ಗಣೇಶ್ ಮತ್ತು ಅವನ ಹಳೆ ಗೆಳೆಯ ಒಂದಾದರು ಗೋಲ್ಡನ್ ಗ್ಯಾಂಗ್ ನಲ್ಲಿ ಯಾರದು ನೋಡಿ ?

By Infoflick Correspondent

Updated:Saturday, January 15, 2022, 08:36[IST]

ಗಣೇಶ್ ಮತ್ತು ಅವನ ಹಳೆ ಗೆಳೆಯ ಒಂದಾದರು ಗೋಲ್ಡನ್ ಗ್ಯಾಂಗ್ ನಲ್ಲಿ ಯಾರದು ನೋಡಿ ?

ಗೋಲ್ಡನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಗಣೇಶ್ ಅವರು ಇತ್ತೀಚಿಗೆ ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ಈ ಹಿಂದೆಯೇ ಸಾಕಷ್ಟು ರಿಯಾಲಿಟಿ ಶೋ ನಡೆಸಿಕೊಟ್ಟಿದ್ದು ಸಕತ್ತಾಗಿ ನಿರೂಪಣೆ ಮಾಡಿರುವ ಗಣೇಶ್ ಅವರು ಕಿರುತೆರೆ ಮೇಲೆ ಅಭಿಮಾನಿಗಳ ಖುಷಿ ಕ್ಷಣಗಳಿಗೆ ಕಾರಣವಾಗುತ್ತಾರೆ. ಹಾಗೆ ಅವರದ್ದೇ ಆದ ನಗೆ ಚಟಾಕಿ ಮಾತಿನ ಮೂಲಕ ಒಳ್ಳೆ ರಸದೌತಣ ನೀಡುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಹೌದು ನಟ ಗಣೇಶ್ ಅವರು ಈ ಹಿಂದೆ ನಡೆಸಿಕೊಟ್ಟಿದ್ದ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದ್ದರು. ಅದರಂತೆ ಇದೀಗ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ನೀಡಿದ ಗಣೇಶ್ ಅವರು ಗೋಲ್ಡನ್ ಗ್ಯಾಂಗ್ ಎನ್ನುವ ಹೊಸ ಶೋ ಆರಂಭಿಸಿದ್ದಾರೆ.

ಈ ಶೋ ಮೂಲಕ ಸಕತ್ ನಿರೂಪಣೆ ಮಾಡುತ್ತ ಈ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದ ಮೂಲ ಉದ್ದೇಶ, ಹೆಚ್ಚು ಪ್ರಸಿದ್ಧಿ ಪಡೆದಿರುವ ಸಿನಿಮಾರಂಗದಲ್ಲಿ ಖ್ಯಾತಿ ಹೊಂದಿದ ಗೆಳೆಯರನ್ನು ಒಟ್ಟಿಗೆ ಸೇರಿಸಿ, ಅವರ ಕಷ್ಟ ಸುಖ ಹಾಗೂ ನೆನಪುಗಳು,ಬ್ಮರೆಯಲಾಗದಂತಹ ಘಟನೆಗಳ ಬಗ್ಗೆ ಮೆಲುಕು ಹಾಕಿ ಗೊತ್ತಿರದ ವಿಷಯಗಳ ಪ್ರಸ್ತಾಪ ಮಾಡಿ, ಅಭಿಮಾನಿಗಳಿಗೆ ಹಂಚುವ ಮೂಲಕ ಗೆಳೆಯರಿಗಾಗಿ ಮಾಡಿರುವ ಕಾರ್ಯಕ್ರಮವಾಗಿದೆ. ಈಗಾಗಲೇ ಒಂದು ವಾರ ಪ್ರಸಾರ ಆಗಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಗಣೇಶ್ ಅವರು, ಈ ಕಾರ್ಯಕ್ರಮ ಸ್ನೇಹಿತರಿಗಾಗಿ ಮಾಡಿದ್ದೇವೆ.   

ಗೆಳೆತನದಲ್ಲಿ ಮನಸ್ತಾಪಗಳು ಬರುವುದು ಮಾಮೂಲಿ, ಮನಸ್ತಾಪ ಬಂದಾದ ಮೇಲೆ ಮತ್ತೆ ಒಂದುಗೂಡುವ ಸ್ನೇಹ ತುಂಬಾ ಗಟ್ಟಿಯಾಗಿರುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಮುಂಗಾರು ಮಳೆ ಸಮಯದಲ್ಲಿ ನಾನು ಯೋಗರಾಜ್ ಭಟ್ ಹಾಗೂ ಪ್ರೀತಂ ಗುಬ್ಬಿ ತುಂಬಾನೇ ಚೆನ್ನಾಗಿ ಇದ್ದೆವು. ಒಳ್ಳೆಯ ಸ್ನೇಹಿತರಾಗಿದ್ದೆವು. ಬಳಿಕ ನನ್ನ ಹಾಗೂ ಪ್ರೀತಂ ಗುಬ್ಬಿ ನಡುವೆ ಮನಸ್ತಾಪ ಹುಟ್ಟಿಕೊಂಡಿತು. ಬಳಿಕ ಮತ್ತೆ ನಾವಿಬ್ಬರು ನಮ್ಮ ಹಳೆಯ ಸ್ನೇಹದ ಮೂಲಕ ಒಂದಾದೆವು. ಮೊದಲಿನ ಗೆಳೆತನಕ್ಕಿಂತ ಮನಸ್ತಾಪ ಬಂದ ಬಳಿಕ ಇರುವ ಗೆಳೆತನವೇ ಹೆಚ್ಚು ಗಟ್ಟಿಯಾಗಿದೆ ಎಂದು ಉದಾಹರಣೆ ಸಹಿತ ಹೇಳಿ, ಮುಂಗಾರು ಮಳೆ ಸಿನಿಮಾ ವೇಳೆ ನಡೆದ ಇದರ ಬಗ್ಗೆ ಮಾತನಾಡಿದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಹೇಗೆ ಮೂಡಿಬರುತ್ತಿದೆ ಎಂಬುದಾಗಿ ಕಾಮೆಂಟ್ ಮಾಡಿ..