Golden Star Ganesh : ಗಣೇಶ್ ಮಗ ಹೇಗಿದ್ದಾನೆ ಗೊತ್ತಾ..? ಅದೊಂದು ವಿಚಾರ ಬಿಚ್ಚಿಟ್ಟು ಭಾವುಕರಾದ ಗಣೇಶ್

By Infoflick Correspondent

Updated:Friday, August 5, 2022, 19:23[IST]

Golden Star Ganesh :  ಗಣೇಶ್ ಮಗ ಹೇಗಿದ್ದಾನೆ ಗೊತ್ತಾ..? ಅದೊಂದು ವಿಚಾರ ಬಿಚ್ಚಿಟ್ಟು ಭಾವುಕರಾದ ಗಣೇಶ್

ಗಾಳಿಪಟ 2 ಮುಂಬರುವ ಭಾರತೀಯ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಯೋಗರಾಜ್ ಭಟ್ ಅವರು ಬರೆದು ನಿರ್ದೇಶಿಸಿದ್ದಾರೆ. ಹಾಗೇನೇ ಗಾಳಿಪಟದ ಮುಂದುವರಿದ ಭಾಗ ಇದಾಗಿದ್ದು ಎನ್ನಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ಖ್ಯಾತ ಹಿರಿಯ ನಟ ಅನಂತ್ ನಾಗ್, ಹಾಗೆ ನಟ ದಿಗಂತ್, ನಿರ್ದೇಶಕ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಒಳಗೊಂಡಿರುವ ಸಮಗ್ರ ತಾರಾಗಣವನ್ನು ಒಳಗೊಂಡಿದೆ ಈ ಚಿತ್ರ. ಗಾಳಿಪಟ 2 ಚಿತ್ರ ತಂಡ ವಿಶೇಷ ಕಾರ್ಯಕ್ರಮವ ಜೀ ಕನ್ನಡದಲ್ಲಿ ಹಮ್ಮಿಕೊಂಡಿತ್ತು. ಹೌದು ಇಡೀ ಗಾಳಿಪಟ 2 ಚಿತ್ರ ತಂಡ ವರಮಹಾಲಕ್ಷ್ಮಿ ವಿಶೇಷ ಕಾರ್ಯಕ್ರಮದಲ್ಲಿ ಕಾಣಿಸಿದ್ದು ತುಂಬಾ ಅದ್ಭುತವಾಗಿತ್ತು ಎನ್ನಬಹುದು.. 

ನಟ ಗಣೇಶ್ ಅವರ ಮುದ್ದು ಮಗ ವಿಹಾನ್ ಕೂಡ ಈ ಸ್ಟೇಜಿಗೆ ಬಂದಿದ್ದು ಅಪ್ಪ ಮಗನ ಬಂಧನ ಮತ್ತು ಅವರಿಬ್ಬರ ಒಡನಾಟ ಅವರು ನಡೆದುಕೊಂಡ ರೀತಿ ನಿಜಕ್ಕೂ ಎಲ್ಲರ ಕಣ್ಣಂಚಲಿ ನೀರು ತರಿಸಿತು. ನಟ ಗಣೇಶ್ ಅವರಿಗೆ ಅವರ ಮಗ ವಿಹಾನ್ ಎಂದರೆ ತುಂಬಾ ಇಷ್ಟವಂತೆ, ವಿಹಾನ್ ಕೂಡ ಗಾಳಿಪಟ ಎರಡು ಚಿತ್ರದಲ್ಲಿ ಅಭಿನಯವ ಮಾಡಿದ್ದಾನೆ ಎಂದು ಹೇಳಿಕೊಂಡರು. ಹಾಗೆ ನಿಮ್ಮ ಮತ್ತು ನಿಮ್ಮ ಮಗ ವಿಹಾನ್ ಬಗ್ಗೆ ಹೇಳುವುದಾದರೆ ಏನನ್ನು ಹೇಳುತ್ತಿರಿ ಗಣೇಶ್ ಸರ್ ಎಂದಾಗ ಅನುಶ್ರೀ ಮಾತಿಗೆ ಗಣೇಶ್ ಅವರು, ನಮ್ಮ ತಂದೆ ತೀರಿದ್ದು ಆಗಸ್ಟ್ 27,, ಇವನು ಹುಟ್ಟಿದ್ದು ಅಗಸ್ಟ್ 27,, ಹಾಗಾಗಿ ಇವನು ನನಗೆ ಅಪ್ಪನ ರೀತಿಯೇ. ತುಂಬಾ ಅಟ್ಯಾಚ್ಮೆಂಟ್ ಇದೆ. ಸದಾ ಯಾವಾಗಲೂ ಇವನ ಜೊತೆ ಇರಬೇಕು ಎಂದುಕೊಳ್ಳುತ್ತೇನೆ, ಅಷ್ಟು ಪ್ರೀತಿ ಇವನು ನನಗೆ ನೀಡುತ್ತಾನೆ ಎಂದು ಗಣೇಶ್ ತುಂಬಾ ಭಾವುಕರಾದರು.

ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋ ನೀವು ಕೂಡ ಒಮ್ಮೆ ಈ ಲೇಖನದ ಕೊನೆಯಲ್ಲಿ  ನೋಡಬಹುದು ವಿಹಾನ್ ಯಾವ ರೀತಿ ಡಾನ್ಸ್, ನಟನೆ ಮಾಡುತ್ತಾನೆ ಎಂದು ಅವನ ಬಾಯಿಯಲ್ಲಿ ಕೇಳಿ. ಹಾಗೆ ವಿಡಿಯೋ ಇಷ್ಟವಾದ ಬಳಿಕ ಶೇರ್ ಮಾಡಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮ ನಡೆದಿದ್ದು, ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು, ಯೋಗರಾಜ್ ಭಟ್ ನಿರ್ದೇಶಿಸಿದ ಈ ಗಾಳಿಪಟ ಎರಡು ಚಿತ್ರ ಒಟ್ಟು ಮೂರು ಕೋಟಿ ಬಜೆಟ್ ನಲ್ಲಿ ರೆಡಿಯಾಗಿದೆ. ಹಾಗೆ ಇದೆ ತಿಂಗಳು 12ನೇ ತಾರೀಕು ಭರ್ಜರಿಯಾಗಿ ತೆರೆಗೆ ಬರುತ್ತಿದ್ದು, ನೀವು ಕೂಡ ಹೆಚ್ಚು ಕಾತುರರಾಗಿದ್ದರೆ ಸಿನಿಮಾ ವೀಕ್ಷಣೆಗೆ ತಪ್ಪದೆ ಕಾಮೆಂಟ್ ಮಾಡಿ, ಮಾಹಿತಿ ಶೇರ್ ಮಾಡಿ ಧನ್ಯವಾದ..( video credit : zee kannada )