ಕರಗ ಉತ್ಸವದಲ್ಲಿ ದೇವರೇ ಅಪ್ಪು ಬಳಿ ಬಂದಿದ್ದ ನೋಡಿ ಶಾಕ್ ಆದ ಜನರು..! ವಿಡಿಯೋ ವೈರಲ್

By Infoflick Correspondent

Updated:Monday, April 18, 2022, 12:33[IST]

ಕರಗ ಉತ್ಸವದಲ್ಲಿ ದೇವರೇ ಅಪ್ಪು ಬಳಿ ಬಂದಿದ್ದ ನೋಡಿ ಶಾಕ್ ಆದ ಜನರು..! ವಿಡಿಯೋ ವೈರಲ್

ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಬೆಂಗಳೂರು ಕರಗ ಉತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಈ ವರ್ಷ ಅದ್ಧೂರಿಯಾಗಿ ಕರಗ ಉತ್ಸವವನ್ನು ನಡೆಸಲಾಗಿದೆ.  ಎಲ್ಲಾ ಏರಿಯಾಗಳಲ್ಲೂ ಹೆಜ್ಜೆ ಹಾಕಿದ ಕರಗ, ಮಳೆಯಲ್ಲೇ ರಾತ್ರಿ ಇಡೀ ಮೆರವಣಿಗೆ ಮಾಡಲಾಯ್ತು. ಮಳೆ ಇದ್ದರೂ ಬೇರೆ ಬೇರೆ ಊರುಗಳಿಮದ ಬಂದಿದ್ದ ಭಕ್ತರು ಮೆರವಣಿಗೆ ಉದ್ದಕ್ಕೂ ಛತ್ರಿ ಹಿಡಿದಿದ್ದರು. ಇನ್ನು ಕರಗ ಉತ್ಸವದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಆಶೀರ್ವಾದ ಕೂಡ ಮಾಡಲಾಯ್ತು. 

ಕರಗ ಉತ್ಸವದಲ್ಲಿ ವೀರಕುಮಾರರು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಹಿಡಿದು ಬಂದಿದ್ದರು. ಪುನೀತ್ ರಾಜ್ ಕುಮಾರ್ ಅವರಿಗೆ ಜೈ ಕಾರ ಹಾಕಿದರು. ಈ ಮೂಲಕ ಕರಗ ಉತ್ಸವದಲ್ಲಿ ಅಪ್ಪುಗೆ ಆಶೀರ್ವಾದ ದೊರಕಿತು. ಕರಗ ಶಕ್ತೋಯತ್ಸವ ಸಂಪ್ರದಾಯದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿತ್ತು. ಆದರೆ ಕೆಲ ಕಿಡಿಗೇಡಿಗಳು  ಸಾಬ್ ದರ್ಗಾಕ್ಕೆ ಹೋಗದಂತೆ ತಡೆಗಟ್ಟುವುದಾಗಿ ತಿಳಿಸಿದ್ದರು. ಶನಿವಾರ ತಡರಾತ್ರಿ ಹೊರಟ ಕರಗ ಮೆರವಣಿಗೆಯಲ್ಲಿ ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿತ್ತು.     

ವೀರಕುಮಾರ ಜ್ಞಾನೇಂದ್ರ ಅವರು ಕರಗವನ್ನು ಹೊತ್ತಿದ್ದರು.  ಶನಿವಾರ ತಡರಾತ್ರಿ 2.40ಕ್ಕೆ ಗರ್ಭಗುಡಿಯಿಂದ ಕರಗ ಹೊರ ಬಂತು. ಕರಗಕ್ಕೆ ಜೊತೆಯಾಗಿ ವೀರಕುಮಾರರು, ಹಾಗೂ ಸುಬ್ರಹ್ಮಣ್ಯ ಹಾಗೂ ಗಣೇಶ ಉತ್ಸವ ಮೂರ್ತಿಗಳು ಬೀದಿ ಬೀದಿಗಳಲ್ಲಿ ಸಾಗಿದವು.  ರಾಜಬೀದಿಗೆ ಬಂದು ಅಲ್ಲಿದ ಹೊಸೂರು ಪೇಟೆಯ ಆಂಜನೇಯಸ್ವಾಮಿ ಹಾಗೂ ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇಗುಲಗಳಲ್ಲಿ ಪೂಜೆ ಸ್ವೀಕರಿಸಿತು. ಹೀಗೆ ಎಲ್ಲಾ ಏರಿಯಾಗಳಿಗೂ ಮೆರವಣಿಗೆ ಮಾಡಿ ನಂತರ ಭಾನುವಾರ ಬೆಳಗ್ಗೆ 10 ಗಂಟೆಗೆ ದೇವಾಲಯ ತಲುಪಿತು. ಭಕ್ತರು ದ್ರೌಪತಿ ತಾಯಿ ಕರಗ ಉತ್ಸವ ನೋಡಿ ಪುನೀತರಾದರು.