ಟ್ವಿಟರ್ ನಲ್ಲಿ ಯಶ್ ಟ್ರೆಂಡ್ ಹುಟ್ಟು ಹಾಕಿದ ಮಹಿಳಾ ಫ್ಯಾನ್ಸ್..! ಈ ಗರ್ಲ್ಸ್ ವಿಡಿಯೋ ಈಗ ವೈರಲ್

By Infoflick Correspondent

Updated:Saturday, April 16, 2022, 09:04[IST]

ಟ್ವಿಟರ್ ನಲ್ಲಿ ಯಶ್ ಟ್ರೆಂಡ್ ಹುಟ್ಟು ಹಾಕಿದ ಮಹಿಳಾ ಫ್ಯಾನ್ಸ್..! ಈ ಗರ್ಲ್ಸ್ ವಿಡಿಯೋ ಈಗ ವೈರಲ್

ಕೆಜಿಎಫ್ ಚಾಪ್ಟರ್ ಟು ಸಿನಿಮಾ ನಿನ್ನೆ ಇಡೀ ವಿಶ್ವದಾದ್ಯಂತ ಭರ್ಜರಿಯಾಗಿ ಎಂಟ್ರಿ ಪಡೆದಿದೆ. ತೆರೆಮೇಲೆ ರಾಕಿ ಬಾಯ್ ಎಂಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು ಇದೊಂದು ಸಿನಿಮಾ ದೊಡ್ಡ ಹಾವಳಿ ಮಾಡುತ್ತಿದೆ ಎಂದು ಹೇಳಬಹುದು. ಕನ್ನಡದ ಗತ್ತು ಏನೆಂದು ಇಡೀ ಪ್ರಪಂಚಕ್ಕೆ ಕೆಜಿಎಫ್ ತೋರಿಸಿದೆ. ಇಡೀ ಪ್ರಪಂಚವೆ ಇಷ್ಟು ದಿವಸದಿಂದ ಕಾಯುತ್ತಿದ್ದ ನಮ್ಮ ಕೆಜಿಎಫ್ ಚಾಪ್ಟರ್ 2 ಕನ್ನಡ ಸಿನಿಮಾ ನಿನ್ನೆ ಚಂಡಮಾರುತದಂತೆ ತೆರೆಗೆ ಅಪ್ಪಳಿಸಿದೆ. ಕೆಜಿಎಫ್ 2 ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೂಡ ಥೇಯಟರ್ನಲ್ಲಿ ಹುಚ್ಚೆದ್ದು ರಾಕಿ ಬಾಯ್ ಅಭಿನಯಕ್ಕೆ ಕುಣಿದಿದ್ದಾರೆ. ರಾಕಿ ಬಾಯ್ ಅಭಿಮಾನಿಗಳು ಮಾತ್ರ ಹೆಚ್ಚು ಸಂತಸಪಟ್ಟಿದ್ದಾರೆ ಎಂದು ಹೇಳಬಹುದು.

ಹೌದು ಇಡೀ ಭಾರತ ಚಿತ್ರರಂಗದ ಅಭಿಮಾನಿಗಳು ರಾಕಿ ಬಾಯ್ ಅಭಿನಯಕ್ಕೆ ಫಿದಾ ಆಗಿದ್ದು, ಎಲ್ಲರೂ ಕೂಡ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ ಅಭಿನಯಕ್ಕೆ ಮತ್ತೆ ಅಭಿಮಾನಿಯಾಗಿದ್ದಾರೆ ಎನ್ನಬಹುದು. ಇನ್ನು ಕೆಲವು ಮಹಿಳಾ ಅಭಿಮಾನಿಗಳು ಕೂಡ ರಾಕಿಂಗ್ ಸ್ಟಾರ್ ಯಶ್ ಅವರನ್ನು ತುಂಬಾ ಪ್ರೀತಿಯಿಂದ ಬರ ಮಾಡಿಕೊಂಡಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಅದೇ ವಿಡಿಯೋ ಭಾರಿ ವೈರಲ್ ಆಗುತ್ತಿದೆ ಎನ್ನಬಹುದು. ನಟ ಯಶ್ ಅವರನ್ನ ಬರ ಮಾಡಿಕೊಂಡ ಈ ಅಭಿಮಾನಿ ಬಳಗಕ್ಕೆ ನೀವು ಕೂಡ ಶಭಾಷ್ ಎನ್ನುತ್ತೀರಿ. ಇದೊಂದು ಗರ್ಲ್ಸ್ ಟೀಮ್ ಆಗಿದ್ದು, ಎಲ್ಲರೂ ಕೂಡ ಬಿಳಿ ಟೀ ಶರ್ಟ್ ತೊಟ್ಟು ಯಶ್ ಬಾಸ್ ಎಂದು ಹಿಂದಗಡೆ ಬರೆಸಿಕೊಂಡು ರಾಕಿ ಬಾಯ್ ಫೋಟೋ ಮುಂದೆ ಕೆಜಿಎಫ್ ಚಾಪ್ಟರ್ ಟು ಎಂದು ಬರೆದು ಫೋಟೋಗೆ ಹೂವಿನ ಹಾರಹಾಕಿ ಬಳಿಕ ಹೂವನ್ನು ರಾಕಿ ಭೈ ಮೇಲೆ ಹಾಕಿ ಪೂಜೆ ಮಾಡಿದ್ದಾರೆ.   

ಹೌದು ಅಭಿಮಾನದಿಂದ ಈ ಗರ್ಲ್ಸ್ ಗ್ಯಾಂಗ್ ಸಿನಿಮಾ ಬಗ್ಗೆ ಕೂಡ ಮಾತನಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ತುಂಬಾ ಅದ್ಭುತವಾಗಿದೆ ಎಂದಿದ್ದಾರೆ. ಹೌದು ಈ ಗರ್ಲ್ಸ್ ಹಾವಳಿಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ಒಮ್ಮೆ ಈ ವಿಡಿಯೋ ನೀವೂ ನೋಡಿ. ಹಾಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಹೇಗಿದೆ ಎಂದು ಕಮೆಂಟ್ ಮಾಡಿ ಧನ್ಯವಾದಗಳು...