ಅಪ್ಪು ಜಾತ್ರೆಯನ್ನ ಹೇಗೆಲ್ಲಾ ಮಾಡಲು ಸಿದ್ಧತೆ ನಡೆಸಿದ್ದಾರೆ ಗೊತ್ತಾ..? ವಾವ್ ಅಭಿಮಾನಿಗಳ ಈ ವಿಡಿಯೋ ನೋಡಿ..!

By Infoflick Correspondent

Updated:Saturday, March 12, 2022, 13:20[IST]

ಅಪ್ಪು ಜಾತ್ರೆಯನ್ನ ಹೇಗೆಲ್ಲಾ ಮಾಡಲು ಸಿದ್ಧತೆ ನಡೆಸಿದ್ದಾರೆ ಗೊತ್ತಾ..? ವಾವ್ ಅಭಿಮಾನಿಗಳ ಈ ವಿಡಿಯೋ ನೋಡಿ..!

ಪ್ರೀತಿಯ ಅಪ್ಪು (Puneeth Raj Kumar)  ಇದೀಗ ನಮ್ಮ ಜೊತೆ ಇಲ್ಲವಾಗಿ ನಾಲ್ಕು ತಿಂಗಳು ಕಳೆದಿದೆ. ಆದರೂ ಕೂಡ ಪ್ರತಿದಿನವೂ ಅವರ ನೆನಪು ಹೆಚ್ಚು ಕಾಡುತ್ತಿದೆ ಎಂದು ಹೇಳಬಹುದು. ನಾವು ಎಲ್ಲೇ ನೋಡಿದರು ಪುನೀತ್ ಫೋಟೋ ವೀಡಿಯೋಗಳು ಹೆಚ್ಚು ಕಾಣುತ್ತಿದ್ದು ಪುನೀತ್ ರಾಜಕುಮಾರ್ ಅವರು ಇಂದಿಗೂ ಎಂದೆಂದಿಗೂ ಅಜರಾಮರ ಆಗಿರುತ್ತಾರೆ. ಹಾಗೆ ಈಗಲೂ ಸಹ ನಮ್ಮ ಜೊತೆಗೆ ಇದ್ದಾರೆ ಎಂದೆನಿಸುತ್ತದೆ. ಅಂತಹ ಮಹಾನ್ ವ್ಯಕ್ತಿ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್  (James Movie) ಅವರ ಹುಟ್ಟುಹಬ್ಬದ ದಿನ ಭರ್ಜರಿಯಾಗಿ ಎಲ್ಲಾ ಕಡೆ ಬಿಡುಗಡೆಯಾಗಲಿದೆ. ಅಪ್ಪು ಚಿತ್ರ ಬರುತ್ತಿರುವುದು ಒಂದು ಕಡೆ ಸಂತೋಷ, ಇನ್ನೊಂದು ಕಡೆ ದುಃಖ ಎಂದು ಹೇಳಬಹುದು.

ಅವರ ಅಭಿಮಾನಿಗಳು ಅಪ್ಪು ನೆನಪಿನಲ್ಲಿಯೇ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಅಂದು ಚಿತ್ರಮಂದಿರಗಳಲ್ಲಿ ಕೈಗೊಂಡಿದ್ದಾರೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅವರ ಅಷ್ಟು ಸಿನಿಮಾದ ಕಟ್ ಔಟ್ ನಿಲ್ಲಿಸಿದ್ದು ಒಮ್ಮೆ ಬಂದು ನೋಡಿಕೊಂಡು ಹೋಗಿ ಮತ್ತೆ ಇತಿಹಾಸದಲ್ಲಿ ಈ ರೀತಿ ಯಾವ ನಟರಿಗೂ ಒಮ್ಮೆಗೆ ಇಷ್ಟು ಕಟೌಟ್ ಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಲ್ಲರೂ ಬಂದು ನೋಡಿಕೊಂಡು ಅಪ್ಪು ಅವರನ್ನ ಕಣ್ತುಂಬಿಕೊಳ್ಳಿ ಎಂದು ಅಭಿಮಾನಿಗಳು ಮಾಧ್ಯಮದ ಮುಂದೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಅಭಿಮಾನಿಗಳು ಜೇಮ್ಸ್ ಚಿತ್ರಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದು ಸಿನಿಮಾ ಬಿಡುಗಡೆ ವೇಳೆ ಎಲ್ಲ ಊಟದ ವ್ಯವಸ್ಥೆ ಸಹ ಮಾಡಿಕೊಂಡಿದ್ದಾರೆ. ಯಾರೇ ಬಂದರೂ ಅಂದು ಎಲ್ಲರಿಗೂ ಊಟ ಇರುತ್ತದಂತೆ.   

ಆರೋಗ್ಯ ತಪಾಸಣೆ, ಹಾಗೇನೇ ರಕ್ತದಾನ ಶಿಬಿರ ಒಳ್ಳೆಯ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ. ಅಸಲಿಗೆ ಅಂದು ಅಪ್ಪು ನೆನಪಿನಲ್ಲಿ ಏನೇನೆಲ್ಲ ಇರುತ್ತದೆ ಮತ್ತು ಅಪ್ಪು ಅವರ ಅಷ್ಟು ಕಟೌಟ್ಗಳು ಈಗ ಹೇಗೆ ಅಲ್ಲಿ ರಾರಾಜಿಸುತ್ತಿದೆ ಗೊತ್ತಾ..? ಈ ವಿಡಿಯೋ ನೋಡಿ. ಹಾಗೇನೇ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...(video credit : media centre)