ಗೀತಾ,‌''ದೊರೆಸಾನಿ'' ಧಾರಾವಾಹಿಯಲ್ಲಿ ನಟಿಸಿದ ನಟಿ ಚೇತನಾ ರಾಜ್ ಇನ್ನಿಲ್ಲ!

By Infoflick Correspondent

Updated:Tuesday, May 17, 2022, 08:54[IST]

ಗೀತಾ,‌''ದೊರೆಸಾನಿ'' ಧಾರಾವಾಹಿಯಲ್ಲಿ ನಟಿಸಿದ ನಟಿ ಚೇತನಾ ರಾಜ್ ಇನ್ನಿಲ್ಲ!

ಗೀತಾ', 'ದೊರೆಸಾನಿ' ಧಾರಾವಾಹಿ ಹಾಗೂ ಹಲವು ಚಿತ್ರಗಳಲ್ಲಿ  ಅಭಿನಯಿಸಿದ ಬೆಂಗಳೂರಿನಲ್ಲಿ ಕಿರುತೆರೆ ನಟಿ ಚೇತನಾ ರಾಜ್(21) ಸಾವನ್ನಪ್ಪಿದ್ದಾರೆ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. 

ನಟಿ ಚೇತನ ರಾಜ್ ಫ್ಯಾಟ್​ (ದೇಹತೂಕ) ಇಳಿಸಿಕೊಳ್ಳಲು ಡಾ.ಶೆಟ್ಟಿ ಕಾಸ್ಮೆಟಿಕ್​ ಆಸ್ಪತ್ರೆಯಲ್ಲಿ ಟ್ರೀಟ್​ಮೆಂಟ್​ ಪಡೆದಿದ್ದರು. ನಿನ್ನೆ ನವರಂಗ್​​​ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಗೆ ಸೇರಿದ್ದರು, ಚೇತನಾ ಸಂಜೆ 4 ಗಂಟೆ ವೇಳೆಗೆ ಸಿರಿಯಸ್ ಆಗಿದ್ದಾರೆ. ಕೂಡಲೇ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.ಚೇತನಾ ರಾಜ್​​​ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.     

ಫ್ಯಾಟ್ ಸರ್ಜರಿ ವೇಳೆಯಲ್ಲಿ  ಶ್ವಾಸಕೋಶದಲ್ಲಿ ನೀರಿನ ಅಂಶ ಸೇರಿಕೊಂಡು ಅವರು ಸಾವನ್ನಪ್ಪಿದ್ದಾರೆ. ತಾಯಿ ಮುನಿಲಕ್ಷ್ಮಿ ಅವರು ವೈದ್ಯರ ನಿರ್ಲಕ್ಷದಿಂದ ಚೇತನಾ ಮೃತಪಟ್ಟಿದ್ದಾರೆ. ಪೋಷಕರ ಒಪ್ಪಿಗೆ ಇಲ್ಲದೆ ಸರ್ಜರಿ ಮಾಡಿದ್ದೇ ಘಟನೆಗೆ ಕಾರಣವೆಂದು ಆರೋಪಿಸಿದ್ದಾರೆ.  ಈ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.