ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಸಿನಿಮಾ ನೋಡಿದ ವಿದೇಶಿಗರು ಮಾಡಿದ್ದೇನು ಗೊತ್ತಾ..?

By Infoflick Correspondent

Updated:Monday, April 25, 2022, 12:31[IST]

ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಸಿನಿಮಾ ನೋಡಿದ ವಿದೇಶಿಗರು ಮಾಡಿದ್ದೇನು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಾಗಿದೆ. ಅದಾಗಲೇ ಯಾರೂ ಊಹೆ ಮಾಡದ ಹಾಗೆ, ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕಮಾಲ್ ಮಾಡಿರು ಕೆಜಿಎಫ್ ಗೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ರಾಕಿ ಭಾಯ್ ನ ಹವಾ ಪ್ರಪಂಚದಾದ್ಯಂತ ಹರಡಿದ್ದು, ಕೆಜಿಎಫ್ 2 ಚಿತ್ರವು ಬೆಳ್ಳಿಪರದೆ ಮೇಲೆ ಕಮಾಲ್ ಮಾಡಿದೆ. 

ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಂತಸ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳು ಎಲ್ಲರಿಗೂ ಕನೆಕ್ಟ್ ಆಗುವಂತೆ ಎಮೋಷನ್ ಇದ್ದು, ತಾಯಿ ಮಗನ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರವನ್ನು ನೋಡದೇ ಇದ್ದರೆ ಮಿಸ್ ಮಾಡಿಕೊಳ್ಳುವುದಂತೂ ಖಂಡಿತ, ಚಿತ್ರದಲ್ಲಿನ ಪ್ರತಿಯೊಬ್ಬರ ನಟನೆಯೂ ಸೂಪರ್ ಆಗಿದೆ. ಹಠ, ಚಾಣಾಕ್ಷತನ, ಅಸೂಯೆ, ಕ್ರೂರಿತನ ಕೂಡಿದ ಸಿನಿಮಾದಲ್ಲಿ ಗಟ್ಟಿಗ ರಾಕಿಭಾಯ್ ತನ್ನ ಬುದ್ಧಿವಂತಿಕೆಯಿಂದ ನಡೆಯುವ ಚಿತ್ರ ಚೆನ್ನಾಗಿದೆ. ಹೀಗಾಗೊಇ ಈ ಸಿನಿಮಾ ಈಗ ದೇಶವಷ್ಟೇ ಅಲ್ಲದೇ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿದೆ.  

ಯಶ್ ಸಿನಿ ಮಾ ನೋಡಿದ ಹಲವು ವಿದೇಶಿಗರು ಸೋಶೀಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಕೆಲ ಯೂಟ್ಯುಬರ್ ಗಳು ಸಿನಿಮಾ ಬಗ್ಗೆ ಉತ್ತಮವಾದ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇದರಲ್ಲಿ ರಿಚರ್ಡ್ ಪೌಲ್ ಎಂಬುವರು ಕೆಜಿಎಫ್ ಸಿನಿಮಾ ನೋಡಿ ಖುಷ್ ಆಗಿದ್ದರು. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋ ಕೂಡ ಮಾಡಿದ್ದರು. ಇದೀಗ ಇವರು ಏನು ಮಾಡಿದ್ದಾರೆ ಗೊತ್ತಾ.? ಕೇಳಿದರೆ ಶಾಕ್ ಆಗ್ತೀರಾ. 

ರಿಚರ್ಡ್ ಪೌಲ್ ಅವರು ಕೆಜಿಎಫ್ ನೋಡಿ ಸಿನಿಮಾಗಷ್ಟೇ ಅಲ್ಲದೇ, ಭಾಷೆಗೂ ಫಿದಾ ಆಗಿದ್ದಾರೆ. ಹಾಗಾಗಿ ಕನ್ನಡ ಕಲಿಯಲು ಮುಂದಾಗಿದ್ದಾರೆ. ತಾವು ಕನ್ನಡ ಭಾಷೆಯನ್ನು ಕಲಿಯುತ್ತಿರುವ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡಿಗರಿಗೆ ಇದಕ್ಕಿಂತ ಖುಷಿಯ ವಿಷಯ ಬೇಕಾ ಸ್ನೇಹಿತರೆ. ಒಂದು ಅದ್ಭುತವಾದ ಸಿನಿಮಾ ಭುಮಿಯ ಒಂದು ಮೂಲೆಯಲ್ಲಿರುವ ರಾಜ್ಯ, ಭಾಷೆಯನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುತ್ತದೆ ಎಂದರೆ ಹೆಮ್ಮೆಯ ವಿಚಾರವೇ ಸರಿ.