ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ; ಇಲ್ಲಿದೆ ಡಿ ಬಾಸ್ ಮುಂದಿನ ಸಿನಿಮಾ ವಿವರ

By Infoflick Correspondent

Updated:Monday, June 27, 2022, 10:15[IST]

ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ; ಇಲ್ಲಿದೆ ಡಿ ಬಾಸ್ ಮುಂದಿನ ಸಿನಿಮಾ ವಿವರ

ದರ್ಶನ್​ ಅಂದ್ರೆ ಸ್ಯಾಂಡಲ್​​ವುಡ್​​ನಲ್ಲಿ ಮಾಸ್​​ ಅಂಡ್​​ ಕ್ಲಾಸ್​ ಹೀರೋ. ಬಾಕ್ಸಾಫೀಸ್​ ಸುಲ್ತಾನ್​ ಆಗಿ ಮೆರೆಯುತ್ತಿದ್ದಾರೆ ದರ್ಶನ್. ಇದೀಗ ಡಿ ಬಾಸ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ದರ್ಶನ್​ ಮುಂದಿನ ಸಿನಿಮಾದ ಬಗ್ಗೆ ಹೊಸ ಅಪಡೇಟ್​ ಸಿಗೋಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಈಗ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸ್ತಾರಾ..? ಇವರ ಮುಂದಿನ ಆಯ್ಕೆ ಯಾವುದು..? ಅನ್ನೋವುದರ ಬಗ್ಗೆ ಸುಳಿವು ಸಹ ಸಿಕ್ಕಿದೆ.

ಸದ್ಯಕ್ಕೆ ದರ್ಶನ್ ನಟನೆಯ ಮುಂದಿನ ಸಿನಿಮಾಗೆ ಡಿ 56 ಎಂದು ಹೆಸರಿಟ್ಟಿದ್ದು ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಿನಿಮಾದ ಲಾಂಚ್ ಗಾಗಿ ಚಿತ್ರತಂಡ ಈಗಾಗ್ಲೆ ಸಾಕಷ್ಟು ತಯಾರಿ ಮಾಡಿಕೊಂಡಿದೆ,. ಈ ಬಗ್ಗೆ ಮಾತನಾಡಿರುವ ರಾಕ್ ಲೈನ್ ವೆಂಕಟೇಶ್, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದರ್ಶನ್ ಅವರ ಮುಂದಿನ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ.  

ಖ್ಯಾತ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​, ದರ್ಶನ್​​ಗಾಗಿ ಪ್ಯಾನ್​ ಇಂಡಿಯಾ ಸಿನಿಮಾ ಮಾಡ್ತೀವಿ. ಈ ಸಿನಿಮಾದ ಕಥೆಯೇ ಹಾಗೆ ಇದೆ. ತರುಣ್​ ಸುದೀರ್​ ನಿರ್ದೇಶನದಲ್ಲಿ ಈ ಪ್ಯಾನ್​ ಇಂಡಿಯಾ ಸಿನಿಮಾ ಮೂಡಿಬರುತ್ತದೆ. ಈಗಾಗಲೇ ಈ ಸಿನಿಮಾಕ್ಕಾಗಿ ಸಾಕಷ್ಟು ವರ್ಕೌಟ್​ ಮಾಡಿದ್ದೀವಿ. ವರಮಹಾಲಕ್ಷ್ಮಿ ಹಬ್ಬದ ದಿನ ಈ ಪ್ಯಾನ್​ ಇಂಡಿಯಾ ಸಿನಿಮಾದ ಮುಹೂರ್ತ ಸಮಾರಂಭ ಸಖತ್​ ಅದ್ಧೂರಿಯಾಗಿ ನಡೆಯುತ್ತದೆ. ಈ ಸಿನಿಮಾದಲ್ಲಿ ದರ್ಶನ್​ ಜೊತೆ ಬೇರೆ ಬೇರೆ ಸ್ಟಾರ್​ಗಳು ಸಹ ನಟಿಸುತ್ತಾರೆ ಅಂತ ಹೇಳಿದ್ದಾರೆ.

ಈಗಾಗಲೇ D 56 ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಕಥೆಯ ಮೇಲೆ ದುಪ್ಪಟ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ದರ್ಶನ್ ಜೊತೆ ಈ ಹಿಂದೆ ರಾಬರ್ಟ್ ಸಿನಿಮಾ ಮಾಡಿದ್ದ ತರುಣ್ ಸುಧೀರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಡಿ 56 ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು ದೊಡ್ಡ ಮಟ್ಟದ ಸಿನಿಮಾ ನಿರ್ಮಾಣವಾಗಲಿದೆ. ಆದರೆ ಪೋಸ್ಟರ್ ಹೊರತುಪಡಿಸಿ ಮತ್ಯಾವ ಅಂಶವನ್ನು ಕೂಡ ಚಿತ್ರತಂಡ ರಿವೀಲ್ ಮಾಡಿಲ್ಲ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರದ ಮುಹೂರ್ತ ನೆರವೇರಲಿದೆ.