Puneeth Rajkumar : ಪುನೀತ್ ಗಾಗಿ ಒಡವೆಯನ್ನು ಅಡವಿಟ್ಟ ಅಭಿಮಾನಿ ಮಾಡಿದ್ದೇನು ಗೊತ್ತಾ..?

By Infoflick Correspondent

Updated:Thursday, June 9, 2022, 09:53[IST]

Puneeth Rajkumar :  ಪುನೀತ್ ಗಾಗಿ ಒಡವೆಯನ್ನು ಅಡವಿಟ್ಟ ಅಭಿಮಾನಿ ಮಾಡಿದ್ದೇನು ಗೊತ್ತಾ..?

ಡಾ.ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದಷ್ಟು ಮುಗಿಯುವುದಿಲ್ಲ. ಪದಗಳಿಲ್ಲದಿದ್ದರೂ ಅವರಿಗಾಗಿ ಪದಕೋಶಗಳನ್ನು ಹೆಕ್ಕಿ ಹೆಕ್ಕಿ ನೋಡಿ ಅಪ್ಪು ಅವರನ್ನು ಹೊಗಳಬೇಕಷ್ಟೇ. ಯಾರೂ ಊಹಿಸಲಾರದಂತೆ ಪುನೀತ್ ರಾಜ್ ಕುಮಾರ್ ಅವರು ಈ ಕರುನಾಡಿಗೆ ಬೆಳಕು ಚೆಲ್ಲಿದ್ದಾರೆ. ಈಗ ಅದೆಷ್ಟೋ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ನಡೆಯನ್ನೇ ಪಾಲಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. 

ಅಪ್ಪು ನೀವೇ ನಂಬರ್ 1 ಎಂಬ ಆಲ್ಬಂ ಸಾಂಗ್ ಒಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ. ಈ ಹಾಡನ್ನು ನೀವೂ ಕೂಡ ಕೇಳಿರಬಹುದು. ಈ ಹಾಡನ್ನು ಪುನೀತ್ ರಾಜ್ ಕುಮಾರ್ ಅವರಿಗಾಗಿ ಹಾಡಿರುವುದು. ಅದೂ ಕೂಡ ಯಾರು ಬರೆದಿದ್ದು ಎಂದು ಗೊತ್ತಾದರೆ, ಈ ಹಾಡಿಗಾಗಿ ಅವರು ಪಟ್ಟ ಕಷ್ಟವನ್ನು ಕೇಳಿದರೆ ನಿಮಗೇ ಶಾಕ್ ಆಗೋದು ಕೂಡ ಗ್ಯಾರೆಂಟಿ. ಒಬ್ಬ ವ್ಯಕ್ತಿಗಾಗಿ ಅಭಿಮಾನಿಗಳು ಏನು ಬೇಕಿದ್ದರೂ ಮಾಡುತ್ತಾರೆ ಎಂಬುದಕ್ಕೆ ಈ ಹಾಡೇ ಸಾಕ್ಷಿ.     

ಆಕೆಯ ಹೆಸರು ವೇದವತಿ. ಅವರ ತಂದೆ ಆಟೋ ಡ್ರೈವರ್. ಪುನೀತ್ ರಾಜ್ ಕುಮಾರ್ ಅವರ ಮೇಲಿನ ಅಭಿಮಾನಕ್ಕಾಗಿ ಈ ಹಾಡನ್ನು ಬರೆದಿದ್ದಾರೆ. ಸ್ನೇಹಿತರ ಜೊತೆ ಸೇರಿ ಪುನೀತ್ಗಾಗಿ ಹಾಡೊಂದನ್ನು ಸಿದ್ಧ ಪಡಿಸಿದ್ದಾರೆ. ಎಂದೆಂದಿಗೂ ನೀವೇ ನಂಬರ್ ಒನ್ ಅಪ್ಪು ಸರ್  ಎಂದು ಈ ಆಲ್ಬಂ ಸಾಂಗ್ ಶುರುವಾಗುತ್ತದೆ. ಅಪ್ಪು ಮೇಲಿನ ಅಭಿಮಾನಕ್ಕೆ ತಮ್ಮ ತಂದೆ ಕೊಡಿಸಿದ ಚಿನ್ನದ ಸರವನ್ನು ವೇದವತಿ ಅವರು ಅಡವಿಟ್ಟು ಆಲ್ಬಂ ಸಾಂಗ್ ತಯಾರಿಸಿದ್ದಾರೆ. ಅನಿರುದ್ ಶಾಸ್ತ್ರಿ ಈ ಹಾಡಿಗೆ ಸಂಗೀತ ನೀಡಿದ್ದಾರೆ.  ಮೋಹನ್ ಎಂಬುವರು ಸಾಹಿತ್ಯ ಬರೆದಿದ್ದಾರೆ.