ವರ್ತೂರು ಮದುವೆ ವಿಡಿಯೋ ಹೇಗಿದೆ ನೋಡಿ..! ಸುದೀಪ್ ಮುಂದೆಯೂ ಸುಳ್ಳು ಹೇಳಿದರೆ ಸಂತೋಷ್..?

ವರ್ತೂರು ಮದುವೆ ವಿಡಿಯೋ ಹೇಗಿದೆ ನೋಡಿ..! ಸುದೀಪ್ ಮುಂದೆಯೂ ಸುಳ್ಳು ಹೇಳಿದರೆ ಸಂತೋಷ್..?

ಕನ್ನಡದ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಗಮನ ಸೆಳೆದಿರುವ ಬಿಗ್ ಬಾಸ್ ಈ ಕಾರ್ಯಕ್ರಮ ತುಂಬಾನೆ ಪ್ರಸಿದ್ಧಿ ಪಡೆದಿರುವ ರಿಯಾಲಿಟಿ ಶೋ ಆಗಿದೆ. ಒಟ್ಟು ಒಂಬತ್ತು ಸೀಸನ್ ಗಳನ್ನು ಮುಗಿಸಿರುವ ಬಿಗ್ಬಾಸ್ ಈ ಬಾರಿ ಹತ್ತಕ್ಕೇ ಕಾಲಿಟ್ಟಿದ್ದು ಆರಂಭವಾದ ಎರಡು ಮೂರು ವಾರಗಳಲ್ಲಿಯೇ ತನ್ನ ಗಮನವನ್ನು ಬಿಗ್ ಬಾಸ್ ಪ್ರಿಯರಿಂದ ಪಡೆದಿದೆ. ಹೌದು ಒಂದರ ಮೇಲೊಂದರಂತೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬಿಗ್ ಬಾಸ್ ಪ್ರತಿದಿನ ಎಲ್ಲಾ ಎಪಿಸೋಡ್ ಗಳನ್ನು ಕಾಯುವಂತೆ, ಪ್ರತಿದಿನ ಸ್ಪರ್ದಿಗಳು ಏನು ಮಾಡುತ್ತಾರೆ ಏನು ಈ ದಿನ ಮಾಡುವುದಿಲ್ಲ ಎನ್ನುವಂತೆ ಕಾತರದಿಂದ ಕಾಯುವಂತೆ ಈಗಾಗಲೇ ರಿಯಾಲಿಟಿ ಶೋ ಬಿಗ್ ಬಾಸ್ ಗೆದ್ದಿದೆ ಎನ್ನಬಹುದು.   

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ವರ್ತೂರು ಸಂತೋಷ್ ಅವರು ಹೋಗಿದ್ದರು. ಒಂದು ವಾರದ ಹಿಂದಷ್ಟೇ ಅವರನ್ನು ಬಿಗ್ ಬಾಸ್ ಮನೆಯಿಂದ ಸೀದಾ ಅರೆಸ್ಟ್ ಮಾಡಿಕೊಂಡು ಹುಲಿ ಉಗುರಿನ ವಿಚಾರವಾಗಿ ವಿಚಾರಣೆ ನಡೆಸಲಾಯಿತು. ಮತ್ತೆ ಬೇಲ್ ಮೂಲಕ ಬಿಗ್ ಬಾಸ್ ಮನೆಗೆ ಸೀದಾ ಜೈಲಿನಿಂದ ಬಂದ ಈ ವರ್ತೂರು ಸಂತೋಷ್ ಅವರು ನಿನ್ನೆ ಮೊನ್ನೆ ನಾನು ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ, ಹೊರಗಡೆ ಹೋಗುತ್ತೇನೆ ಎಂದು ತುಂಬಾನೇ ಕಣ್ಣೀರು ಹಾಕಿದ್ದನ್ನ ನೀವೂ ಸಹ ನೋಡಿದ್ದಿರಿ.

ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ನಾನು ಇನ್ನೂ ಕೂಡ ಮದುವೆ ಆಗಿಲ್ಲ ಎನ್ನುವ ವಿಚಾರವನ್ನು ಇದೆ ವರ್ತೂರು ಸಂತೋಷ್ ಅವರು ಹೇಳಿಕೊಂಡಿದ್ದರು ಎನ್ನಲಾಗಿ ಕೇಳಿ ಬಂದಿದೆ. ಆದ್ರೆ ಈಗ ಕೇಳಿ ಬರುತ್ತಿರುವ ಹಾಗೆ ಈಗಾಗಲೇ ವರ್ತೂರು ಅವರಿಗೆ ಮದುವೆ ಆಗಿದೆ ಎಂದು ಮಾಧ್ಯಮದಲ್ಲಿ ಕೆಲವರು ಈ ಕುರಿತು ಹೆಚ್ಚು ಚರ್ಚೆ ನಡೆಸುತ್ತಿದ್ದಾರೆ. ಹಾಗೆ ಸುದೀಪ ಅವರ ಮುಂದೆ ಕೂಡ ಸುಳ್ಳು ಹೇಳಿದನಲ್ಲ ಸರ್, ಅವನ ಎಂತಹ ಮನುಷ್ಯ, ಅವನು ಯಾವ ರೈತ ಅಲ್ಲ, ಅವನು ಏನು ಬೇಳಿದೆ ಇಲ್ಲ ಸುಮ್ಮನೆ ಅದೆಲ್ಲ ಪ್ರಚಾರಕ್ಕಾಗಿ ಎಂದು ಅವರ ಮಾವ ಎನ್ನಲಾದ ಹುಡುಗಿ ತಂದೆ ಸೋಮನಾಥ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ..

ವರ್ತೂರು ಸಂತೋಷ್ ಅವರು ಮದುವೆಯಾಗಿರುವ ಮದುವೆ ವಿಡಿಯೋ ಎನ್ನಲಾದ ಒಂದಿಷ್ಟು ದೃಶ್ಯ ಬಾರಿ ವೈರಲ್ ಸಹ ಆಗುತ್ತಿವೆ . ಇದರಲ್ಲಿ ಎಷ್ಟು ಸತ್ಯ ಸುಳ್ಳು ಇದೆ ಇದಕ್ಕೆಲ್ಲ ವರ್ತೂರು ಸಂತೋಷವರೇ ಉತ್ತರ ನೀಡಬೇಕಾಗಿದೆ. ಅವರು ಹೊರಗಡೆ ಬಂದ ಬಳಿಕ ಈ ವಿಚಾರ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುವುದಂತೂ ಖಚಿತ.ವರ್ತೂರು ಸಂತೋಷ್ ಅವರು ಮದುವೆಯಾಗಿ ಮಗು ಕೂಡ ಹೊಂದಿದ್ದಾರೆ ಎನ್ನಲಾಗಿ ಕೆಲವು ಕಡೆ ಮಾತು ಕೇಳಿ ಬರುತ್ತಿದೆ.. ಜೊತೆಗೆ ಆ ಮದುವೆ ವಿಡಿಯೋ ಹೇಗಿದೆ ಗೊತ್ತಾ..? ನೋಡಿ ವಿಡಿಯೋ. ಈ ಬಗ್ಗೆ ಏನನ್ನೂತೀರಿ ಈ ವಿಡಿಯೋ ನೋಡಿ ಹೇಳಿ. ಜೊತೆಗೆ ಸುದೀಪ ಅವರ ಮುಂದೆಯೂ ಕೂಡ ಸಂತೋಷ ಆ ರೀತಿ ಹೇಳಿ ಎಲ್ಲರಿಗೂ ನಿಜಕ್ಕೂ ಯಾಮರಿಸಿದ್ದಾರ ಎಂದು ಕಾದು ನೋಡಬೇಕು...