Govinde Gowda : ನಟ ಗೋವಿಂದೇಗೌಡ ಕೆಜಿಎಫ್ ದೊಡ್ಡಮ್ಮ ಮರು ಸೃಷ್ಟಿ ಮಾಡಿದ ದೃಶ್ಯ ಹೇಗಿದೆ ನೋಡಿ ?
Updated:Tuesday, June 14, 2022, 16:41[IST]

ಸರಿಗಮಪ ಖ್ಯಾತಿಯ ನಿರೂಪಕಿ ಅನುಶ್ರೀ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಜೋಡಿ ನಂಬರ್1 ಕಾರ್ಯಕ್ರಮ ಈಗಾಗಲೇ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಹೌದು ಕಳೆದವಾರ ಅರ್ಜುನ್ ಜನ್ಯ ಮತ್ತು ನಿರೂಪಕಿ ಅನುಶ್ರೀಯವರು ಒಟ್ಟಿಗೆ ಸೇರಿ ಪ್ರೊಮೋ ಒಂದ್ರಲಿ ಕಾಣಿಸಿಕೊಂಡಾಗ ಮತ್ತೊಂದು ಮನರಂಜನೆ ನೀಡುವ ಕಾರ್ಯಕ್ರಮ ಬರುವುದಾಗಿ ಎಲ್ಲರಿಗೂ ಖಾತ್ರಿಯಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆಲ ಜೋಡಿಗಳನ್ನ ಕರೆಸಿ ಕಿರುತೆರೆಯಲ್ಲಿ ಮತ್ತೊಂದು ವಿಶೇಷ ಪ್ರೋಗ್ರಾಮ್ ಮಾಡುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಈ ಮುಂಚೆ ಮಿಂಚಿರುವ ಕೆಲ ಕಿರುತೆರೆ ಕಲಾವಿದರನ್ನು ಕೂಡ ಈ ಕಾರ್ಯಕ್ರಮದಲ್ಲಿ ಕರೆತರಲಾಗಿದ್ದು, ಕಾರ್ಯಕ್ರಮ ಸಕ್ಕತ್ತಾಗಿ ಮೂಡಿಬರುತ್ತಿದೆ ಎಂದು ಹೇಳಬಹುದು. ಹೌದು ಎಪಿಸೋಡು ಒಂದರಲ್ಲಿ ಈಗಾಗಲೇ ಹಿರಿಯ ನಟಿ ಮಾಳವಿಕಾ ಅವಿನಾಶ್ ಅವರು ಕಾಣಿಸಿದ್ದು, ಗೆಸ್ಟ್ ಆಗಿ ಪ್ರೇಮ್ ಅವರು ಸಹ ಬಂದಿದ್ದರು. ಜೊತೆಗೆ ಜನ್ಯಾಜಿ ಮತ್ತು ಅನುಶ್ರೀ ಅವರು ಕೂಡ ಪ್ರಸ್ತುತ ರಿದ್ದರು. ಇದೀಗ ವೇದಿಕೆ ಮೇಲೆ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಾಮಿಡಿ ನಟ, ಅಟೆಂಡರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗೋವಿಂದೇಗೌಡ ಜೊತೆಗೆ ಅವರ ಪತ್ನಿ ಕೂಡ ಕಾಣಿಸಿದ್ದಾರೆ. ಹೌದು ಕೆಜಿಎಫ್ ಸಿನಿಮಾ ಈಗಾಗಲೇ ವಿಶ್ವಮಟ್ಟದಲ್ಲಿ ದಾಖಲೆ ಮಾಡಿದ್ದು, ಇದರ ಸ್ಪೂಪ್ ವಿಡಿಯೋವನ್ನು ಜೋಡಿ ನಂಬರ್ ವನ್ ವೇದಿಕೆ ಮೇಲೆ ಪ್ರಸ್ತುತಪಡಿಸಲಾಗಿದೆ.
ನಟ ಗೋವಿಂದೇಗೌಡ ಅವರ ಬಗ್ಗೆ ಅವರ ನಟನೆ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಹಾಗೂ ಅವರ ಪತ್ನಿ ಜೊತೆಗೆ ನಟ ಪ್ರಕಾಶ್ ರೈ ಮತ್ತು ಮಾಳವಿಕಾ ಅವಿನಾಶ್ ಅವರ ಪಾತ್ರ ವೇದಿಕೆ ಮೇಲೆ ನಗೆಯಲ್ಲಿ ತೇಲಾಡುವಂತೆ ಮಾಡಿತು ಎನ್ನಬಹುದು. ಅಸಲಿಗೆ ಕೆಜಿಎಫ್ ಸ್ಫೂಫ್ ಮಾಡಿದ ಈ ತಂಡವು ಯಾವ ರೀತಿ ಪ್ರೇಕ್ಷಕರನ್ನು ಮತ್ತು ಜಡ್ಜಸ್ ಗಳನ್ನು ನಗೆಯಲ್ಲಿದೆ ತೇಲಾಡುವಂತೆ ಮಾಡಿತು ಗೊತ್ತಾ.? ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ನೀವು ಕೂಡ ಸಕ್ಕತ್ ಎಂಜಾಯ್ ಮಾಡುತ್ತೀರಾ. ಕೆಜಿಎಫ್ ಸ್ಪೂಫ್ ವಿಡಿಯೋಗೆ ನೆಟ್ಟಿಗರು ಕೂಡ ಫಿದಾ ಆಗಿದ್ದು ಕನ್ನಡ ಕಿರುತೆರೆ ಮತ್ತೊಂದು ಮನರಂಜನೆ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೇನೇ ಈ ಜೋಡಿ ನಂಬರ್ ಒನ್ ಕಾರ್ಯಕ್ರಮ ಹೇಗೆ ಮೂಡಿಬರುತ್ತಿದೆ ಎಂಬುದಾಗಿಯೂ ಸಹ ನಿಮ್ಮ ಅನಿಸಿಕೆಯನ್ನು ಸಹ ಹೇಳಿ ಧನ್ಯವಾದಗಳು...( video credit : zee kannada )