಟಿ ಬಾಚಿಕೊಂಡಿದ್ದು, ಎರಡನೇ ದಿನವೂ 10 ಕೋಟಿ ಕಲೆಕ್ಷನ್ ಮಾಡಿತ್ತು. ವೀಕೆಂಡ್ ನಲ್ಲೂ ಸಾಲು ಸಾಲಾಗಿ ಅಭಿಮಾನಿಗಳು ಬಂದು ಚಿತ್ರವನ್ನು ನೋಡಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ಗಾಳಿಪಟ 2 ಚಿಂದಿ ಉಡಾಯಿಸಿದೆ. ದಿಗಂತ್, ಪವನ್ ಕಲ್ಯಾಣ್ ಹಾಗೂ ಗಣೇಶ್ ಮೂವರು ಸೇರಿ ಅಭಿಮಾನಿಗಳನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.   

ಯೋಗರಾಜ್ ಭಟ್ ಅವರು ಜನರ ರಿಯಾಕ್ಷನ್ ನೋಡಲು ಹೋಗಿದ್ದಾಗ, ಅಭಿಮಅನಿಯೊಬ್ಬ ಗಾಳಿಪಟ 2 ಚಿತ್ರ ನೋಡಿ ಫಿದಾ ಆಗಿದ್ದಾನೆ. ಅದೇ ಸಂದರ್ಭದಲ್ಲಿ ಯೋಗರಾಜ್ ಭಟ್ರನ್ನ ನೋಡಿ ಖುಷಿಯಾಗಿರುವ ವ್ಯಕ್ತಿ ತಬ್ಬಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಯೋಗರಾಜ್ ಭಟ್ರಿಗೆ ಆ ವ್ಯಕ್ತಿ ತುಟಿಗೆ ಮುತ್ತಿಟ್ಟಿದ್ದಾರೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರೇತಿ ಹೆಚ್ಚಾಗಿ ಅಭಾನಿಯೊಬ್ಬ ಯೋಗರಾಜ್ ಭಟ್ರಿಗೆ ಲಿಪ್ ಕಿಸ್ ಕೊಟ್ಟಿದ್ದಾರೆ ಎಂದು ಟ್ಯಾಗ್ ಲೈನ್ ಕೊಡಲಾಗಿದೆ.