ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕೆಜಿಎಫ್ ಹವಾ! ಇಲ್ಲಿದೆ ನೋಡಿ ವಿಚಿತ್ರ ಆಹ್ವಾನ
Updated:Sunday, April 24, 2022, 08:36[IST]

ಈಗ ಎಲ್ಲಿ ನೋಡಿದ್ದಲ್ಲಿ ಕೆಜಿಎಫ್2 ಸಿನಿಮಾದೇ ಹವಾ. ನಾವು ಬರೊತನಕ ಮಾತ್ರ ಬೇರೆಯವರ ಹವಾ , ನಾವ ಬಂದಮೇಲೆ ನಮ್ಮದೇ ಹವಾ ! ಎಂಬ ಮಾತು ಸತ್ಯವಾಗಿದೆ. ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಹಾಲಿವುಡ್, ಎಲ್ಲ ಕಡೆಯೂ ಕೆಜಿಎಫ್ ರಣಕಹಳೆ ಬಾರಿಸುತ್ತಿದೆ.
ಸಿನಿಮಾದ ಹಲವು ಡೈಲಾಗ್ ಗಳ ನಡುವೆ ವೈಲೆಂಸ್ ವೈಲೆಂಸ್ ವಯಲೆನ್ಸ್.. ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್.. ಬಟ್ ವಯಲೆನ್ಸ್ ಲೈಕ್ಸ್ ಮೀ, ಐ ಕಾಂಟ್ ಅವಾಯ್ಡ್..' ಎಂದು ಯಶ್ ಹೇಳುವ ಡೈಲಾಗ್ ವೈರಲ್ ಆಗಿದ್ದು, ಸಿನಿಪ್ರಿಯರ ಬಾಯಲ್ಲೂ ನಲಿದಾಡುತ್ತಿದೆ.
ಜನರು ಈ ಡೈಲಾಗ್ ಅನ್ನು ಎಲ್ಲಾ ತನ್ನೀವೇಶಗಳಲ್ಲೂ ಬದಲಾಯಿಸಿಕೊಂಡು ಹೇಳುತ್ತಿದ್ದಾರೆ. ಇದೀಗ ಈ ಡೈಲಾಗ್ ಮದುವೆ ಆಮಂತ್ರಣದಲ್ಲೂ ಕಂಡುಬಂದಿದೆ. ವಯಲೆನ್ಸ್ ಡೈಲಾಗ್ ದಾಟಿಯಲ್ಲೇ ಮೇರೆಜ್ ಎಂಬ ಸಾಲುಗಳನ್ನು ಬರೆದಿದ್ದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.
ಬೆಳಗಾವಿಯ ವಧು- ವರರು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ಮ್ಯಾರೇಜ್, ಮ್ಯಾರೇಜ್, ಮ್ಯಾರೇಜ್..
ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್;
ಬಟ್ ಮೈ ರಿಲೇಟಿವ್ಸ್ ಲೈಕ್ ಮ್ಯಾರೇಜ್,
ಐ ಕಾಂಟ್ ಅವಾಯ್ಡ್..
ಎಂಬುದಾಗಿ ಬರೆದು ಮುದ್ರಿಸಿದ್ದಾರೆ.