ಸುದೀಪ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ ಕಿಡಿಗೇಡಿಗಳು: ಯಶ್ ಹಾಗೂ ಸುದೀಪ್ ಬಗ್ಗೆ ಅನಗತ್ಯ ಚರ್ಚೆ ಬೇಕಾ..?

By Infoflick Correspondent

Updated:Thursday, April 21, 2022, 14:14[IST]

ಸುದೀಪ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ ಕಿಡಿಗೇಡಿಗಳು: ಯಶ್ ಹಾಗೂ ಸುದೀಪ್  ಬಗ್ಗೆ ಅನಗತ್ಯ ಚರ್ಚೆ ಬೇಕಾ..?

ಕೆಜಿಎಫ್ ಚಿತ್ರದಿಂದ ಸ್ಯಾಂಡಲ್ ವುಡ್ ಅನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಕೆಜಿಎಫ್ ಈ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯ. ಇದನ್ನು ನಾವೆಲ್ಲರೂ ಸಂಭ್ರಮಿಸಬೇಕು. ಒಳ್ಳೆಯ ವಿಚಾರವನ್ನು ಸಂಭ್ರಮಿಸುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಎಲ್ಲವನ್ನೂ ಹಾಳು ಮಾಡಿಬಿಡುತ್ತಾರೆ. ಅದಾಗಲೇ ಚಾಲೆಂಜಿಂಗ್ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವೆ ತಂದಿಟ್ಟು ತಮಾಷೆ ನೋಡಿದ್ದ ಕಿಡಿಗೇಡಿಗಳು, ಸ್ನೇಹಿತರನ್ನು ದೂರ ಮಾಡಿದ್ದರು. ಇಂದಿಗೂ ಇವರಿಬ್ಬರೂ ಒಂದಾಗಿರಲು ಸಾಧ್ಯವಾಗಿಲ್ಲ. 

ಇದೀಗ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವಿನ ಸ್ನೇಹ ಅಳಸುವಂತಹ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಕೆಜಿಎಫ್ ಚಿತ್ರಕ್ಕೆ ವಿಶ್ ಮಾಡಿಲ್ಲ. ಹೊಟ್ಟೆಕಿಚ್ಚು ಹಾಗೆ ಹೀಗೆ ಅಂತೆಲ್ಲಾ ಮಾತನಾಡಿದ್ದಾರೆ. ಅಲ್ಲದೇ, ಕಳೆದೆರಡು ವರ್ಷಗಳ ಹಿಂದೆ ಗೋವಾದಲ್ಲಿ ನಡೆದ ಫಿಲಂ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಕೆಜಿಎಫ್ ಬಗ್ಗೆ ಮಾತನಾಡಿದ್ದರು. ಈ ವೀಡಿಯೋವನ್ನು ಇದೀಗ ವೈರಲ್ ಮಾಡಿದ್ದು, ಕಿಡಿಗೇಡಿಗಳು ತಮ್ಮ ಕುಚೇಷ್ಟೆಯನ್ನು ಶುರು ಮಾಡಿದ್ದಾರೆ.   

ಫಿಲಂ ಫೆಸ್ಟಿವಲ್ ನಲ್ಲಿ ಪತ್ರಕರ್ತರೊಬ್ಬರು ಸುದೀಪ್ ಅವರನ್ನು ಪ್ರಶ್ನೆ ಮಾಡಿದ್ದರು. ಕೆಜಿಎಫ್ ಚಿತ್ರದ ಬಗ್ಗೆ ಹೇಳಿ ಎಂದು ಕೇಳುವ ಬದಲು ಆ ಪತ್ರಕರ್ತ ಕೆಜಿಎಫ್ ನಲ್ಲಿ ರಾಕಿ ಭಾಯ್ ರೋಲ್ ಬಗ್ಗೆ ಕೇಳಿದ್ದರು. ಆಗ ಸುದೀಪ್ ಅವರು ನಾನು ಕೆಜಿಎಫ್ ನಲ್ಲಿ ಇಲ್ಲ ಎಂದು ಹೇಳಿದ್ದರು. ಇದನ್ನೇ ಬಳಸಿಕೊಂಡು ವಿಡಿಯೋದಲ್ಲಿ ಟ್ವಿಸ್ಟ್ ಮಾಡಲಾಗಿದೆ. ಸುದೀಪ್ ಅವರ ಬಗ್ಗೆ ಇಷ್ಟು ಕೀಳಾಗಿ ಯೋಚಿಸಿರುವ ಕಿಡಿಗೇಡಿಗಳು ಯಶ್ ಹಾಗೂ ಸುದೀಪ್ ನಡುವೆ ತಂದಿಟ್ಟು ತಮಾಷೆ ಮಾಡಿದ್ದಾರೆ. ಇದು ಸ್ವಲ್ಪವೂ ಸರಿಯಿಲ್ಲ. ಅಷ್ಟೇ ಅಲ್ಲದೇ, ಸುದೀಪ್ ಅವರು ಕೆಜಿಎಫ್ ಚಿತ್ರದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಹೀಗಿರುವಾಗ ಕಿಡಿಗೇಡಿಗಳ ೀ ಕಾರ್ಯ ಅಭಿಮಾನಿಗಳಲ್ಲಿ ತುಂಬಾ ಬೇಸರ ತಂದಿದೆ.