ಕೊನೆಗೂ ಇಂದ್ರಜಿತ್ ಲಂಕೇಶ್ ಗೆ ವಾರ್ನಿಂಗ್ ಕೊಟ್ಟ ಸೃಜನ್ ಲೋಕೇಶ್..! ವಿಡಿಯೋ ವೈರಲ್

Updated: Thursday, July 22, 2021, 21:28 [IST]

    

ಹೌದು ಸ್ನೇಹಿತರೆ ಈಗ ಬಂದಿರುವ ಮಾಹಿತಿ ಪ್ರಕಾರ ಕನ್ನಡ ಕಿರುತೆರೆಯ ಮಜಾ ಟಾಕೀಸ್ ಸೃಜನ್ ಲೋಕೇಶ್  ದರ್ಶನ್ ಮೇಲೆ ಮಾಡುತ್ತಿರುವ ಇಂದ್ರಜಿತ್ ಅವರ ಕೆಲ ಆರೋಪಗಳಿಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. 25 ಕೋಟಿ ಶೂರಿಟಿ ವಿಚಾರಕ್ಕೆ ಆರಂಭಗೊಂಡ ಈ  ಗಲಾಟೆ ಈಗ ಸಾಕಷ್ಟು ತಿರುವುಗಳನ್ನ ಪಡೆದುಕೊಂಡಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮೈಸೂರಿನ ಪ್ರಿನ್ಸ್ ಹೋಟೆಲ್ ನ ಸಿಬ್ಬಂದಿಗೆ ದರ್ಶನ್ ಹೊಡೆದಿದ್ದಾರೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿ ದರ್ಶನ್ ವಿರುದ್ಧ ದೂರು ನೀಡುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.

ಇದಾದ ಬಳಿಕ ನಡೆದದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೆ. ದರ್ಶನ್ ಅವರು ಮಾಧ್ಯಮದ ಮುಂದೆ ಬಂದು ತುಂಬಾನೇ ಆಕ್ರೋಶ ಹೊರಹಾಕಿ ತಾವು ತಪ್ಪು ಮಾಡಿಲ್ಲ ಎಂದು ಹೇಳಿ, ಪೋಲಿಸರಿದ್ದಾರೆ ಪ್ರಕರಣವಿದೆ ತನಿಖೆಯಾಗಲಿ ಎಂದು ಹೇಳಿದ್ದರು. ಹಾಗೇನೆ ಇಂದ್ರಜಿತ್ ಲಂಕೇಶ್ ವಿರುದ್ಧವಾಗಿಯೂ ಸಹ ಸಾಕಷ್ಟು ವಿಚಾರಗಳ ಮಾತನಾಡಿ ಇಂದ್ರಜಿತ್ ಅವರ ಮೇಲೆ ಗುಡುಗಿದ್ದರು. ಹೌದು ಇದೀಗ ಮಜಾ ಟಾಕೀಸ್ ನಟ ಸೃಜನ್ ಲೋಕೇಶ್ ಅವರು ದರ್ಶನ್ ಅವರ ಪರ ನಿಂತು ಇದೇ ಹೋಟೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ.    

ಜೊತೆಗೆ ಇಂದ್ರಜಿತ್ಗೆ ವಾರ್ನಿಂಗ್ ಸಹ ನೀಡಿದ್ದಾರೆ ಎಂದು ವಿಡಿಯೋ ಮೂಲಕ ತಿಳಿದುಬಂದಿದೆ ಸ್ನೇಹಿತರೆ.ದರ್ಶನ್ ಅವರು ಮಾಡಿರುವತಕ್ಕಂತ ಒಳ್ಳೆಯ ಕಾರ್ಯಗಳನ್ನು ನೆನೆಸಿ ಸೃಜನ್ ಲೋಕೇಶ್ ಅವರು ಇಂದ್ರಜಿತ್ ಲಂಕೇಶ್ ಅವರ ಮೇಲೆ ಗುಡುಗಿದ್ದಾರೆ. ಇಂದ್ರಜಿತ್ ಅವರಿಗೆ ದರ್ಶನ್ ಪರ ನಿಂತು ಸೃಜನ್ ಲೋಕೇಶ್ ಹೇಳಿದ್ದನ್ನು ಕೇಳಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಷ್ಟಕ್ಕೂ ನಟ ಸೃಜನ್ ಹೇಳಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...