ಗಾಳಿಪಟ ಖ್ಯಾತಿಯ ನಟಿ ನೀತು ಅಸಲಿಗೆ ಯಾಕೆ ಚಿತ್ರದಲ್ಲಿ ನಟಿಸುತ್ತಿಲ್ಲ ಗೊತ್ತಾ..! ನೀತು ಬಿಚ್ಚಿಟ್ಟ ಅಸಲಿ ಕಾರಣ

By Infoflick Correspondent

Updated:Thursday, June 2, 2022, 13:52[IST]

ಗಾಳಿಪಟ ಖ್ಯಾತಿಯ ನಟಿ ನೀತು ಅಸಲಿಗೆ ಯಾಕೆ ಚಿತ್ರದಲ್ಲಿ ನಟಿಸುತ್ತಿಲ್ಲ ಗೊತ್ತಾ..! ನೀತು ಬಿಚ್ಚಿಟ್ಟ ಅಸಲಿ ಕಾರಣ

ಚಿತ್ರರಂಗದಲ್ಲಿ ಆರಂಭದ ದಿನಗಳಲ್ಲಿ ನಾವು-ನೀವು ನೋಡಿದ ಹಾಗೆ ಎಲ್ಲರೂ ಗಮನಿಸುತ್ತಿದ್ದ ವಿಚಾರ ಏನೆಂದರೆ ಚಿತ್ರಗಳಲ್ಲಿ ಅಭಿನಯಿಸುವ ನಟ-ನಟಿಯರು ಅದೆಷ್ಟರ ಮಟ್ಟಕ್ಕೆ ಕಲೆಯನ್ನು ಹೊಂದಿದ್ದಾರೆ, ಅವರಲ್ಲಿ ನಟನಾ ಆಸಕ್ತಿ ಎಷ್ಟಿದೆ, ಹಾಗೆ ಅವರಿಗೆ ಯಾವೆಲ್ಲಾ ನಟನೆ ಬರುತ್ತದೆ ಎಂದು. ಆದರೆ ಇತ್ತೀಚಿನ ಸಿನಿಮಾರಂಗ ನೋಡುವುದಾದರೆ ಹೆಚ್ಚು ನಿರ್ಮಾಪಕರು, ನಿರ್ದೇಶಕರು, ಸಿನಿಮಾ ಮಾಡುವ ಮುನ್ನ ನಟ-ನಟಿಯರು ಎಷ್ಟು ಪ್ರತಿಭಾವಂತ ಇದ್ದಾರೆ ಎಂದು ನೋಡುವುದಿಲ್ಲ. ಬದಲಿಗೆ ನಟ-ನಟಿಯರು ಎಷ್ಟು ಹೈಟ್ ಇದ್ದಾರೆ. ನೋಡುವುದಕ್ಕೆ ಕಪ್ಪು ಅಥವಾ ಬಿಳಿ ಇದ್ದಾರಾ, ಎಷ್ಟು ಫಿಟ್ನೆಸ್ ಹೊಂದಿದ್ದಾರೆ ಎಂಬ ಈ ರೀತಿಯ ಸೂಕ್ಷ್ಮತೆಯ ಅಂಶಗಳನ್ನು ನಿರ್ದೇಶಕರು ನೋಡುತ್ತಿದ್ದಾರೆ ಎನ್ನಲಾಗಿದೆ. 

ಈಗ ಸಿನಿಮಾರಂಗ ತುಂಬಾನೇ ಬದಲಾಗಿದೆ. ಕಲೆ ಇದ್ದರೆ ನಾವು ಏನು ಬೇಕು ಅದನ್ನು ಮಾಡಬಹುದು, ಸಾಧನೆ ಮಾಡಬಹುದು ಎಂದವರಿಗೆ ಇದು ತುಂಬಾ ಹಿಂದೇಟು ಹಾಕಿದೆ. ಫಿಟ್ನೆಸ್ ಇರಬೇಕು, ನೋಡುವುದಕ್ಕೆ ಚೆಂದ ಇದ್ದರೆ ಮಾತ್ರ ಹೆಚ್ಚು ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ನೆಲೆಯೂರಲು ಸಾಧ್ಯ. ಹೌದು ಗಾಳಿಪಟ ಖ್ಯಾತಿಯ ನಟಿ ನೀತು ಅವರು ಇತ್ತೀಚಿಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ,, ಅದಕ್ಕೆ ಕಾರಣವನ್ನು ಕೂಡ ಅವರೇ ಹೇಳಿದ್ದು, ಇತ್ತೀಚಿಗೆ ಚೇತನ ಎಂಬ ಕಿರುತೆರೆಯ ಕಲಾವಿದೆ ನಟಿಯ ಸಾವಾಯಿತು. ಅದು ಫ್ಯಾಟ್ ಸರ್ಜರಿ ಮೂಲಕ. ಹೌದು ಇದೆ ವಿಚಾರವನ್ನು ಇದೀಗ ನಟಿ ನೀತು ಅವರು ಹೇಳಿಕೊಂಡಿದ್ದಾರೆ. ಹಾಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಆರಂಭದ ದಿನಗಳಲ್ಲಿ ನಾವು ನೋಡುವುದಕ್ಕೆ ತುಂಬಾ ಚೆನ್ನಾಗಿ ಇದ್ದೆವು. ಆದರೆ ಬರುಬರುತ್ತಾ ನಮ್ಮ ದೇಹದಲ್ಲಿ ಏರುಪೇರಾಗುತ್ತದೆ. ಆಹಾರದ ಪದ್ಧತಿಯಿಂದಲೋ ಅಥವಾ ಬೇರೆ ಏನೋ ಒಂದು ಕಾರಣಕ್ಕೋ ಗೊತ್ತಿಲ್ಲ. ನನಗೆ ಕೆಲ ನಿರ್ಮಾಪಕರು ನಿರ್ದೇಶಕರು ನೀನು ದಪ್ಪಗಾಗಿದ್ದೀಯಾ ಎಂದರು. ಹಾಗಾಗಿ ನಾನು ಪ್ಯಾಟ್ ಸರ್ಜರಿ ಮೊರೆಹೋದೆ. ಆದರೆ ಬಳಿಕ ಆಗಿದ್ದು ದೊಡ್ಡ ದುರಂತ ಎನ್ನಬಹುದು.ನಾನು ಮೊದಲಿಗಿಂತಲೂ ತುಂಬಾ ದಪ್ಪ ಆದೆ. ಹಾಗಾಗಿ ನನಗೆ ಸಿನಿಮಾ ಅವಕಾಶಗಳು ಕೈ ತಪ್ಪಿ ಹೋದವು. ಹೆಣ್ಣುಮಕ್ಕಳು ಏನೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮತ್ತು ಫ್ಯಾಟ್ ಸರ್ಜರಿ ಮಾಡಿಸುವ ಮುನ್ನ ಹತ್ತು ಬಾರಿ ಯೋಚಿಸಿ. ಈ ಫ್ಯಾಟ್ ಸರ್ಜರಿ ಮಾಡಿಸಿ ಸಮಸ್ಯೆಗೆ ಒಳಗಾಗಬೇಡಿ ಇದೇ ಕಾರಣದಿಂದಾಗಿ ನನಗೆ ಸಿನಿಮಾ ಅವಕಾಶಗಳು ಸಿಗಲಿಲ್ಲ ಎಂದಿದ್ದಾರೆ ನೀತು..( video credit ; b4u kannada )