ಹೊಸ ರಿಯಾಲಿಟಿ ಶೋ ಪ್ರಾರಂಭಿಸುತ್ತಿರುವ ಸ್ಟಾರ್‌ ಸುವರ್ಣ: ಇದಕ್ಕೆ ನಿರೂಪಕರು ಯಾರು ಗೊತ್ತಾ..?

By Infoflick Correspondent

Updated:Tuesday, June 28, 2022, 21:26[IST]

ಹೊಸ ರಿಯಾಲಿಟಿ ಶೋ ಪ್ರಾರಂಭಿಸುತ್ತಿರುವ ಸ್ಟಾರ್‌ ಸುವರ್ಣ: ಇದಕ್ಕೆ ನಿರೂಪಕರು ಯಾರು ಗೊತ್ತಾ..?

ನಮಸ್ಕಾರ.. ನಮಸ್ಕಾರ.. ನಮಸ್ಕಾರ.. ಎನ್ನುತ್ತಾ ಇಡೀ ಕರುನಾಡ ಜನರಿಗೆ ಚಿರಪರಿಚಿತರಾಗಿದ್ದು, ಗೋಲ್ಡನ್‌ ಸ್ಟಾರ್‌ ಗಣೇಶ್.‌ ನನಟಿಸುವ ಆಸೆಯಿಂದ ದೂರದೂರಿನಿಂದ ಬೆಂಗಳೂರಿಗೆ ಬಂದು, ನಿರೂಪಣೆಯ ಜೊತೆಗೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಟ ಇಂದು ಗೋಲ್ಡನ್‌ ಸ್ಟಾರ್‌ ಪಟ್ಟವನ್ನು ಅಲಂಕರಿಸಿದ್ದಾರೆ. ಕಾಮಿಡಿ ಟೈಮ್‌ ಗಣೇಶ್‌ ಎಂದೇ ಗುರುತಿಸಿಕೊಂಡವರು ಇಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಆಗಿದ್ದಾರೆ.  ಅವರು ಇಂದು ಎಲ್ಲರ ನೆಚ್ಚಿನ ನಟ, ನಿರೂಪಕ. ಸೂಪರ್‌ ಮಿನಿಟ್‌, ಗೋಲ್ಡನ್‌ ಗ್ಯಾಂಗ್ ಸೇರಿದಂತೆ ಹಲವು ರಿಯಅಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.    

ಗಣೇಶ್‌ ಅವರು ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಮೂರು ತಿಂಗಳ ಹಿಂದಷ್ಟೇ, ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಗೋಲ್ಡನ್‌ ಗ್ಯಾಂಗ್‌ ಎಂಬ ರಿಯಾಲಿಟಿ ಶೋ ಅನ್ನು ೨೨ ಸಂಚಿಕೆಗಳು ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ವರ್ಷದ ಸೆಲೆಬ್ರಿಟಿ ಸ್ನೇಹಿತರನ್ನು ಕರೆಸಿ ಮಾತನಾಡಿಸಲಾಗಿತ್ತು. ಸ್ನೇಃದ ಪಯಣವನ್ನು ನೆನಪಿಸಿ ಭಾವುಕರನ್ನಾಗಿಸಿತ್ತು. ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಗಣೇಶ್‌ ಅವರು ಮೊದಲ ಬಾರಿಗೆ ಸ್ಟಾರ್‌ ಸುವರ್ಣ ವಾಹಿನಿಗೆ ಎಂಟ್ರಿ ಕೊಡಲಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ISMART ಜೋಡಿ ಎಂಬ ಹೊಸ ರಿಯಾಲಿಟಿ ಶೋ ಬರುತ್ತಿದೆ. ಇದನ್ನು ಗಣೇಶ್ ಅವರು ಹೋಸ್ಟ್‌ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ಕಿರುತೆರೆಯ 10 ಜನಪ್ರಿಯ ರೋಮ್ಯಾಂಟಿಕ್ ಜೋಡಿಗಲು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋದಲ್ಲಿ ಗಣೇಶ್‌ ಅವರು ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿರುವ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. ಆದರೆ ಈ ಶೋನಲ್ಲಿ ಯಾರು ಯಾರು ಇರುತ್ತಾರೆ.? ಯಾವಾಗ ಪ್ರಾರಂಭವಾಗುತ್ತೆ ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಿಲ್ಲ.